ಪರೀಕ್ಷಾ ಭಯ ತೊಲಗಿಸುವ ಯತ್ನ : ಸಚಿವ ತನ್ವೀರ್ ಸೇಠ್
Team Udayavani, Oct 11, 2017, 3:23 PM IST
ಬೆಳ್ತಂಗಡಿ: ಮಕ್ಕಳಿಗೆ ಪರೀಕ್ಷಾ ಭಯ ತೊಲಗಿಸಲು ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಆದ್ದರಿಂದ 4ನೆ ತರಗತಿಯಿಂದ 9ನೇ ತರಗತಿವರೆಗೆ ವಾರ್ಷಿಕ ಪರೀಕ್ಷೆ ಮಾಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು. ಅವರು ಮಂಗಳವಾರ ನಡ ಸರಕಾರಿ ಪ್ರೌಢಶಾಲೆಯ ಗಣಿತ ಪ್ರಯೋಗಾಲಯ ವೀಕ್ಷಿಸಿ ಮಾತನಾಡಿದರು.
ಉತ್ತಮ ಬೋಧನಾ ವಿಧಾನ ಅಳವಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಲಸ್ಟರ್ ಹಂತದಲ್ಲಿ
ಉತ್ತಮ ಬೋಧಿಸುವವರನ್ನು ಗುರುತಿಸಿ ಅನಂತರ ತಾಲೂಕು, ಜಿಲ್ಲೆ, ರಾಜ್ಯ ಎಂದು ಗುರುತಿಸಲಾಗುವುದು. ಬಳಿಕ ಉತ್ತಮ ಶಿಕ್ಷಕರನ್ನು ವಿಷಯ ರಾಯಭಾರಿಯನ್ನಾಗಿ ಮಾಡಲಾಗುವುದು ಎಂದರು. ಶಾಸಕ ಕೆ. ವಸಂತ ಬಂಗೇರ, ಜಿ.ಪಂ. ಸದಸ್ಯರಾದ ಸಾಹುಲ್ ಹಮೀದ್, ಧರಣೇಂದ್ರ ಪಿ., ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್, ಜಿ.ಪಂ. ಮಾಜಿ ಸದಸ್ಯ ರಾಜಶೇಖರ ಅಜ್ರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಮತ್ತಿತರರು ಉಪಸ್ಥಿತರಿದ್ದರು.
ಗಣಿತ ಶಿಕ್ಷಕ ಜಾಕೂಬ್ ಅವರನ್ನು ಸಚಿವರು ಸಮ್ಮಾನಿಸಿದರು. ಬೆಳ್ತಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಮುನಿರಾಜ ಅಜ್ರಿ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಶರ್ಮಿಳಾ ವಂದಿಸಿದರು.
ರಾಜ್ಯದಲ್ಲಿ 3,600 ಕ್ಲಸ್ಟರ್ಗಳು
ರಾಜ್ಯದಲ್ಲಿ ಸರಕಾರಿ 43,000 ಪ್ರಾಥಮಿಕ ಶಾಲೆಗಳು, 5,900 ಪ್ರೌಢ ಶಾಲೆಗಳು, 1,203 ಪದವಿ ಪೂರ್ವ ಕಾಲೇಜುಗಳು ಇವೆ. ಒಟ್ಟು 76,000 ಶಾಲೆಗಳಿದ್ದು 1.16 ಕೋಟಿ ಮಕ್ಕಳು ಕಲಿಯುತ್ತಿದ್ದಾರೆ. 3,600 ಕ್ಲಸ್ಟರ್ಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.