ಶಾಪಿಂಗ್ ನಲ್ಲಿ ಉಳಿತಾಯ ಇರಲಿ ಎಲ್ಲರ ಗಮನ
Team Udayavani, Mar 26, 2018, 4:32 PM IST
ಶಾಪಿಂಗ್ ಎಂದರೆ ಯಾರಿಗೆತಾನೇ ಇಷ್ಟವಿಲ್ಲ. ಅದರಲ್ಲೂ ಹೆಣ್ಣು ಮಕ್ಕಳ ಕೈಗೆ ಹಣ ಬಂದರೆ ಸಾಕು ಶಾಪಿಂಗ್ ಗೆ ಹೊರಡುತ್ತಾರೆ. ಹೆಣ್ಣು ಮಕ್ಕಳು ಶಾಪಿಂಗ್ ಮಾಲ್ ಗೆ ಹೋದರೆ ಹಿಂದಿರುಗಿ ಬರುವ ಯೋಚನೆಯಲ್ಲೇ ಇರಲ್ಲ. ಅವರನ್ನು ವಾಪಸ್ ಮನೆಗೆ ಕೊಂಡೊಯ್ಯುವುದೇ ದೊಡ್ಡ ಸಾಹಸ ಎನ್ನುವ ಪುರುಷರು ಅನಗತ್ಯ ಶಾಪಿಂಗ್‌ಗೆ ಕಡಿವಾಣ ಹಾಕು ವುದೇ ಹೆಚ್ಚು. ಹೆಂಗಳೆಯರು ಶಾಪಿಂಗ್ ಮಾಡುವುದರಲ್ಲಿ ನಿಸ್ಸೀಮರಾದರೂ ಉಳಿತಾಯದತ್ತಲೂ ಅವರ ಗಮನ ಇದ್ದೇ ಇರುತ್ತದೆ. ಹಾಗಂತ ಉಳಿತಾಯದ ಯೋಚನೆಯೇ ಹೆಚ್ಚಾದರೆ ಎಲ್ಲದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು. ಅದಕ್ಕಾಗಿ ಖರೀದಿಯ ಜತೆ ಜತೆಗೆ ಉಳಿತಾಯದತ್ತಲೂ ಗಮನವಿದ್ದರೆ ಬದುಕು ಆರಾಮವಾಗುತ್ತದೆ ಎಂಬುದು ಅನುಭವಿಗಳ ಮಾತು.
ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕೂ, ಐಷಾರಾಮಿ ವಸ್ತುಗಳ ಖರೀದಿಗೂ ವ್ಯತ್ಯಾಸವಿದೆ. ಗೃಹಿಣಿಯರು ಹೆಚ್ಚಾಗಿ ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವುದಕ್ಕಾಗಿ ಗಳಿಗೊಮ್ಮೆಯಾದರೂ ಮಾರುಕಟ್ಟೆ ಕಡೆ ತೆರಳುತ್ತಾರೆ. ಯುವತಿಯರು ಬಟ್ಟೆಬರೆಗಳಿಗಾಗಿ ವಾರಕ್ಕೊಮ್ಮೆ ಮಾಲ್ ಗಳತ್ತ ಕಣ್ಣು ಹಾಯಿಸುತ್ತಾರೆ. ಕೈಯಲ್ಲಿ ದುಡ್ಡಿಲ್ಲದಿದ್ದರೂ ಶಾಪಿಂಗ್ ಮಾಡಬೇಕು ಎಂದು ಕನಸು ಕಾಣುವ ಜನರ ಸಂಖ್ಯೆಗೇನೂ ಕಡಿಮೆ ಇಲ್ಲ.
ಶಾಪಿಂಗ್‌ಗಾಗಿ ಮನೆಯಿಂದ ಹೊರಟರೆ ಕೈಯಲ್ಲಿದ್ದ ಹಣ ಹೇಗೆ ಖರ್ಚಾಗುತ್ತದೆ ಎಂಬುದು ತಿಳಿಯುವುದಿಲ್ಲ ಎಂಬುದು ಶಾಪಿಂಗ್‌ಗೆ ಹೋಗುವ ಪ್ರತಿಯೊಬ್ಬರ ಅಳಲು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಬಹಳ ಕಷ್ಟದ ವಿಚಾರ. ಯಾಕೆಂದರೆ ಒಂದು ವಸ್ತು ಖರೀದಿಗೆ ಹೊರ ನಡೆದರೆ 100 ವಸ್ತುಗಳು ಕಣ್ಣ ಮುಂದೆ ಹಾದುಹೋಗುತ್ತವೆ. ಇದರಿಂದಾಗಿ ಖರೀದಿಸಲು ಹೋದ ವಸ್ತುಗಳೊಂದಿಗೆ ಇನ್ನು ಕೆಲವು ವಸ್ತುಗಳು ನಮ್ಮ ಬ್ಯಾಗ್ ಸೇರಿಕೊಳ್ಳುತ್ತವೆ. ಇದರಿಂದ ಕೊನೆಗೆ ಬರುವ ಬಿಲ್ ಪಟ್ಟಿಯೂ ದೊಡ್ಡ ದಿ ರು ತ್ತದೆ. ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿ ಹೋಗುತ್ತದೆ.
ಶಾಪಿಂಗ್‌ನಲ್ಲಿ ಉಳಿತಾಯ ಹೇಗೆ?
· ಮನೆ ಅಥವಾ ಕಚೇರಿಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಖರೀದಿ ಮಾಡುವ ಮುನ್ನ ಮಾಲ್, ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಹೋಲಿಕೆ ಮಾಡಿಕೊಳ್ಳುವುದು ಉತ್ತಮ.
· ಒಂದೇ ವಸ್ತು ಮಾತ್ರ ಖರೀದಿಸಬೇಕು ಎಂದು ತೆರಳುವುದಾದರೆ ಪರ್ಸ್‌ನಲ್ಲಿ ಅದಕ್ಕೆ ಬೇಕಾಗುವಷ್ಟೇ
ಹಣವನ್ನು ಇರಿಸಿಕೊಳ್ಳುವುದು ಒಳ್ಳೆಯದು.
· ಶಾಪಿಂಗ್‌ಗೆ ತೆರಳುವಾಗ ಖರೀದಿಸಬೇಕಿರುವ ವಸ್ತುಗಳ ಪಟ್ಟಿ ಮಾಡಿಕೊಳ್ಳಬೇಕು. ಯಾವ ವಸ್ತು ಬೇಕು ಅದರತ್ತ ಮಾತ್ರ ಗಮನಹರಿಸಬೇಕು.
· ನಾವು ಹಿಂದೆ ಖರೀದಿಸಿದ ವಸ್ತುವನ್ನೇ ಮತ್ತೂಮ್ಮೆ ಖರೀದಿಸದಂತೆ ಎಚ್ಚರ ವಹಿಸಬೇಕು. ಬಟ್ಟೆ ಅಥವಾ ಇನ್ನಿತರ ವಸ್ತುಗಳು ನಮಗೆ ಒಪ್ಪುತ್ತವೆಯೋ ಎಂದು ಪರಿಶೀಲಿಸಿಕೊಳ್ಳಬೇಕು.
· ಮಾಲ್‌ಗಳಲ್ಲಿ ಹಬ್ಬಹರಿದಿನಗಳಲ್ಲಿ ಆಫರ್‌ಗಳಿರುತ್ತವೆ. ಇದರ ಪ್ರಯೋ ಜನ ಪಡೆ ದು ಕೊಂಡರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ.
· ದುಬಾರಿ ವಸ್ತುಗಳ ಖರೀದಿ ಸಮಯದಲ್ಲಿ ಬೇರೆ ಬೇರೆ ಶಾಪ್ ಗಳ ಬೆಲೆಯನ್ನು ಪರಿಶೀಲಿಸಿಕೊಳ್ಳಿ.
· ಉಳಿತಾಯದ ಶಾಪಿಂಗ್ ಮಾಡಬೇಕೆಂದಿದ್ದರೆ ಶಾಪಿಂಗ್‌ಗೆ ತೆರಳುವಾಗ ಕ್ರೆಡಿಟ್‌ಕಾರ್ಡ್ ಬದಲು ಡೆಬಿಟ್ ಕಾರ್ಡ್ ಬಳಸಿ.
.ಡೆಬಿಟ್ ಕಾರ್ಡ್ಗಿಂತ ನಗದು ಬಳಕೆ ಉತ್ತಮ ಎಂಬುದನ್ನು ಮರೆಯದಿರಿ.
· ಶಾಪಿಂಗ್ ಮಾಲ್ ಗಳಲ್ಲಿರುವ ವಿವಿಧ ವೋಚರ್ ಕಾರ್ಡ್ ಗಳ ಲಾಭ ಪಡೆಯಿರಿ. ಇದ ರಿಂದ ಶಾಪಿಂಗ್ ನಲ್ಲಿ ನಿಮಗೆ ವಿಶೇಷ ರಿಯಾಯಿತಿ ಸಿಗಲಿದೆ.
· ಮಾರು ಕಟ್ಟೆ ಹತ್ತಿರದಲ್ಲೇ ಇದ್ದರೆ ನಡೆದುಕೊಂಡೇ ಹೋಗಿ. ಇದರಿಂದ ಉಳಿತಾಯವಾಗುವ ಹಣದಲ್ಲಿ ನೀವು ಬೇರೆ
ಯಾವುದಾದರೂ ವಸ್ತುವನ್ನು ಖರೀದಿಸಬಹುದು.
· ಉಳಿತಾಯದ ನೆಪದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ತರಬೇಡಿ. ದೀರ್ಘ ಕಾಲ ಬಳಸಬಹುದಾದ ವಸ್ತುಗಳಿಗೆ ಕೊಂಚ ಹಣ ಹೆಚ್ಚು ಕೊಟ್ಟು ತಂದರೂ ತೊಂದರೆಯಿಲ್ಲ ಎಂಬುದನ್ನು ಮರೆಯದಿರಿ.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.