ಚಾರಣ ವೇಳೆ ದುಬಾರಿ ಶುಲ್ಕ : ಹವ್ಯಾಸಿಗಳಲ್ಲಿ ಬೇಸರ
Team Udayavani, Dec 23, 2018, 10:22 AM IST
ಸುಬ್ರಹ್ಮಣ್ಯ : ಚಳಿಗಾಲ ಬಂತೆಂದರೆ ಸಾಕು ಚಾರಣಿಗರು ಪ್ರೇಕ್ಷಣೀಯ ಸ್ಥಳಗಳಿಗೆ ಚಾರಣಕ್ಕೆ ತೆರಳುವ ಹುಮ್ಮಸ್ಸಿನಲ್ಲಿರುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಕುಮಾರ ಪರ್ವತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇಲ್ಲಿ ಚಾರಣಕ್ಕೆ ತೆರಳುವವರಿಗೆ ಚೆಕ್ ಪೋಸ್ಟ್‌ನಲ್ಲಿ ವಿಧಿಸುವ ಮೊತ್ತ ಚಾರಣಿಗರಿಗೆ ಬೇಸರ ತರಿಸಿದೆ.
ಪ್ರಕೃತಿ, ಚಾರಣ ಪ್ರೀಯರ ಸ್ವರ್ಗವೆಂದೆಣಿಸಿದ ಕುಮಾರ ಪರ್ವತಕ್ಕೆ ತೆರಳುವ ಚಾರಣಿಗರ ತಂಡಕ್ಕೆ ಚಾರಣ ವೇಳೆ ಬೆಟ್ಟ ಗುಡ್ಡ ಹತ್ತುವುದಕ್ಕಿಂತ ಹೆಚ್ಚು ಭಾರವಾಗುತ್ತಿರುವುದು ಚಾರಣ ವೇಳೆ ಚೆಕ್‌ಪೋಸ್ಟ್‌ನಲ್ಲಿ ವಿಧಿಸಲಾಗುತ್ತಿರುವ ಅಧಿಕ ಶುಲ್ಕ. ಇಲ್ಲಿ ಚಾರಣಿಗರ ತಂಡದ ಪ್ರತಿ ಸದಸ್ಯನಿಂದ 350 ರೂ. ಹಾಗೂ ವಿದೇಶಿ ಪ್ರಜೆಯಿಂದ 1,000 ರೂ. ನಂತೆ ಸ್ವೀಕರಿಸಲಾಗುತ್ತದೆ.
ರಾಜ್ಯದ ಮೂಲೆ ಮೂಲೆಗಳಿಂದ ತಂಡಗಳು ಸುಬ್ರಹ್ಮಣ್ಯದಿಂದ ಪ್ರತಿನಿತ್ಯ ಚಾರಣ ನಡೆಸುತ್ತವೆ. ದಿನಗಳಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ತಂಡಗಳು ಚಾರಣಕ್ಕೆ ತೆರಳುತ್ತಿದ್ದರೆ, ವಾರದ ಕೊನೆಯಲ್ಲಿ ಸುಮಾರು 25ರಿಂದ 30ಕ್ಕೂ ಅಧಿಕ ಚಾರಣಿಗರ ತಂಡ ಕುಮಾರ ಪರ್ವತಕ್ಕೆ ತೆರಳುತ್ತಿರುತ್ತದೆ. ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಏರಬೇಕಾದರೆ 12 ಕಿ.ಮೀ. ಸಾಗಬೇಕು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಿಂದ ದೇವರಗದ್ದೆ ಬಳಿ ಸುಬ್ರಹ್ಮಣ್ಯ ಮೀಸಲು ಅರಣ್ಯ ಪ್ರವೇಶಿಸಿ ತೆರಳಬೇಕು. ಇಲ್ಲಿ ಅರಣ್ಯ ಇಲಾಖೆಯ ಯಾವುದೇ ಚೆಕ್‌ಪೋಸ್ಟ್‌ಗಳು ಇಲ್ಲ. ಮಂದೆ ಗಿರಿಗದ್ದೆ ಎಂಬ ಪ್ರದೇಶದ ಮೂಲಕ ಹಾದು ಹೋಗಬೇಕಾಗಿದ್ದು, ಇದು ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿದೆ.
ಅನುಮತಿ ಕಡ್ಡಾಯ
ಪುಷ್ಪಗಿರಿ ವನ್ಯ ಜೀವಿ ವಿಭಾಗದ ಚೆಕ್ ಪೋಸ್ಟ್ ಇಲ್ಲಿದೆ. ಆದ್ದರಿಂದ ಮುಂದಕ್ಕೆ ಪರ್ವತ ಹತ್ತಲು ವನ್ಯ ಜೀವಿ ವಿಭಾಗದ ಇಲಾಖೆಯ ಅನುಮತಿ ಪಡೆಯಲೇ ಬೇಕಾಗಿದೆ. ಈ ವೇಳೆ ತಪಾಸಣ ಕೇಂದ್ರದ ಸಿಬಂದಿ ಚಾರಣಿಗರಿಂದ ಮೊತ್ತವನ್ನು ಪಡೆದುಕೊಳ್ಳುತ್ತಿದ್ದು, ಪ್ರತಿಯಾಗಿ ರಶೀದಿ ಕೂಡ ನೀಡಲಾಗುತ್ತಿದೆ. ಎರಡು ವರ್ಷದ ಹಿಂದೆ 150 ರೂ. ನಂತೆ ಸ್ವೀಕರಿಸಲಾಗುತ್ತಿತ್ತು. ನಿರ್ವಹಣೆಗೆಂದು ಈ ವಸೂಲಾತಿ ನಡೆಯುತ್ತಿದ್ದು,ಇಲ್ಲಿ ಯಾವುದೇ ರೆ ವ್ಯವಸ್ಥೆಗಳು ಚಾರಣಿಗರಿಗೆ ಒದಗಿಸಲಾಗುತ್ತಿಲ್ಲ. ಮಾರ್ಗದರ್ಶಿ ವ್ಯವಸ್ಥೆಯೂ ಇಲ್ಲಿಲ್ಲ.
ನಿರ್ಮಾಣ ಚಿಂತನೆ
ಕೇಂದ್ರ ವನ್ಯ ಜೀವಿ ವಿಭಾಗದ ಶುಲ್ಕ ಕುಮಾರ ಪರ್ವತದಲ್ಲಿ ಜಾರಿಯಲ್ಲಿದೆ. ಈ ವಿಚಾರಕ್ಕೆ ಸಂಬಂಧಿಸಿ ಪರ್ವತಕ್ಕೆ ಚಾರಣಕ್ಕೆ ತೆರಳುವವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕುಮಾರ ಪರ್ವತದಲ್ಲಿ ವೀಕ್ಷಣಾ ಗೋಪುರ ತೆರೆಯುವ ಚಿಂತನೆ ಇದೆ. ಚಾರಣಕ್ಕೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಜಾರಿಗೆ ತರಲಾಗುವುದು.
-ಆರ್. ಶಂಕರ್ ,
ಪರಿಸರ ಖಾತೆ ಸಚಿವ
ಹೆಚ್ಚು ಶುಲ್ಕ ಸರಿಯಲ್ಲ
ಕುಮಾರ ಪರ್ವತಕ್ಕೆ ಚಾರಣಕ್ಕೆ ತೆರಳುವ ವೇಳೆ ಪ್ರತಿಯೋರ್ವ ಚಾರಣಿಗ ಸದಸ್ಯನಿಂದ 350 ರೂ. ಪಡೆಯುತ್ತಿರುವುದು ದುಬಾರಿಯಾಗುತ್ತಿದೆ. ಶುಲ್ಕ ಪಡೆದರೂ ಅಲ್ಲಿ ಯಾವುದೇ ವ್ಯವಸ್ಥೆಗಳು ಇಲ್ಲ. ಹೀಗಾಗಿ ಕೇಂದ್ರ ವನ್ಯಜೀವಿ ವಿಭಾಗ ಚಾರಣಿಗರಿಗೆ ಅನುಕೂಲವಾಗುವಂತೆ ಸರಳ ಶುಲ್ಕ ನಿಗದಿಪಡಿಸಬೇಕು.
-ಸುರೇಶ್ ಬಜಗೋಳಿ,
ಚಾರಣಿಗ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.