“ನೀಟ್’ನಲ್ಲಿ “ಎಕ್ಸ್‌ಪರ್ಟ್’ ಅದ್ವಿತೀಯ ಸಾಧನೆ
ಎಕ್ಸ್‌ಪರ್ಟ್‌ನ ಅರ್ಜುನ್ ಕಿಶೋರ್ ದೇಶದಲ್ಲೇ ಪ್ರಥಮ ರ್‍ಯಾಂಕ್
Team Udayavani, Jun 5, 2024, 10:54 PM IST
ಮಂಗಳೂರು: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಕಿಶೋರ್ ದೇಶದಲ್ಲೇ ಪ್ರಥಮ ರ್‍ಯಾಂಕ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜತೆಗೆ 14 ವಿದ್ಯಾರ್ಥಿಗಳು 700 ಹಾಗೂ ಅದಕ್ಕಿಂತ ಹೆಚ್ಚು ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ| ನರೇಂದ್ರ ಎಲ್. ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅರ್ಜುನ್ ಕಿಶೋರ್ 720 ಅಂಕಗಳಲ್ಲಿ 720 ಅಂಕ ಪಡೆದಿದ್ದಾರೆ. ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗೂ ಇದೊಂದು ಹೆಮ್ಮೆಯ ಕ್ಷಣ ಎಂದರು.
ಎಕ್ಸ್‌ಪರ್ಟ್‌ನ 1,508 (ಶೇ. 97)ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. 14 ಮಂದಿ 700 ಹಾಗೂ ಅದಕ್ಕಿಂತ ಅಧಿಕ, 55 ಮಂದಿ 675ಕ್ಕಿಂತ ಅಧಿಕ, 109 ಮಂದಿ 650ಕ್ಕಿಂತ ಅಧಿಕ, 176 ಮಂದಿ 625ಕ್ಕಿಂತ ಅಧಿಕ, 271 ಮಂದಿ 600ಕ್ಕಿಂತ ಅಧಿಕ, 359 ಮಂದಿ 575ಕ್ಕಿಂತ ಅಧಿಕ, 451 ಮಂದಿ 550ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದರು.
ನೀಟ್‌ನಲ್ಲಿ 715 ಅಂಕ ಪಡೆದ ಸಂಜನಾ ಸಂತೋಷ್ ಕಟ್ಟಿ ಜನರಲ್ ಮೆರಿಟ್ ವಿಭಾಗದಲ್ಲಿ ದೇಶದಲ್ಲೇ 255ನೇ ರ್‍ಯಾಂಕ್, 710 ಅಂಕ ಪಡೆದ ಉತ್ಸವ್ ಆರ್. 533ನೇ ರ್‍ಯಾಂಕ್, 710 ಅಂಕ ಪಡೆದ ಅಮನ್ ಅಬ್ದುಲ್ ಹಕೀಂ 592ನೇ ರ್‍ಯಾಂಕ್ ಪಡೆದಿದ್ದಾರೆ ಎಂದರು.
ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 56ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ. ಈ ಪೈಕಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನ ಶೇ. 97ರಷ್ಟು ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ ಎಂದರು.
ನಿಖರ ಗುರಿ
ಇದ್ದಾಗ ಸಾಧನೆ
ಸಂಸ್ಥೆಯ ಉಪಾಧ್ಯಕ್ಷೆ ಡಾ| ಉಷಾ ಪ್ರಭಾ ಎನ್. ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ನಿಖರ ಗುರಿ ಇಟ್ಟುಕೊಂಡು ಅಧ್ಯಯನ ನಡೆಸಿದರೆ ಮಾತ್ರ ಉತ್ತಮ ಸಾಧನೆ ಮಾಡಬಲ್ಲರು. ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಇದನ್ನು ಮಾಡಿ ತೋರಿಸಿದ್ದಾರೆ ಎಂದರು.
ಐಟಿ ನಿರ್ದೇಶಕ ಅಂಕುಶ್ ಎನ್. ನಾಯಕ್, ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಎನ್.ಕೆ. ವಿಜಯನ್, ಶೈಕ್ಷಣಿಕ ಪ್ರಿನ್ಸಿಪಾಲ್ ಪ್ರೊ| ಸುಬ್ರಹ್ಮಣ್ಯ ಉಡುಪ, ಕೊಡಿಯಾಲ್ ಬೈಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪ್ರೊ| ರಾಮಚಂದ್ರ ಭಟ್, ಎಐಸಿ ವಿಭಾಗದ ಸಂಯೋಜಕ ಪ್ರೊ| ಶ್ಯಾಮ್ ಪ್ರಸಾದ್, ಕೋರ್ ಕಮಿಟಿ ಸಮಿತಿ ಸದಸ್ಯ ಪ್ರೊ| ವಿನಯ್‌ಕುಮಾರ್, ಕೋಚಿಂಗ್ ವಿಭಾಗದ ಕೋ ಆರ್ಡಿನೇಟರ್ ಗುರುದತ್, ಕರುಣಾಕರ ಬಳ್ಕೂರು ಉಪಸ್ಥಿತರಿದ್ದರು.
ಸಿಇಟಿ, ಪಿಯುಸಿಯಲ್ಲೂ “ಎಕ್ಸ್‌ಪರ್ಟ್’ ಸಾಧನೆ
ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ಸಿಇಟಿ ಪರೀಕ್ಷೆಯ 7 ವಿಭಾಗಗಳಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಬಿಎನ್‌ವೈಎಸ್ ಹಾಗೂ ಕೃಷಿಯಲ್ಲಿ ಪ್ರಥಮ ರ್‍ಯಾಂಕ್, ದ್ವಿತೀಯ ರ್‍ಯಾಂಕ್ ಮತ್ತು ಪಶುವೈದ್ಯಕೀಯ ಹಾಗೂ ನರ್ಸಿಂಗ್‌ನಲ್ಲಿ ತೃತೀಯ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಇದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ. 100 ಫಲಿತಾಂಶ ಪಡೆದಿದ್ದು, ಶೇ. 99.94ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 590ಕ್ಕಿಂತ ಅಧಿಕ ಅಂಕಗಳನ್ನು 23 ಮಂದಿ, 580ಕ್ಕಿಂತ ಅಧಿಕ ಅಂಕ 193 ಮಂದಿ ಪಡೆದುಕೊಂಡಿದ್ದಾರೆ. ಹಲವು ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.