ವಿಸ್ತೃತ ಮಂಜೂಷಾ, ಇಂದು ಲೋಕಾರ್ಪಣೆ
Team Udayavani, Oct 24, 2018, 10:13 AM IST
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ 51ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಶುಭಸಂದರ್ಭದಲ್ಲಿ ಕ್ಷೇತ್ರದಲ್ಲಿ ನೂತನವಾಗಿ ವಿನ್ಯಾಸಗೊಳಿಸಿದ ಅಪೂರ್ವ ವಸ್ತುಗಳನ್ನೊಳಗೊಂಡ ವಿಸ್ತಾರವಾದ ಮಂಜೂಷಾ ವಸ್ತು ಸಂಗ್ರಹಾಲಯವು ಅ. 24ರಂದು ಲೋಕಾರ್ಪಣೆಗೊಳ್ಳಲಿದೆ. ಸೂಕ್ತ ಬೆಳಕಿನ ವ್ಯವಸ್ಥೆ, ಗಾಜಿನ ಗ್ಯಾಲರಿಗಳು, ಭದ್ರತಾ ವ್ಯವಸ್ಥೆಯೊಂದಿಗೆ ಸುಸಜ್ಜಿತಗೊಳಿಸಲಾಗಿದೆ.
ಒಟ್ಟು 1 ಲಕ್ಷ ಚ.ಅಡಿ ವಿಸ್ತಾರದ ಸುಸಜ್ಜಿತ ಕಟ್ಟಡದಲ್ಲಿ ಸುಮಾರು 3.5 ಕೋ. ರೂ. ವೆಚ್ಚದಲ್ಲಿ ವಿನ್ಯಾಸಗೊಳಿಸಲಾದ ಈ ವಸ್ತು ಸಂಗ್ರಹಾಲಯವು ವಿಶ್ವದರ್ಜೆಯ ಗುಣಮಟ್ಟದೊಂದಿಗೆ ಕಂಗೊಳಿಸುತ್ತಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಜೂಷಾವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಸಂಗ್ರಹಗಳು
ಕ್ಷೇತ್ರದಲ್ಲಿ ಭಕ್ತರಿಗೆ ಧಾರ್ಮಿಕತೆಯ ಜತೆಗೆ ಜ್ಞಾನವನ್ನೂ ನೀಡಬೇಕು ಎಂಬ ನಿಟ್ಟಿನಲ್ಲಿ ಈ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಡಾ| ಹೆಗ್ಗಡೆಯವರು ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿನ ಪುರಾತನ ವಸ್ತುಗಳ ಕುರಿತು ಮಾಹಿತಿ ಪಡೆದು ಅದನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಜತೆಗೆ ತುಳುನಾಡಿನಲ್ಲೂ ಪೂರ್ವಜರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಕ್ಷೇತ್ರದಲ್ಲೂ ಸಾಕಷ್ಟು ವಸ್ತುಗಳು ಪಾಳು ಬಿದ್ದುಕೊಂಡಿದ್ದವು. ಅವುಗಳೆಲ್ಲವನ್ನೂ ಒಟ್ಟು ಸೇರಿಸಿ, 1998ರಲ್ಲಿ ಅಂದಿನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶ ಇ.ಎಸ್. ವೆಂಕಟರಾಮಯ್ಯ ಅವರು ಮಂಜೂಷಾ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದ್ದರು. ಪ್ರಸ್ತುತ ಅದನ್ನು ವಿಸ್ತೃತ ಕಟ್ಟಡಕ್ಕೆ ಸ್ಥಳಾಂತರಿಸಿ, ಉದ್ಘಾಟಿಸಲಾಗುತ್ತಿದೆ. ಆಟೋಮೊಬೈಲ್ ಸೆಕ್ಷನ್ ಹಿಂದಿನಂತೆ ಪ್ರತ್ಯೇಕವಾಗಿದೆ. ಸುಮಾರು 200 ವರ್ಷಗಳ ಹಿಂದಿನ ವಸ್ತುಗಳು ಇಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಇಲ್ಲಿರುವ ಬಹುತೇಕ ಕಾರುಗಳು ದೇಣಿಗೆಯ ಮೂಲಕ ಲಭ್ಯವಾಗಿವೆ.
ಹಿಂದೆ ಕ್ಷೇತ್ರಕ್ಕೆ ಆಗಮಿಸಿ ಸಿ.ವಿ. ರಾಮನ್ ಕುಟುಂಬಸ್ಥರು ಇಲ್ಲಿನ ಸಂಗ್ರಹವನ್ನು ಕಂಡು 2 ಕಾರುಗಳನ್ನು ದೇಣಿಗೆಯಾಗಿ ನೀಡಿದ್ದರು. 15 ದಿನಗಳ ಹಿಂದೆಯೂ ಕ್ಷೇತ್ರಕ್ಕೆ 1948ರ ಮಾಡೆಲ್‌ನ ಫಿಯೆಟ್ ಕಾರೊಂದು ದೇಣಿಗೆಯಾಗಿ ಬಂದಿದೆ. ಸುಮಾರು 5,000ಕ್ಕೂ ಅಧಿಕ ತಾಳೆಗ್ರಂಥಗಳು, ಕಾಗದ ದಾಖಲಾತಿಗಳ ಸಂಗ್ರಹವಿದೆ. ಜತೆಗೆ ಪಿನ್‌ಹೋಲ್ ಕೆಮರಾದಿಂದ ಹಿಡಿದು 500ಕ್ಕೂ ಅಧಿಕ ಕೆಮರಾಗಳ ಸಂಗ್ರಹವಿದೆ ಎಂದು ಡಾ| ಹೆಗ್ಗಡೆ ಅವರು ವಿವರಿಸಿದ್ದಾರೆ.
ನ. 15ರಿಂದ ವೀಕ್ಷಣೆಗೆ ಲಭ್ಯ
ಅ. 24ರಂದು ಸಿಎಂ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರೂ ವಸ್ತುಗಳ ಸ್ಥಳಾಂತರ ಕಾರ್ಯನಡೆಯಬೇಕಿರುವುದರಿಂದ ನ. 15ರ ಬಳಿಕ ಜನತೆಗೆ ವೀಕ್ಷಣೆಗೆ ಲಭ್ಯವಾಗಲಿದೆ. ಮುಂದಿನ ಬದಲಾವಣೆಗಳನ್ನು ಗಮನಿಸಿಕೊಂಡು ಇತರ ವಸ್ತುಸಂಗ್ರಹಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡು ಸಂಗ್ರಹಗಳ ಬದಲಾವಣೆಗೂ ಚಿಂತನೆ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.