ಕುಕ್ಕೆಯಲ್ಲಿನ್ನು ಸಂಜೆಯೂ ಆಶ್ಲೇಷಾ ಬಲಿ
Team Udayavani, Jul 1, 2018, 6:00 AM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರ ಅನುಕೂಲಕ್ಕಾಗಿ ಜು. 5ರಿಂದ ಆಶ್ಲೇಷಾ ಬಲಿ ಸೇವೆಯನ್ನು ಸಾಯಂಕಾಲದ ವೇಳೆಯಲ್ಲೂ ನಡೆಸಲಾಗುವುದು ಎಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಗುಲಕ್ಕೆ ಹರಕೆ ಸೇವೆಗಳನ್ನು ಪೂರೈಸಲು ಬರುವ ಭಕ್ತರ ಪ್ರಮಾಣ ಅಧಿಕವಾಗಿದೆ. ಪ್ರತಿನಿತ್ಯ ಸುಮಾರು 400-500 ಮಂದಿ ಆಶ್ಲೇಷಾ ಬಲಿ ಸೇವೆ ಸಲ್ಲಿಸುತ್ತಾರೆ. ವಿಶೇಷ ದಿನ ಹಾಗೂ ಸಾರ್ವಜನಿಕ ರಜಾ ದಿನಗಳಲ್ಲಿ ಇದರ ಪ್ರಮಾಣ 1,200ರಿಂದ 1,400ರ ತನಕವೂ ಏರಿಕೆಯಾಗುತ್ತಿದೆ. ಈ ಕಾರಣದಿಂದ ಸಾಯಂಕಾಲವೂ ಸೇವೆಗೆ ಅವಕಾಶ ಕಲ್ಪಿಸಲಾಗಿದೆ ಸಾಯಂಕಾಲ ಹೊತ್ತು ಆಶ್ಲೇಷಾ ಬಲಿ ಸೇವೆ ಆರಂಭಿಸಲು ಅಷ್ಟ ಮಂಗಲ ಚಿಂತನೆಯನ್ನು ಇಡಲಾಗಿದ್ದು, ಪ್ರಶ್ನೆಯಲ್ಲಿ ಕಂಡುಬಂದ ಕೆಲ ಪ್ರಾಯಶ್ಚಿತ್ತಾದಿಗಳನ್ನು ನೆರವೇರಿಸಲಾಗಿದೆ. ಜು. 4ರಂದು ದೇವರಿಗೆ ದ್ರವ್ಯಕಲಶಾಭಿಷೇಕ ನೆರವೇರಿಸಿ ಸಂಜೆ ದೇಗುಲದ ವತಿಯಿಂದ ಆಶ್ಲೇಷಾ ಬಲಿ ಸೇವೆ ನಡೆಸಲಾಗುವುದು. ಮರುದಿನದಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು. ಬೆಳಗ್ಗೆ ನಡೆಯುವ ಆಶ್ಲೇಷಾ ಬಲಿ ಸೇವೆ ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 12.30ರಿಂದ 4.30ರ ತನಕ ಆಯಾ ದಿನದ ಸೇವಾ ರಶೀದಿ ನೀಡಲಾಗುತ್ತದೆ. 5 ಗಂಟೆಗೆ ಸೇವೆ ಆರಂಭಗೊಳ್ಳುತ್ತದೆ. ಸೇವಾ ಶುಲ್ಕ (400 ರೂ.) ದಲ್ಲಾಗಲೀ ವಿಧಿ ವಿಧಾನಗಳಲ್ಲಾಗಲೀ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರತಿ ತಿಂಗಳ ಶುದ್ಧ ಷಷ್ಠಿ, ಏಕಾದಶಿ ಇತ್ಯಾದಿ ಉಪವಾಸ ದಿನಗಳು ಮತ್ತು ವಾರ್ಷಿಕ ಜಾತ್ರೆ ಸಮಯದ ಕೊಪ್ಪರಿಗೆ ಏರಿದ ದಿನದಿಂದ ಮಹಾಸಂಪ್ರೋಕ್ಷಣೆ ವರೆಗಿನ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಈ ಸೇವೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.