ನೈತಿಕ-ಆಧ್ಯಾತ್ಮಿಕ ವಿಕಸನದ ದ್ಯೋತಕ
ಧರ್ಮಸ್ಥಳ: ಶಾಂತಿವನ ಟ್ರಸ್ಟ್
Team Udayavani, May 5, 2019, 4:10 AM IST
ಬೆಳ್ತಂಗಡಿ: ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ.), ಶ್ರೀಕ್ಷೇತ್ರ ಧರ್ಮಸ್ಥಳವು ನೈತಿಕ ಶಿಕ್ಷಣಕ್ಕೆ ಮಹತ್ವ ನೀಡುವಲ್ಲಿ ಹೆಸರುವಾಸಿಯಾಗಿದೆ. 1985ರಲ್ಲಿ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಸ್ಥಾಪನೆಗೊಂಡಿದೆ.
ಕಾರ್ಯಕ್ರಮಗಳು ಮಾದರಿಯಾಗಬೇಕು ಎಂಬುದು ಶಾಂತಿವನ ಟ್ರಸ್ಟ್ನ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕನಸು. ಹೇಮಾವತಿ ವೀ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಟ್ರಸ್ಟಿಗಳಾಗಿರುವ ಈ ವಿಶ್ವಸ್ಥ ಸಮಿತಿಯ ಮಾರ್ಗದರ್ಶನದಲ್ಲಿ ಶಾಂತಿವನ ಟ್ರಸ್ಟ್ ಅನ್ನು ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಯೋಗ ಮತ್ತು ನೈತಿಕ ಮೌಲ್ಯ ಶಿಕ್ಷಣ ಶಿಕ್ಷಣವನ್ನು ಶಾಲಾ ವಿದ್ಯಾರ್ಥಿಗಳಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ 1990ರಲ್ಲಿ ತರಬೇತಿ ಯೋಜನೆ ಆರಂಭಿಸಲಾಯಿತು. ಇದಕ್ಕಾಗಿ 1999ರಿಂದ ಪ್ರತಿ ವರ್ಷ ಅಂಚೆ-ಕುಂಚ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ನೀಡಿದ ವಿಷಯದ ಬಗ್ಗೆ ಅಂಚೆ ಕಾರ್ಡ್ನಲ್ಲಿ ಚಿತ್ರ ಬಿಡಿಸಿ ಕಳುಹಿಸುವ ಈ ಸ್ಪರ್ಧೆಯು 4 ವಿಭಾಗಗಳಲ್ಲಿ ನಡೆಯುತ್ತದೆ. ಈ ವರೆಗೆ ಅಂಚೆಕುಂಚ ಸ್ಪರ್ಧೆಗಳಲ್ಲಿ 2,09,685 ಮಂದಿ ಭಾಗವಹಿಸಿದ್ದಾರೆ.
ಮಕ್ಕಳಿಗೆ ಪ್ರೋತ್ಸಾಹ ನೀಡಲು ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗ ಹಾಗೂ ಕಾಲೇಜು ವಿಭಾಗ, ಸಾರ್ವಜನಿಕರಿಗಾಗಿ ‘ಸಾರ್ವಜನಿಕ ವಿಭಾಗ’ದಲ್ಲಿಯೇ ಪ್ರತ್ಯೇಕ ಸ್ಪರ್ಧೆಯಿದೆ. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ| ಐ. ಶಶಿಕಾಂತ ಜೈನ್ ಪ್ರತಿವರ್ಷ ಮಕ್ಕಳ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಪಂಚಮುಖೀ ವ್ಯಕ್ತಿತ್ವ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಶಾರೀರಿಕ, ಮಾನಸಿಕ, ಬೌದಿ್ಧಕ, ಭಾವನಾತ್ಮಕ, ನೈತಿಕ, ಆಧ್ಯಾತ್ಮಿಕ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಈ ಕಾರ್ಯಕ್ರಮದಡಿ ನಡೆಸಿಕೊಂಡು ಬರಲಾಗುತ್ತಿದೆ.
ಸಾಧನೆಗೆ ಸಂದ ಗೌರವಗಳು
ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಜಿಂದಾಲ್ ರಾಷ್ಟ್ರೀಯ ಪ್ರಶಸ್ತಿ, ಗಿನ್ನೆಸ್ ಪುರಸ್ಕಾರ ಸಹಿತ ಹತ್ತು ಹಲವು ಪ್ರಶಸ್ತಿ- ಪುರಸ್ಕಾರಗಳನ್ನು ಸಂಸ್ಥೆ ಮುಡಿಗೇರಿಸಿಕೊಂಡಿದೆ.
ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಶ್ರೀಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಮೇ 5ರಂದು ಬೆಳಗ್ಗೆ 11ಕ್ಕೆ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ 17ನೇ ರಾಜ್ಯಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಸಮಾರಂಭ ನಡೆಯಲಿದೆ. ಬಳಿಕ ಹಿಂದಿನ ವರ್ಷದಲ್ಲಿ ಪುರಸ್ಕೃತರಾದ ಕುಂಚ ಕಲಾವಿದರ ಚಿತ್ರ ಸಂತೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಚಲನಚಿತ್ರ ಕಲಾವಿದ ಡಾ| ಮುಖ್ಯಮಂತ್ರಿ ಚಂದ್ರು ವಿಜೇತರನ್ನು ಪುರಸ್ಕರಿಸಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಗಂಜೀಫ ರಘುಪತಿ ಭಟ್ ಶುಭಾಶಂಸನೆಗೈಯ್ಯಲಿದ್ದಾರೆ.
ವಿಶೇಷ ಆಕರ್ಷಣೆ: ಕುಂಚ-ಗಾನ- ನೃತ್ಯ ವೈಭವ
ಕುಂಚ-ಗಾನ- ನೃತ್ಯ ವೈಭವ ಜರಗಲಿದೆ. ಕುಂಚ: ಶ್ರೀ ಗಂಜೀಫ ರಘುಪತಿ ಭಟ್ ಮತ್ತು ವೇಗದ ಚಿತ್ರಕಲಾವಿದೆ ಶಬರಿ ಗಾಣಿಗ, ಯಕ್ಷ ಗಾಯನ: ಕಾವ್ಯಶ್ರೀ ಅಜೇರು, ಯಕ್ಷ ನೃತ್ಯ: ಯಕ್ಷಕಲಾ ತಂಡ, ಶ್ರೀ ಧ.ಮಂ. ಕಾಲೇಜು, ಉಜಿರೆ ಭಾಗವಹಿಸುವರು.
ಇಂದು ಅಂಚೆ-ಕುಂಚ ಸ್ಪರ್ಧೆ ಪುರಸ್ಕಾರ
ಶ್ರೀ ಧ. ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ಶ್ರೀಕ್ಷೇತ್ರ ಧರ್ಮಸ್ಥಳ ಇದರ ವತಿಯಿಂದ ಮೇ 5ರಂದು ಬೆಳಗ್ಗೆ 11ಕ್ಕೆ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ 17ನೇ ರಾಜ್ಯಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಸಮಾರಂಭ ನಡೆಯಲಿದೆ. ಬಳಿಕ ಹಿಂದಿನ ವರ್ಷದಲ್ಲಿ ಪುರಸ್ಕೃತರಾದ ಕುಂಚ ಕಲಾವಿದರ ಚಿತ್ರ ಸಂತೆ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಚಲನಚಿತ್ರ ಕಲಾವಿದ ಡಾ| ಮುಖ್ಯಮಂತ್ರಿ ಚಂದ್ರು ವಿಜೇತರನ್ನು ಪುರಸ್ಕರಿಸಲಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಗಂಜೀಫ ರಘುಪತಿ ಭಟ್ ಶುಭಾಶಂಸನೆಗೈಯ್ಯಲಿದ್ದಾರೆ. ವಿಶೇಷ ಆಕರ್ಷಣೆ: ಕುಂಚ-ಗಾನ- ನೃತ್ಯ ವೈಭವ ಕುಂಚ-ಗಾನ- ನೃತ್ಯ ವೈಭವ ಜರಗಲಿದೆ. ಕುಂಚ: ಶ್ರೀ ಗಂಜೀಫ ರಘುಪತಿ ಭಟ್ ಮತ್ತು ವೇಗದ ಚಿತ್ರಕಲಾವಿದೆ ಶಬರಿ ಗಾಣಿಗ, ಯಕ್ಷ ಗಾಯನ: ಕಾವ್ಯಶ್ರೀ ಅಜೇರು, ಯಕ್ಷ ನೃತ್ಯ: ಯಕ್ಷಕಲಾ ತಂಡ, ಶ್ರೀ ಧ.ಮಂ. ಕಾಲೇಜು, ಉಜಿರೆ ಭಾಗವಹಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
SC: ಲಾಟರಿ ಕಿಂಗ್ ಮಾರ್ಟಿನ್ ಕೇಸ್: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್ ತಡೆ
Malayalam ಕಥೆಗಾರ, ಸಾಹಿತಿ ವಾಸುದೇವನ್ ನಾಯರ್ ವಿಧಿವಶ
Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.