‘ನೇತ್ರದಾನದ ಮೂಲಕ ವ್ಯಕ್ತಿಯೊಬ್ಬನ ಬಾಳಿಗೆ ಬೆಳಕಾಗಿ’
Team Udayavani, Jul 15, 2017, 2:40 AM IST
ಸುಳ್ಯ: ನೇತ್ರದಾನವೂ ಒಂದು ಶ್ರೇಷ್ಠವಾದ ದಾನ. ನೇತ್ರದಾನ ಮಾಡುವ ಮೂಲಕ ವ್ಯಕ್ತಿಯೊಬ್ಬನ ಬಾಳಿಗೆ ಬೆಳಕಾಗಲು ಸಾಧ್ಯ. ಆ ನಿಟ್ಟಿನಲ್ಲಿ ನೇತ್ರದಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಕೆವಿಜಿ ಮೆಡಿಕಲ್ ಕಾಲೇಜಿನ ನೇತ್ರಾ ಚಿಕಿತ್ಸಾ ವಿಭಾಗದ ಡಾ| ಅಕ್ಷತಾ ಚಂಡಕಿ ಅಭಿಪ್ರಾಯಪಟ್ಟರು. ಅವರು ಇಲ್ಲಿನ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಹಮ್ಮಿಕೊಂಡ ನೇತ್ರದಾನದ ಮಹತ್ವದ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಗಿರಿಧರ ಗೌಡ ಮಾತನಾಡಿ, ಮನುಷ್ಯ ತನ್ನ ಬದುಕಿನಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕಾದ ಅಗತ್ಯವಿದೆ. ಮನುಷ್ಯ ಬದುಕಿರುವಾಗ ಮತ್ತು ಸತ್ತ ಅನಂತರವೂ ದೇಹದ ಬೇರೆ ಬೇರೆ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸದಾ ಸ್ಮರಣೀಯವಾಗಿರಲು ಸಾಧ್ಯ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪ್ರಯೋಜನ ಕಾರಿಯಾಗಲಿ ಎಂದರು. ಘಟಕದ ಕಾರ್ಯಕ್ರಮಾಧಿಕಾರಿ ಡಾ| ಅನುರಾಧಾ ಕುರುಂಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ಹಾಗೂ ಮನುಷ್ಯ ದೇಹದ ಅವಿಭಾಜ್ಯ ಅಂಗ ಕಣ್ಣಿನ ಬಗ್ಗೆ ಹಾಗೂ ಅದರ ದಾನದ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕೆವಿಜಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಎನ್.ಆರ್. ಗಣೇಶ್, ಘಟಕದ ವಿದ್ಯಾರ್ಥಿ ಸಂಚಾಲಕ ಶಶಾಂಕ ಫಡೆR, ನಾಯಕರಾದ ಹೇಮಕಿರಣ ಕೆ.ಎಂ. ಹಾಗೂ ದೇವಿಕಾ ಎನ್.ಜಿ. ಉಪಸ್ಥಿತರಿದ್ದರು. ಸೌಜನ್ಯಾ ರೈ ಬಿ.ಎಸ್., ಸುರಕ್ಷಾ ಪಿ.ಎಸ್. ಹಾಗೂ ದೇವಿಕಾ ವೈ ಪ್ರಾರ್ಥಿಸಿ, ದೀಪ್ತಿ ಸಿ.ವಿ. ಸ್ವಾಗತಿಸಿ, ದೃಶ್ಯಾ ಕೆ.ಜಿ. ವಂದಿಸಿದರು. ಹರ್ಷಿತಾ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು. ಕೆವಿಜಿ ಮೆಡಿಕಲ್ ಕಾಲೇಜಿನ ನೇತ್ರಾ ಚಿಕಿತ್ಸಾ ವಿಭಾಗದ ನಿಶಾ, ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀಧರ್ ವಿ., ಘಟಕದ ಹಿರಿಯ ವಿದ್ಯಾರ್ಥಿಗಳಾದ ಸಮೀಕ್ಷಾ ರೈ ಎಸ್., ಸಿಂಧೂರ ಎನ್.ಸಿ. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.