ಅಬಕಾರಿ, ಶಿಕ್ಷಣ ಇಲಾಖೆಗೆ ಪತ್ರ ಬರೆಯಲು ಪಂಚಾಯತ್‌ ನಿರ್ಧಾರ


Team Udayavani, Jul 14, 2017, 2:25 AM IST

1207BK7.jpg

ಸುಳ್ಯ: ಗುತ್ತಿಗಾರು ಶಿಕ್ಷಣ ಸಂಸ್ಥೆಗಳ ಬಳಿ ಹೊಸದಾಗಿ ಮದ್ಯದಂಗಡಿ ತೆರೆಯಲು ಪ್ರಯತ್ನಿಸುತ್ತಿರುವುದಕ್ಕೆ ಸಾರ್ವಜನಿಕರ ವಿರೋಧ ಹಿನ್ನೆಲೆಯಲ್ಲಿ ಗುತ್ತಿಗಾರು ಗ್ರಾಮ ಸಭೆಯಲ್ಲಿ ಅಬಕಾರಿ ಹಾಗೂ ಶಿಕ್ಷಣ ಇಲಾಖೆಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಪಂಚಾಯತ್‌ ಅಧ್ಯಕ್ಷ ಅಚ್ಯುತ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹಿಂದೆ ಗುತ್ತಿಗಾರು ಪೇಟೆ ಯಲ್ಲಿದ್ದ ಎರಡು ಮದ್ಯದಂಗಡಿಗಳನ್ನು ಈಗ ಶಾಲಾ ಕಾಲೇಜು ಬಳಿ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಆರ್‌. ಲೊಕೇಶ್‌ ಮತ್ತು ಜನಜಾಗೃತಿ ಸಮಿತಿ ಅಧ್ಯಕ್ಷ ಲೋಕೇಶ್‌ ಪೀರನಮನೆ ವಿಷಯ ಪ್ರಸ್ತಾಪಿಸಿ ಮಾಹಿತಿ ಬಯಸಿದರು.  

ಈ ಸಂದರ್ಭ ಶಿಕ್ಷಣ ಇಲಾಖೆ ಅಧಿಕಾರಿಗಳು  ಮಾಹಿತಿಯಿಲ್ಲ ಎಂದಾಗ  ಗ್ರಾಮಸ್ಥರು,  ಪ್ರಾಂಶು ಪಾಲರು ಹಾಗೂ ಕಾಲೇಜು ವಿದ್ಯಾರ್ಥಿಗಳು ಧ್ವನಿ ಎತ್ತಿದರು. ಸದಸ್ಯರು ಅನುಮತಿ ನೀಡುವುದು ಪಂಚಾಯತ್‌ನ ಅಧಿಕಾರವಲ್ಲ. ಈ ಬಗ್ಗೆ ಅಬಕಾರಿ ಇಲಾಖೆಗೆ ಪತ್ರ ಬರೆಯುವುದು ಸೂಕ್ತ ಎಂದರು.

ಗ್ರಾಮಸ್ಥರಾದ ಜಿ.ಪಂ. ಮಾಜಿ ಸದಸ್ಯ ಭರತ್‌ ಮುಂಡೋಡಿ ಅವರು ಮಾತನಾಡಿ,  ಇಂದು ಮದ್ಯ ನಿಷೇಧದ ಆದೇಶ ಬಂದ ಬಳಿಕ ದಿನ ದಿನವೂ ಬದಲಾವಣೆಯಾಗುತ್ತಿದೆ. ಮದ್ಯದಂಗಡಿ ರಸ್ತೆಯಿಂದ ಎಷ್ಟು ದೂರ ಇರಬೇಕು, ಶಾಲೆಯ ಪ್ರದೇಶದಿಂದ ಎಷ್ಟು ದೂರ ಇರಬೇಕು ಎಂಬುದರಲ್ಲೂ  ಗೊಂದಲ ಇದೆ. ಹೀಗಾಗಿ ಮನ ಪರಿವರ್ತನೆಯ ಮೂಲಕವೇ ಮದ್ಯಮಾರಾಟ ನಿಲ್ಲಿ ಸಬೇಕೇ ಹೊರತು ಯಾವುದೇ ಆದೇಶ, ಪ್ರತಿಭಟನೆಗಳಿಂದ ಮದ್ಯದಂಗಡಿ ಬಂದ್‌ ಮಾಡುವುದು ಸಾಧ್ಯವಿಲ್ಲ ಎಂದರು. ಬಳಿಕ  ಈ ಕುರಿತು ಶಿಕ್ಷಣ ಇಲಾಖೆ, ಅಬಕಾರಿ ಇಲಾಖೆಗೆ ಪತ್ರ ಬರೆಯುವುದಾಗಿ ನಿರ್ಧರಿ ಸಲಾಯಿತು.

ಇಂಜಿನಿಯರ್‌ಗೆ ತರಾಟೆ
ಗುತ್ತಿಗಾರು ಕಮಿಲ ಬಳ್ಪ ರಸ್ತೆ ಅವ್ಯವಸ್ಥೆ ಬಗ್ಗೆ ಗ್ರಾಮಸಭೆಯಲ್ಲಿ ಜಿಪಂ ಇಂಜಿನಿಯರ್‌ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
 
ಕಳೆದ ಕೆಲವು ಕಾಲಗಳಿಂದ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದರೂ ಏಕೆ ತೇಪೆ ಹಾಕುವ ಕಾರ್ಯ ಮಾಡಿಲ್ಲ? ಈಗ ವಾಹನ ಓಡಾಟಕ್ಕೆ ಕಷ್ಟವಾಗಿದೆ ಎಂದು ಆಕ್ರೋಶ  ವ್ಯಕ್ತಪಡಿಸಿದರು. 
  
ಬಳಿಕ ಉತ್ತರಿಸಿದ ಇಂಜಿನಿಯರ್‌, ಈ ರಸ್ತೆಗೆ 5 ಲಕ್ಷ ರೂಪಾಯಿ ಅನುದಾನ ಶಾಸಕರು ಇರಿಸಿದ್ದು, ಮಳೆಗಾಲದ ನಂತರ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಗೈರಾದ ಅಧಿಕಾರಿಗಳಿಗೆ ನೊಟೀಸ್‌
ಗ್ರಾಮಸಭೆಗೆ ಗೈರಾದ ಅಧಿಕಾರಿಗಳ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ‌ ನೊಡೆಲ್‌ ಅಧಿಕಾರಿ ಅಂತಹ ಅಧಿಕಾರಿಗಳಿಗೆ  ನೋಟಿಸ್‌ ನೀಡಲಾಗುತ್ತದೆ ಎಂದರು.

ಗ್ರಾಮೀಣ ಭಾಗದಲ್ಲಿ ರಸ್ತೆ ದುರಸ್ತಿಗೆ ಅರಣ್ಯ ಇಲಾಖೆ ಸಹಕಾರ ಬೇಕು  ಎಂದು ಸದಸ್ಯರು ಆಗ್ರಹಿಸಿದರು.   94 ಸಿ ಗೊಂದಲ ನಿವಾರಣೆ, ಪೈಕ ಶಾಲೆಯ ಶಿಕ್ಷಕರ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು ಆಗ್ರಹಿಸಿದರು. ಗುತ್ತಿಗಾರಿನಲ್ಲಿ ರುದ್ರಭೂಮಿ ಅವಶ್ಯವಾಗಿದೆ. ಭೂಮಿ ಒತ್ತುವರಿ ತೆರವಾಗಬೇಕು. ಕೃಷಿ ಯಂತ್ರ ಧಾರೆ, ಗುತ್ತಿಗಾರಿಗೂ ಬರಲು ಸಭೆಯಲ್ಲಿ ಒತ್ತಾಯ ಕೇಳಿಬಂದಿತು.

ಗ್ರಾ.ಪಂ. ಸದಸ್ಯ ವೆಂಕಟ್‌ ವಳಲಂಬೆ ಮಾತನಾಡಿ, ಗ್ರಾಮದ ಅಭಿವೃದ್ಧಿಗಾಗಿ ಧನಾತ್ಮಕ ರೀತಿಯ ಚರ್ಚೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂದಿನ ಸಭೆ ಯಲ್ಲಿ ಉತ್ತಮ ಚರ್ಚೆ ನಡೆದಿದೆ ಎಂದರು. ಕೃಷಿ ಇಲಾಖಾಧಿಕಾರಿ ಫಾಲಚಂದ್ರ  ನೊಡೆಲ್‌ ಅಧಿಕಾರಿ ಯಾಗಿದ್ದರು. ತಾ.ಪಂ. ಸದಸ್ಯೆ ಯಶೋದಾ ಬಾಳೆಗುಡ್ಡೆ ಉಪಸ್ಥಿತರಿದ್ದರು. ಗ್ರಾ.ಪಂ. ಪಿ.ಡಿ.ಒ. ಶ್ಯಾಮ ಪ್ರಸಾದ್‌ ಸ್ವಾಗತಿಸಿ, ವಂದಿಸಿದರು.

ಕನ್ನಡ ಬಾರದ ಮ್ಯಾನೇಜರ್‌
ಗುತ್ತಿಗಾರಿನಲ್ಲಿರುವ   ಸಿಂಡಿಕೇಟ್‌ ಬ್ಯಾಂಕ್‌  ಮೆನೇಜರ್‌ಗೆ ಕನ್ನಡ ಬರುತ್ತಿಲ್ಲ, ಇತರ ಕೆಲವು ಸಿಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಗ್ರಾಮದ ಬಹುಪಾಲು ಮಂದಿಗೆ ವ್ಯವಹಾರ ನಡೆಸಲು ಕಷ್ಟವಾಗಿದೆ ಎಂದು ದೂರಿದರು. ಈ ಬಗ್ಗೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಲಾಯಿತು.

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!

1

Bantwal: ಶಂಭೂರಿನ ಎಂಆರ್‌ಎಫ್‌ ತಿಂಗಳಲ್ಲಿ ಸಿದ್ಧ

5-bantwala

Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

3-sulya

Aranthodu: ನೇಣು ಬಿಗಿದು ಯವಕ ಆತ್ಮಹತ್ಯೆ

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

ಕೌಕ್ರಾಡಿ: ತಹಶೀಲ್ದಾರ್‌ ನೇತೃತ್ವದಲ್ಲಿ ಗುಡಿಸಲು ತೆರವು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.