‘ಪ್ರತೀ ಫೆ. 22ರಂದು ಸಾಹಿತ್ಯ ವಿಮರ್ಶೆ ನಡೆಯಲಿ’
Team Udayavani, Dec 6, 2017, 3:24 PM IST
ಕೇಪು: ಕೀರ್ತಿಶೇಷ ಪಂಜೆ ಮಂಗೇಶರಾಯರು ಬಂಟ್ವಾಳ ತಾಲೂಕಿನ ಹೆಮ್ಮೆಯ ಕವಿ. ಅವರ ಜನ್ಮ ದಿನಾಚರಣೆ ತಾಲೂಕಿನಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿ. ಪ್ರತೀ ಫೆ.22ರಂದು ಅವರ ಸಾಹಿತ್ಯಗಳ ವಿಮರ್ಶೆ ನಡೆಯುವಂತಾಗಲಿ ಎಂದು ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ, ಸಮ್ಮೇಳನಾಧ್ಯಕ್ಷೆ ಯಶಸ್ವಿ ಆಗ್ರಹಿಸಿದರು.
ಅವರು ಮಂಗಳವಾರ ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯ ಚೆನ್ನಂಗೋಡು ಶ್ರೀಕೃಷ್ಣ ಚೆನ್ನಂಗೋಡು ದ್ವಾರ, ಅಡ್ಯನಡ್ಕ ವೆಂಕಟೇಶ ಪೈ ಸಭಾಂಗಣ, ಪಲಿಮಾರು ಜನಾರ್ದನ ಪೈ ವೇದಿಕೆ ಯಲ್ಲಿ ಮಕ್ಕಳ ಲೋಕ, ಬಂಟ್ವಾಳ ತಾ| ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ ಬಂಟ್ವಾಳ ತಾ| ಮಟ್ಟದ 13ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತರಗತಿವಾರು ಶಿಕ್ಷಕ ನೀತಿ ಜಾರಿಗೆ ಬರಲಿ
ಮಕ್ಕಳು ಸಾಹಿತ್ಯದಲ್ಲಿ ಆಸಕ್ತಿ ಕುದುರಿಸಿಕೊಳ್ಳಬೇಕು. ತಮ್ಮ ಸಮಯವನ್ನು ಅನಗತ್ಯ ವಾಗಿ ಟಿ.ವಿ., ಮೊಬೆ„ಲ್, ಕ್ರಿಕೆಟ್, ಸಮಾರಂಭ ಎಂದು ಪೋಲಾಗದಂತೆ ಎಚ್ಚರಿಕೆ ವಹಿಸಿ ಓದುವ ಗುಣರೂಢಿಸಿಕೊಳ್ಳಬೇಕು. ಹೆತ್ತವರು ಮಕ್ಕಳಿಂದ ಪಠ್ಯವೊಂದನ್ನೇ ಓದಿಸಲು ಒತ್ತಡ ಹೇರಬಾರದು. ಜ್ಞಾನವರ್ಧನೆಗೆ ಧಾರಾಳವಾಗಿ ಗ್ರಂಥಾಲಯ ಬಳಕೆಯಾಗಬೇಕು. ಜಾಲತಾಣಗಳಲ್ಲಿ ಸಿಗುವ ಜ್ಞಾನ ಮೂಲ ಹುಡುಕಿ ಜಾಣರಾಗಬೇಕು. ಅನುಭವ ದಾಖಲಿಸಿಟ್ಟುಕೊಂಡು ಸಾಹಿತ್ಯ ರಚನೆಯಲ್ಲೂ ತೊಡಗಿಕೊಳ್ಳಬೇಕು. ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಬೇಕು. ನಮ್ಮಲ್ಲೂ ಕೇರಳ ಮಾದರಿಯಲ್ಲಿ ವಿಷಯವಾರು ಮತ್ತು ತರಗತಿವಾರು ಶಿಕ್ಷಕ ಎಂಬ ನೀತಿ ಜಾರಿಗೆ ತರಬೇಕು ಎಂದರು.
ಮನೆ ಮನೆಗಳಲ್ಲಿ ಸಾಹಿತ್ಯಕ್ಕೆ ಬೆಂಬಲ
ಕನ್ನಡದ ಬಗ್ಗೆಯೇ ಮಾತನಾಡಲು ಹೋದರೆ ಇಂದು ಮನೆ ಮನೆಗಳಲ್ಲಿ ಸಾಹಿತ್ಯಕ್ಕೆ ಬೆಂಬಲ ಕ್ಷೀಣಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸರಕಾರದ ಶಿಕ್ಷಣ ನೀತಿ. ಈ ತನಕ ಎಂಟು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಅರುವತ್ತು ಭಾರತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳಿದ್ದಾರೆ. ಈ ಪ್ರಶಸ್ತಿಗಳ ಪರಂಪರೆ ಮುಂದುವರಿಯಲು ನಮ್ಮ ಸಾಹಿತ್ಯ ರಚನಾ ಶಕ್ತಿ ದೃಢಗೊಳ್ಳಬೇಕು ಎಂದರು.
ಸಮ್ಮೇಳನ ಉದ್ಘಾಟನೆ
ಫಾತಿಮತ್ ತಬ್‌ಶೀರ ಸಮ್ಮೇಳನ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸ್ನೇಹಿತ ವಿಶ್ವಜಿತ್, ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಬೇಕು. ಪಠ್ಯದ ಜತೆ ಆದರ್ಶ ಕವಿ, ಸಾಹಿತಿಗಳ ಪುಸ್ತಕ ಓದುವುದರಿಂದ ಶಬ್ದ ಭಂಡಾರ, ಬರವಣಿಗೆ ಶೈಲಿ ಬೆಳೆಸಲು ಸಾಧ್ಯ ಎಂದರು. ಬಂಟ್ವಾಳ ತಾ| ಕಸಾಪ ಅಧ್ಯಕ್ಷ ಕೆ.ಮೋಹನ್ ರಾವ್ ಆಶಯ ನುಡಿಗಳನ್ನಾಡಿದರು. ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಮಕ್ಕಳ ಕೃತಿ ಬಿಡುಗಡೆಗೊಳಿಸಿದರು.
ಕೇಪು ಗ್ರಾ.ಪಂ. ಅಧ್ಯಕ್ಷ ತಾರಾನಾಥ ಆಳ್ವ ಮೆರವಣಿಗೆ ಉದ್ಘಾಟಿಸಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಅಬ್ದುಲ್ ಕರೀಂ ಕುದ್ದುಪದವು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ, ಮಾರ್ಗದರ್ಶಕ ಆದ ವಿಟ್ಲ ಸುಬ್ರಾಯ ಪೈ, ಪ್ರಧಾನ ಕಾರ್ಯದರ್ಶಿ ಮಾಲತಿ ಕಾಂತಡ್ಕ, ಕಾರ್ಯದರ್ಶಿ ರಮೇಶ್ ಎಂ. ಬಾಯಾರು, ಮಕ್ಕಳ ಲೋಕದ ಭಾಸ್ಕರ ಅಳ್ವಳ, ಪ್ರಾ. ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಶೆಟ್ಟಿ ಪಡಿಬಾಗಿಲು, ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ಕೆ.ಜಿ., ವಿಶ್ವನಾಥ ಗೌಡ ಉಪಸ್ಥಿತರಿದ್ದರು. ಮಕ್ಕಳ ಲೋಕದ ಅಧ್ಯಕ್ಷ ಮಹಾಬಲ ಭಟ್ ಪ್ರಸ್ತಾವನೆಗೈದರು. ಸಾತ್ವಿಕ್ ವಿ.ನಾಯಕ್ ಸ್ವಾಗತಿಸಿದರು. ಅಮೃತಲಕ್ಷ್ಮೀ ವಂದಿಸಿದರು. ವಾಣಿಶ್ರೀ ಮತ್ತು ಬಳಗ ಆಶಯಗೀತೆ ಹಾಡಿದರು. ಆಯಿಷತ್ ರಿಯಾನ ಕಾರ್ಯಕ್ರಮ ನಿರ್ವಹಿಸಿದರು.
ವಿಶೇಷತೆಗಳು
ಕಲ್ಲಡ್ಕ ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಬಳಿಯಿಂದ ಸಮ್ಮೇಳನ ವೇದಿಕೆಗೆ ಭವ್ಯ ಕನ್ನಡ ಭುವನೇಶ್ವರಿಯ ಮೆರವಣಿಗೆ ಸಾಗಿಬಂತು.
ಕನ್ನಡ ಭುವನೇಶ್ವರಿಯನ್ನು ಸುಂದರವಾದ ಚಿಕ್ಕ ಗುಡಿಸಲಿನಲ್ಲಿ ಅಲಂಕೃತ ಗೊಳಿಸಿ, ಮೇಲೆ ಕನ್ನಡ ಧ್ವಜವನ್ನು ಹಾರಿಸಿದ್ದು ವಿಶೇಷವಾಗಿ ಆಕರ್ಷಣೆಗೊಳಗಾಗಿತ್ತು.
ಯಶಸ್ವಿ ಬರೆದ ಯಶಸ್ಸು, ಗೌರೀದೇವಿ ಬರೆದ ಪುಟಾಣಿ, ಅನನ್ಯ ಬಿ.ಮಾಣಿಲ ಬರೆದ ಮುಂಜಾನೆ, ಪ್ರವೀಣ್ ಎಂ.ಕೇಪು ಅವರು ಬರೆದ ಸವಿ ಸವಿ, ಸಮ್ಮೇಳನದ ಸ್ಮರಣ ಸಂಚಿಕೆ ಅಂಗಳ ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಗಿಸಮ್ಮೇಳನದಲ್ಲಿ ಮಕ್ಕಳೇ ಸ್ವಾಗತ, ಕಾರ್ಯಕ್ರಮ ನಿರ್ವಹಣೆ, ವಂದನೆ, ಮತ್ತು ಇತರ ಎಲ್ಲ ಕಾರ್ಯಗಳನ್ನು ನಿಭಾಯಿಸಿದ್ದರು.
ಮಕ್ಕಳ ಸಾಹಿತ್ಯ ಸಮ್ಮೇಳನಕ್ಕಾಗಿ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.ಸುತ್ತ ಮುತ್ತಲ ಪ್ರದೇಶದಲ್ಲಿ ಬ್ಯಾನರ್ ಅಳವಡಿಸಲಾಗಿತ್ತು. ಪುಸ್ತಕ ಪ್ರದರ್ಶನ, ಮಾರಾಟ, ಚುಕ್ಕಿಚಿತ್ರ ಪ್ರದರ್ಶನ ಮಳಿಗೆಗಳಿದ್ದವು.
ಸಮ್ಮೇಳನದಲ್ಲಿ ಮಕ್ಕಳು ತುಂಬಿ ತುಳುಕಿದ್ದರು. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವೆನಿಸಿತು.
ಉಪಾಹಾರ, ಊಟೋಪಚಾರವೂ ಆತಿಥ್ಯವೂ ಮಾದರಿಯಾಗಿತ್ತು.
ಸಾಹಿತ್ಯ ಸಮ್ಮೇಳನವೆಂದರೆ ಸಾಂಸ್ಕೃತಿಕ ಹಬ್ಬ. ಸಾಹಿತ್ಯದ ಅರಿವು ಮೂಡಿಸುವ ಒಂದು ಶೆ„ಕ್ಷಣಿಕ ಜಾತ್ರೆ. ಮಾತುಗಳಿಲ್ಲದೆ ಮೌನದಿಂದ ಈ ಪ್ರಪಂಚ ಸಾಗಲು ಸಾಧ್ಯವಿಲ್ಲ. ಮಾತು ಅನಿವಾರ್ಯ. ಸಾಹಿತ್ಯ ಎನ್ನುವುದು ನಮ್ಮ ಕನ್ನಡಕ್ಕೆ ಮಾತ್ರವೇ ಮೀಸಲಲ್ಲ. ಪ್ರಪಂಚದ ಎಲ್ಲ ಭಾಷೆಗಳು ಸಮೃದ್ಧವಾದ ಸಾಹಿತ್ಯ ಪ್ರಕಾರ ಹೊಂದಿವೆ.
–ಯಶಸ್ವಿ, ಸಮ್ಮೇಳನಾಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.