ವೈಫಲ್ಯ-ಸಾಧನೆಗಳ ವೀಡಿಯೋ ಪ್ರಚಾರ
Team Udayavani, Apr 29, 2018, 6:30 AM IST
ಮಂಗಳೂರು: ಚುನಾವಣೆ ದಿನಾಂಕ ಸನಿಹವಾಗುತ್ತಿದ್ದಂತೇ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಕಾರ್ಯಕರ್ತರು ಸಾಮಾಜಿಕ ತಾಣಗಳನ್ನು ಬಳಸಿಕೊಂಡು ವೈಫಲ್ಯ-ಸಾಧನೆಗಳ ವೀಡಿಯೋ ಪ್ರಚಾರ ಕೈಗೊಂಡಿದ್ದಾರೆ. ಎಷ್ಟೆಂದರೆ ವಿಪಕ್ಷದ ವೈಫಲ್ಯಗಳನ್ನು ಮತ್ತು ತಮ್ಮ ಪಕ್ಷದ ಸಾಧನೆಗಳನ್ನು ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ಜನ ಬೆಂಬಲ ಯಾಚಿಸುತ್ತಿದ್ದಾರೆ.
ಮಂಗಳೂರು ನಗರದಲ್ಲಿ ಪ್ರಮುಖ ಪಕ್ಷಗಳ ಕಾರ್ಯಕರ್ತರು ಸೇರಿದಂತೆ ಇತರ ಪಕ್ಷಗಳು ಕೂಡ ಪ್ರಚಾರಕ್ಕೆ ವೀಡಿಯೋ ಮೊರೆ
ಹೋಗಿದ್ದಾರೆ. ವಿಪಕ್ಷದ ಅಭ್ಯರ್ಥಿಯನ್ನು ಮಣಿಸಲು ಅವರ ವೈಫಲ್ಯಗಳನ್ನೂ ವೀಡಿಯೋ ಮೂಲಕ ಹೇಳಲಾಗುತ್ತಿದೆ. ಇದಕ್ಕಾಗಿ ನಗರದ ವಿವಿಧ ಭಾಗಗಳಿಗೆ ಸಂಚರಿಸಿ ಜನರ ಮೂಲಭೂತ ಆವಶ್ಯಕತೆ ಗಳನ್ನು ನೀಡಲು ಉಂಟಾದ ವೈಫಲ್ಯಗಳನ್ನು ಚಿತ್ರೀಕರಿಸಿ, ಅಲ್ಲೊಂದಷ್ಟು ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಾಮಾಜಿಕ ಜಾಲತಾಣ ಬಳಕೆದಾರರ ಮುಂದಿಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ಪಕ್ಷದ ಅಭ್ಯರ್ಥಿಯ ಸಾಧನೆ, ಜನಪರ ಕಾರ್ಯ, ಕ್ರಿಯಾಶೀಲತೆಯನ್ನೂ ಜನರ ಮುಂದೆ ಬಿಂಬಿಸುವ ಕೆಲಸಗಳಾಗುತ್ತಿವೆ.
ನಾಯಕರ ಬಾಯಲ್ಲಿ ಸಿನೆಮಾ ಡೈಲಾಗ್
ವಿಶೇಷವೆಂದರೆ ಕನ್ನಡ ಚಲನಚಿತ್ರಗಳ ನಾಯಕರ ಮುಖಕ್ಕೆ ಸ್ಪರ್ಧಾನಿರತ ಅಭ್ಯರ್ಥಿಗಳ ಮುಖವನ್ನು ಮಾತ್ರ ಜೋಡಿಸಿ ಆ ನಾಯಕರು ಹೇಳಿದ ಡೈಲಾಗ್‌ಗಳನ್ನು ಅಭ್ಯರ್ಥಿಗಳೇ ಹೇಳಿದಂತೆ ಬಿಂಬಿಸುವ ಕೆಲಸವೂ ನಡೆಯುತ್ತಿದೆ. ಆ ಡೈಲಾಗ್‌ಗಳ ಮೂಲಕವೇ ಜನಮನವನ್ನು ತಲುಪುವ ಯೋಜನೆ ಕೆಲ ಪಕ್ಷಗಳ ಕಾರ್ಯ ಕರ್ತರದ್ದಾದರೂ ಇದೇ ವೀಡಿಯೋವನ್ನು ಬಳಸಿಕೊಂಡು ನಗೆಪಾಟಲಿಗೆಡೆ ಮಾಡಿ ಕೊಡುವಂತಹ ಬರಹಗಳನ್ನು ಬರೆದು ಪ್ರತಿಸ್ಪರ್ಧಿ ಪಕ್ಷದ ಕಾರ್ಯಕರ್ತರು ಹರಿಯ ಬಿಡುತ್ತಿದ್ದಾರೆ.
ಒಟ್ಟಿನಲ್ಲಿ ಚುನಾವಣಾ ಕಣ ಎಷ್ಟು ರಂಗೇರಿದೆ ಎಂದರೆ ಅಭ್ಯರ್ಥಿಗಳಷ್ಟೇ ಉತ್ಸಾಹದಲ್ಲಿ ಕಾರ್ಯಕರ್ತರೂ ಇದ್ದಾರೆ.
– ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.