ಘಾಟಿ ರೈಲು ಹಳಿಗೆ ಹೆಚ್ಚುವರಿ ಕೀ ಮ್ಯಾನ್, ಗ್ಯಾಂಗ್‌ಮೆನ್ ಭದ್ರತೆಯ ರಕ್ಷೆ
Team Udayavani, Jul 26, 2019, 6:29 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಸಂಚಾರ ಪುನರಾರಂಭಗೊಂಡರೂ ಮಳೆಗಾಲ ಮುಗಿಯುವ ತನಕವೂ ಇಲಾಖೆಗೆ ನಿಶ್ಚಿಂತೆಯಿಲ್ಲ. ಪ್ರಯಾಣಿಕರ ಸುರಕ್ಷತೆಗಾಗಿ ಕೀ ಮ್ಯಾನ್ ಮತ್ತು ಗ್ಯಾಂಗ್‌ಮೆನ್‌ಗಳ ಭದ್ರತೆಯ ಕವಚ ಮಳೆಗಾಲ ಮುಗಿಯುವ ತನಕ ಸೈನ್ಯದಂತೆ ಕೆಲಸ ನಿರ್ವಹಿಸಬೇಕಿದೆ.
ಸುಬ್ರಹ್ಮಣ್ಯ ನಿಲ್ದಾಣ-ದೋಣಿಗಲ್ ನಿಲ್ದಾಣದ ನಡುವಣ 11.05 ಕಿ.ಮೀ. ಮಾರ್ಗದಲ್ಲಿ ಕೀ ಮ್ಯಾನ್ ಮತ್ತು ಗ್ಯಾಂಗ್‌ಮೆನ್‌ಗಳ ಜತೆ ಹೆಚ್ಚುವರಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿ ಸುರಕ್ಷತೆಗೆ ಆದ್ಯತೆಯನ್ನು ರೈಲ್ವೇ ಇಲಾಖೆ ನೀಡುತ್ತಿದೆ. ಓರ್ವ ಕೀ ಮ್ಯಾನ್ 6 ಕಿ.ಮೀ. ದೂರದ ಹಳಿಯ ಮೇಲೆ ನಿಗಾ ವಹಿಸುತ್ತಿದ್ದಾರೆ. ಹಿಂದೆ 100 ಮೀ.ಗೆ ಓರ್ವ ಗ್ಯಾಂಗ್‌ಮೆನ್ ಇದ್ದಲ್ಲಿ ಈಗ ಹೆಚ್ಚುವರಿ ಸೇರಿ ಮೂವರು ಸಿಬಂದಿಯನ್ನು ನೇಮಕ ಮಾಡಲಾಗಿದೆ.
ಭೂಕುಸಿತ ನಡೆದ ಸ್ಥಳಗಳು ಮತ್ತೆ ಬಾಯ್ದೆರೆದುಕೊಂಡಿರುವುದು ಮತ್ತು ಕೆಲವೆಡೆ ಅಪಾಯದ ಸನ್ನಿವೇಶಗಳು ಇರುವ ಕಾರಣ ಸಂಭವನೀಯ ಅವಘಡ ತಪ್ಪಿಸಲು ಇಲಾಖೆ ಕಟ್ಟೆಚ್ಚರ ವಹಿಸಿದೆ. ಅರಣ್ಯದ ನಡುವೆ ಮಾರ್ಗ ಹಾದುಹೋಗಿರುವ ಕಾರಣ ವನ್ಯಜೀವಿಗಳು ಹಳಿ ದಾಟಿ ಓಡಾಡುತ್ತಿರುತ್ತವೆ. ಕಳೆದ ವರ್ಷ ರೈಲು ಢಿಕ್ಕಿ ಹೊಡೆದು ಮರಿಯಾನೆ ಸಹಿತ ಎರಡು ಆನೆಗಳು ಮೃತಪಟ್ಟಿದ್ದವು.
ಅಪಾಯಕಾರಿ ಮಾರ್ಗ
ಈ ಮಾರ್ಗದಲ್ಲಿ ಅತ್ಯಂತ ಕಡಿದಾದ 50:1 ಪರಿಣಾಮದ ಇಳಿಜಾರಿನ ಉದ್ದ 8.89 ಕಿ.ಮೀ. ಇದೆ. ಈ ಅಪಾಯಕಾರಿ ಮಾರ್ಗದಲ್ಲಿ ರೈಲು ಗರಿಷ್ಠ ತಾಸಿಗೆ 30 ಕಿ. ಮೀ. ವೇಗದಲ್ಲಿ ಮಾತ್ರ ಸಂಚರಿಸಲು ಸಾಧ್ಯ. ರೈಲು ಓಡಾಟಕ್ಕೆ ಮುನ್ನ ಮತ್ತು ಅನಂತರ ನಿಯೋಜನೆಗೊಂಡ ಕೀ ಮ್ಯಾನ್ ಮತ್ತು ಗ್ಯಾಂಗ್‌ಮೆನ್‌ಗಳು ಹಾಗೂ ಹೆಚ್ಚುವರಿ ನಿಯೋಜಿತ ತಾತ್ಕಾಲಿಕ ಗುತ್ತಿಗೆ ಸಿಬಂದಿ ಮಾಹಿತಿಯನ್ನು ರವಾನಿಸುತ್ತಿರಬೇಕು.
ಸುಮಾರು 75ರಷ್ಟು ಮಂದಿಯ ಒಂದು ತಂಡ ವಿವಿಧ ವಿಭಾಗಗಳಲ್ಲಿ ರಾತ್ರಿ – ಹಗಲು ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಹಳಿ ವೀಕ್ಷಣೆ, ಸಡಿಲಗೊಂಡ ಹಳಿಯ ಕ್ಲಿಪ್ಪಿಂಗ್ ಅನ್ನು ಬಿಗಿಗೊಳಿಸುವುದು, ಆಯಿಲ್ ಹಚ್ಚುವುದು ಇತ್ಯಾದಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಹೊರಗಿನ ಸಿಬಂದಿಯಲ್ಲದೆ ಸ್ಥಳಿಯ ಅನುಭವಿ ಸಿಬಂದಿಯನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ರೈಲ್ವೇ ಮೂಲಗಳಿಂದ ಮಾಹಿತಿ ಲಭಿಸಿದೆ.
ಅಪಾಯದ ಮುನ್ಸೂಚನೆ ದೊರೆತಲ್ಲಿ ಕರ್ತವ್ಯದಲ್ಲಿರುವ ಕೀ ಮ್ಯಾನ್ ಡೆಟೊನೇಟರ್ ಸಿಸ್ಟಮ್ ಮೂಲಕ ಚಾಲಕನ ಗಮನಕ್ಕೆ ತರುವ ಪ್ರಯತ್ನ ನಡೆಸುತ್ತಾರೆ. ಅಪಾಯವಿಲ್ಲ ಎಂಬುದು ಖಾತ್ರಿಯಾದ ಬಳಿಕವಷ್ಟೆ ರೈಲ್ವೇ ಸ್ಟೇಶನ್ ಮಾಸ್ಟರ್‌ಗಳು ಯಾನಕ್ಕೆ ಹಸಿರು ನಿಶಾನೆ ನೀಡುತ್ತಾರೆ.
ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಯಾನದ ವೇಳೆ ಯಾವುದೇ ತೊಂದರೆ, ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಲಾಗುತ್ತಿದೆ. ಕರ್ತವ್ಯ ನಿರತ ಸಿಬಂದಿ ಜತೆ ಹೆಚ್ಚುವರಿ ಸಿಬಂದಿಯನ್ನು ಕರೆಸಿಕೊಂಡು ಕಟ್ಟೆಚ್ಚರ ವಹಿಸಲಾಗಿದೆ. ಸಿಬಂದಿಗೆ ಮಳೆಗೆ ರೈನ್ ಕೋಟ್, ಸುತ್ತಿಗೆ, ಟಾರ್ಚ್ ಎಲ್ಲವನ್ನೂ ಒದಗಿಸಲಾಗಿದೆ.
-ನಾಗಪ್ಪ ದಾವಣಗೆರೆ ರೈಲ್ವೇ ಸೆಕ್ಷನ್ ಎಂಜಿನಿಯರ್
ಹಳಿ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಗುರುವಾರಕ್ಕೆ ಪೂರ್ಣಗೊಂಡಿದೆ. ಸಂಚಾರಕ್ಕೆ ಮಾರ್ಗ ತೆರೆದುಕೊಂಡಿದೆ. ಗುರುವಾರ ರಾತ್ರಿಯಿಂದ ರೈಲು ಓಡಾಟ ನಡೆಸಲಿದೆ. ಆದಾಗ್ಯೂ ಈ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
– ಗೋಪಾಲಕೃಷ್ಣ ಪಿಆರ್‌ಒ ದಕ್ಷಿಣ ರೈಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.