ಅದ್ವಿತೀಯ ರಾಜಕೀಯ – ಸಾಮಾಜಿಕ ಸಾಧಕ: ಎ.ಬಿ. ಶೆಟ್ಟಿ
Team Udayavani, Apr 7, 2018, 12:45 PM IST
ಅತ್ತಾವರ ಬಾಲಕೃಷ್ಣ ಶೆಟ್ಟಿ- ರಾಜ್ಯ, ರಾಷ್ಟ್ರ ರಾಜಕಾರಣ ಮತ್ತು ಆಡಳಿತದಲ್ಲಿ ಸರ್ವಾದರ್ಶ ವ್ಯಕ್ತಿತ್ವದ ಅಪೂರ್ವ ಸಾಧಕ; ಅವಿಭಜಿತ ದ. ಕ. ಜಿಲ್ಲೆಯ ಈ ಹೆಮ್ಮೆಯ ಮುತ್ಸದ್ದಿ ಎ. ಬಿ. ಶೆಟ್ಟಿ ಎಂದು ಪ್ರಖ್ಯಾತರು.
ಕರ್ನಾಟಕದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಮರಣ ಔಚಿತ್ಯಪೂರ್ಣ. ಏಕೆಂದರೆ, ರಾಜಕೀಯ ರಂಗ, ಶಿಕ್ಷಣ, ಬ್ಯಾಂಕಿಂಗ್, ಆಡಳಿತ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಔನ್ನತ್ಯಗಳನ್ನು ಸಾಧಿಸಿದ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು. ಅವರೆಂದೂ ಅಧಿಕಾರದ ಹಿಂದೆ ಹೋಗಿರಲಿಲ್ಲ; ಆದರೆ ಮಹತ್ವದ ಹೊಣೆಗಾರಿಕೆಯು ಅವರನ್ನೇ ಹುಡುಕಿಕೊಂಡು ಬಂತು. ಈ ಹೊಣೆಗಾರಿಕೆಗಳಿಗೆಲ್ಲ ಅವರು ಪರಿಪೂರ್ಣ ನ್ಯಾಯ ಒದಗಿಸಿದರು.
ಎ. ಬಿ. ಶೆಟ್ಟಿ ಅವರು 15-11-1882ರಂದು ಮೂಲ್ಕಿ ದೊಡ್ಡಮನೆಯಲ್ಲಿ ಜನಿಸಿದರು. ಮಂಗಳೂರಿನ ಕೆನರಾ ಮತ್ತು ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. 1936ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಮದ್ರಾಸ್ ವಿಧಾನಸಭೆಗೆ ಆಯ್ಕೆಯಾದರು. 1937ರಲ್ಲಿ ಮದ್ರಾಸ್‌ನ ಸಂಸದೀಯ ಕಾರ್ಯದರ್ಶಿಯಾದರು. 1943ರಲ್ಲಿ ಮತ್ತೆ ಮದ್ರಾಸ್ ವಿಧಾನಸಭೆಗೆ ಆಯ್ಕೆಗೊಂಡರು. 1947ರಲ್ಲಿ ಆಗಿನ ಅಲ್ಲಿನ ಮುಖ್ಯಮಂತ್ರಿ ಓಮಂದೂರು ಅವರ ಮಂತ್ರಿಮಂಡಲದಲ್ಲಿ ಆರೋಗ್ಯ ಸಚಿವ; 1949ರಲ್ಲಿ ಅಲ್ಲಿನ ಕುಮಾರಸ್ವಾಮಿ ಸಂಪುಟದಲ್ಲಿ ಕೃಷಿ- ಬಳಿಕ ಶಿಕ್ಷಣ ಮತ್ತು ವಿತ್ತ ಸಚಿವರಾಗಿ, 1952ರಲ್ಲಿ ಚಕ್ರವರ್ತಿ ರಾಜ ಗೋಪಾಲ್ ಸಂಪುಟ ಮತ್ತು 1954ರಲ್ಲಿ ಕಾಮರಾಜ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ; 1956ರಲ್ಲಿ ಮೈಸೂರು ರಾಜ್ಯ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದ್ದು.
1957ರಲ್ಲಿ ಮಂಗಳೂರಿನ ಕದ್ರಿ ಮನೆಗೆ ಬಂದು ನೆಲೆಸಿದ ಅವರು 12-1-1960ರಂದು ನಿಧನರಾದರು.
ವಿಜಯ ಬ್ಯಾಂಕಿನ ಸ್ಥಾಪನೆಗೆ ಎ.ಬಿ. ಶೆಟ್ಟಿ ಅವರು ಸ್ಫೂರ್ತಿಯಾದರು. ಮದ್ರಾಸ್ ಸರಕಾರದ ಮೂಲಕ ಕರಾವಳಿಗೆ, ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಅಪಾರ ಅನುದಾನ ದೊರೆಯಲು ಅವರು ಕಾರಣರಾದರು.
ಬಂಟ್ಸ್‌ಹಾಸ್ಟೆಲ್‌ನಲ್ಲಿ ಅವರ ಹೆಸರಿನ ಸಭಾಭವನ, ನೆಹರೂ ಮೈದಾನ ಬಳಿ ಸರ್ಕಲ್, ನಿಟ್ಟೆ ಶಿಕ್ಷಣ ಸಮೂಹ ಸಂಸ್ಥೆ ವತಿಯಿಂದ ಎ. ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ವೈದ್ಯಕೀಯ ಆಸ್ಪತ್ರೆ ಮುಂತಾದ ಕೊಡುಗೆಗಳಿವೆ.
2 ರಾಜ್ಯಗಳಲ್ಲಿ ಸಚಿವ!
ಮದ್ರಾಸ್ (ತಮಿಳ್ನಾಡು) ಮತ್ತು ಮೈಸೂರು (ಕರ್ನಾಟಕ) ರಾಜ್ಯಗಳೆರಡರಲ್ಲೂ ಮಂತ್ರಿಗಳಾದ ವಿಶೇಷ ಸಾಧನೆ ಎ. ಬಿ. ಶೆಟ್ಟಿ ಅವರದ್ದು. 1952ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕಾರ್ಕಳ ಕ್ಷೇತ್ರದಿಂದ (ಕಾಂಗ್ರೆಸ್) ಮದ್ರಾಸ್ ವಿಧಾನಸಭೆಗೆ ಆಯ್ಕೆಯಾದರು. 1956ರಲ್ಲಿ ಮೈಸೂರು ರಾಜ್ಯದ ಏಕೀಕರಣದ ನಂತರ ಈ ಭಾಗದ ಶಾಸಕರೆಲ್ಲ ಮೈಸೂರಿನ ಶಾಸಕರಾದರು. 1957ರಲ್ಲಿ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಬಂದರೂ ಸ್ವೀಕರಿಸದ ಅವರು ಹುಟ್ಟೂರಿನಲ್ಲಿ ಸಮಾಜಸೇವೆಯ ವಿಶ್ರಾಂತ ಜೀವನವನ್ನು ಆಯ್ಕೆ ಮಾಡಿಕೊಂಡರು.
ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.