ನಿಡ್ಡೋಡಿಗೆ ಸೀಫುಡ್ ಪಾರ್ಕ್ ಬೇಕೆನ್ನುವವರು ಕಾರವಾರಕ್ಕೆ ಹೋಗಿ ಅಧ್ಯಯನ ಮಾಡಲಿ : ಅಭಯಚಂದ್ರ
ನಿಡ್ಡೋಡಿಯ ಪ್ರಸ್ತಾವಿತ ಸೀಫುಡ್ ಪಾರ್ಕ್ ನಿಂದ ಪರಿಸರ ಮಾಲಿನ್ಯ ಖಂಡಿತ
Team Udayavani, Jul 1, 2021, 9:31 PM IST
ಮೂಡುಬಿದಿರೆ : ನಿಡ್ಡೋಡಿಯ ಪ್ರಸ್ತಾವಿತ ಸೀಫುಡ್ ಪಾರ್ಕ್ನಿಂದ ಪರಿಸರ ಮಾಲಿನ್ಯ ವ್ಯಾಪಕವಾಗಿ ಹರಡಲಿದೆ. ಜಲ ಸಂಪನ್ಮೂಲ ಕಲುಷಿತವಾಗಿ ಕೃಷಿ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಲಿದೆ. ಇಂಥ ಯೋಜನೆ ನಿಡ್ಡೋಡಿಗೆ ತಕ್ಕುದಾಗಿಲ್ಲ’ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಅಭಿಪ್ರಾಯಪಟ್ಟರು.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ತುರ್ತಾಗಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ` ನಿಡ್ಡೋಡಿಗೆ ಸೀಫುಡ್ ಪಾರ್ಕ್ ಬೇಕೆಂಬುವವರು ಕಾರವಾರದಲ್ಲಿ ಹಲವಾರು ವರ್ಷಗಳ ಹಿಂದೆ ಸ್ಥಾಪನೆಯಾಗಿ, ಬಳಿಕ ನಡೆಸಲಾಗದೆ, ಗುತ್ತಿಗೆಗೆ ಕೊಟ್ಟು , ಅದೂ ನಡೆಯದೆ ಬಾಗಿಲು ಹಾಕಿಕೊಂಡು ಏಳುವರ್ಷಗಳೇ ಸಂದಿವೆ ಎಂಬುದನ್ನು ನೋಡಿ ಬರಲಿ. ಅದನ್ನು ಇನ್ನೂ ತೆರವು ಮಾಡಿಸಲಾಗಿಲ್ಲ. ಅದೀಗ ಭೂತ್ ಬಂಗಲೆಯಂತಾಗಿದೆ. ಮೀನುಗಾರಿಕಾ ಸಚಿವನಾಗಿ ಇಂಥ ಪಾರ್ಕ್ ಅಂದರೆ ಎಷ್ಟು ಬೋಗಸ್ ಚಟುವಟಿಕೆಗಳಿಗೆ ಆಸ್ಪದ ಕೊಡುವಂಥದ್ದು ಎಂದು ನನಗೆ ತಿಳಿದಿದೆ’ ಎಂದರು.
ಇದನ್ನೂ ಓದಿ : ಕಾಂಗ್ರೆಸ್ ಜೆಡಿಎಸ್ ಗೆ ಅಧಿಕಾರ ಕೊಟ್ಟರೂ ಉಳಿಸಿಕೊಳ್ಳಲಿಲ್ಲ : ಸಿದ್ದರಾಮಯ್ಯ ಲೇವಡಿ
ನಿಡ್ಡೋಡಿಯಲ್ಲಿ ಜನರಿಗೆ ಸತ್ಯ ಸಂಗತಿ ತಿಳಿಸದೆ, ಜನರ ಆಕ್ಷೇಪಕ್ಕೆ ಬೆಲೆ ಕೊಡದೆ, ಈ ಯೋಜನೆ ಬರುವುದಾದಲ್ಲಿ ನನ್ನ ತೀವ್ರ ವಿರೋಧವಿದೆ. ಈ ಹಿಂದೆ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧ, ಬಾಸ್ಕೇಟ್ ಗಣಿಗಾರಿಕೆಯ ಪ್ರಸ್ತಾವನೆಯ ವಿರುದ್ಧ ಹೋರಾಡಿದ್ದೆ. ವಿಧಾನಪರಿಷತ್ ಸದಸ್ಯನಾಗಿದ್ದಾಗ ಕಡಂದಲೆಯ ಏಂಜೆಲ್ ಹಾರ್ಡ್ ಬಣ್ಣದ ಕಾರ್ಖಾನೆಯ ವಿರುದ್ಧ ನಡೆದ ಹೋರಾಟದಲ್ಲಿ ಈಗ ಸಂಸದರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡಾ ಪಾಲ್ಗೊಂಡಿದ್ದನ್ನು ಗಮನಿಸಬೇಕು. ಪುತ್ತೂರಿನಿಂದ ಎತ್ತಂಗಡಿ ಮಾಡಲ್ಪಟ್ಟಿರುವ ಈ ಸೀಫುಡ್ ಪಾರ್ಕ್ ನಿಡ್ಡೋಡಿಗೆ ಬರಲು ಹವಣಿಸುತ್ತಿರುವುದು ಖಂಡನೀಯ. ನಿಡ್ಡೋಡಿಯಲ್ಲಿ ಸ್ವಂತ ಹಾಗೂ ಅಕ್ರಮ ಸಕ್ರಮ ಮೂಲಕ ಭೂಮಿ ಪಡೆದುಕೊಂಡವರು ಕಷ್ಟದಿಂದ ತೋಟ, ಕೃಷಿ ಮಾಡಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ, ಅವರನ್ನೆಲ್ಲ ಒಕ್ಕಲೆಬ್ಬಿಸುವ ಬೆದರಿಕೆಯ ಮಾತು ನಾಯಕರಿಂದ ಕೇಳಿಬರುತ್ತಾ ಇದೆ. ಹಾಗೊಂದು ವೇಳೆ ಭೂಮಿ ಸೆಳೆದುಕೊಂಡರೆ ಸಂತ್ರಸ್ತರು, ಹೋರಾಟಗಾರರು ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ನಾನು ಆಗ ಅವರ ಪರ ನಿಲ್ಲಲೇಬೇಕಾಗುತ್ತದೆ’ ಎಂದು ಪ್ರಕಟಿಸಿದರು.
ನಿಡ್ಡೋಡಿಗೆ ಮೆಡಿಕಲ್ ಕಾಲೇಜು, ಪರಿಸರ ಸಹ್ಯ ಉದ್ಯಮ
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆಂದು ಗುರುತಿಸಿದ್ದ ಭೂಮಿಯಲ್ಲಿ ಸೀಫುಡ್ ಪಾರ್ಕ್ ಸ್ಥಾಪಿಸಲು ಹೊರಟಾಗ ನಡೆದ ಹೋರಾಟದಲ್ಲಿ ಅಲ್ಲಿನವರು ಯಶಸ್ವಿಯಾಗಿದ್ದಾರೆ. ಈಗಲೂ ಕಾಲಮಿಂಚಿಲ್ಲ. ನಿಡ್ಡೋಡಿಯಲ್ಲೂ ಮೆಡಿಕಲ್ ಕಾಲೇಜಾಗಲಿ ಅಥವಾ ಇನ್‌ಫೋಸಿಸ್‌ನಂಥ ಉದ್ಯಮ ಬರಲಿ; ಅಂಥದ್ದು ಬರುವುದಾದರೆ ಸ್ವಾಗತಾರ್ಹ’ ಎಂದು ಅಭಯಚಂದ್ರ ಹೇಳಿದರು.
ಇದನ್ನೂ ಓದಿ : ಮುಖ್ಯಮಂತ್ರಿಗಳಿಗೆ 40 ಐ.ಸಿ.ಯು ಹಾಸಿಗೆಗಳು ಹಾಗೂ ವೈದ್ಯಕೀಯ ಉಪಕರಣಗಳ ಹಸ್ತಾಂತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.