ಇಳಿಯುತ್ತಿದೆ ಕೋಕೋ ಬೆಲೆ ಆತಂಕದಲ್ಲಿ ಬೆಳೆಗಾರರು
Team Udayavani, Apr 5, 2019, 3:31 PM IST
ವಿಟ್ಲ ಎ. 4: ಪ್ರತಿ ವರ್ಷವೂ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಕೋಕೋ ಬೆಲೆ ಏರುವ ಹೊತ್ತು. ಆದರೆ ಈ ವರ್ಷ
ಮಾರ್ಚ್ ತಿಂಗಳ ಕೊನೆಗೇ ಬೆಲೆ ಕುಸಿ ದಿದೆ. ಎಪ್ರಿಲ್ ಆರಂಭದಲ್ಲೇ 5 ರೂ. ಢಮಾರ್. ಇದು ಅನಿರೀಕ್ಷಿತ. ಬೆಳೆಗಾರರು ಆತಂಕದಲ್ಲಿದ್ದಾರೆ. ಮಾತ್ರವಲ್ಲ, ಕೃಷಿ ವಲಯದಲ್ಲಿ ಕೋಕೋ ಕೃಷಿಗೆ ಭವಿಷ್ಯ ವಿಲ್ಲವೆಂಬ ಮಾತು ಕೇಳಿಬರುತ್ತಿದೆ. ಅನೇಕ ಕೃಷಿಕರು ಈಗಾಗಲೇ ಕೋಕೋ ಬೆಳೆ ಕೈಬಿಟ್ಟಿದ್ದು, ಇನ್ನಷ್ಟು ಶೋಚನೀಯ ಸ್ಥಿತಿ ತಲುಪುವ ಸಾಧ್ಯತೆಯಿದೆ. ಕೋಕೋ ಬೆಳೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಹಿಡಿತವಿರುವುದೂ ಆ ಬಗ್ಗೆ ತೀವ್ರ ತಾತ್ಸಾರ ಮನೋಭಾವಕ್ಕೆ ಕಾರಣವಾಗಿದೆ. ಭಾರೀ ಧಾರಣೆಯಿಲ್ಲದ, ಉಪಬೆಳೆಯಾಗಿರುವ, ವಿಶೇಷ ಲಾಭದಾಯಕವಲ್ಲದ ಕೋಕೋ ಗಿಂತ ಇತರ ಉಪಬೆಳೆಗಳತ್ತ ವಾಲುವ ಸ್ಥಿತಿ ನಿರ್ಮಾಣವಾಗಿದೆ.
ವಾಣಿಜ್ಯ ಬೆಳೆ ಕೋಕೋ ಬೆಳೆ ವಾಣಿಜ್ಯ ಬೆಳೆಯಾಗಿ ಕಾಲಿರಿಸಿ ವಿಪರೀತ ವರ್ಷಗಳಾಗಿಲ್ಲ. ಬಹುವಾರ್ಷಿಕ ಬೆಳೆಗಳ ಮಧ್ಯೆ ಮಲೆನಾಡು, ಕರಾವಳಿಯ ಕೃಷಿಕರು ಅಡಿಕೆ, ತೆಂಗು ತೋಟದಲ್ಲಿ ಕೋಕೋವನ್ನು ಉಪಬೆಳೆಯಾಗಿ ಬೆಳೆಯುವ ಪ್ರಾಯೋಗಿಕ ಯತ್ನ ನಡೆಸಿ, ಯಶಸ್ವಿಯಾದರು. ಕೆಲವು ಸಮಸ್ಯೆಗಳು ಕಾಣಿಸಿಕೊಂಡವು. ಉಪಬೆಳೆಯಾಗಿ ಕೋಕೋ ಸೂಕ್ತವಲ್ಲ ಎನ್ನುವಷ್ಟೇ ಮಂದಿ ಸೂಕ್ತ ಎನ್ನುವವರೂ ಇದ್ದಾರೆ. ಅವರದೇ ಆದ ವಾದವನ್ನೂ ಹೊಂದಿದ್ದಾರೆ. ಅದು ಹೀಗಿದೆ.
· ಕೋಕೋ ವಿಶೇಷ ನಿರ್ವಹಣೆಯಿಲ್ಲದೆ ಬದುಕುವ ಬೆಳೆ. ಅದಕ್ಕೆ ಪ್ರತ್ಯೇಕ ನೀರು, ಗೊಬ್ಬರಗಳ ಅಗತ್ಯ ಇಲ್ಲವೇ ಇಲ್ಲ.
· ಗಿಡದ ತುಂಬಾ ಎಲೆಗಳನ್ನು ಹೊಂದಿ ಸೊಂಪಾಗಿ ಬೆಳೆಯುವುದರಿಂದ ತೋಟದಲ್ಲಿ ಕಳೆ ಕಡಿಮೆಯಾಗುತ್ತದೆ.
ಯಾವಾಗ ಬೆಲೆ ಹೆಚು ?
ಬೇಸಗೆಯಲ್ಲಿ ಕೋಕೋ ಬೆಳೆ ಹೆಚ್ಚು ಮತ್ತು ಬೆಲೆಯೂ ಹೆಚ್ಚು. ಕೋಕೋವನ್ನು ಒಡೆದಾಗ ನೀರಿನಂಶ ಕಡಿಮೆ ಇರುತ್ತದೆ ಮತ್ತು ಬೀಜ ಒಣಗಿಸುವುದಕ್ಕೆ ಬಿಸಿಲು ಸಹಜವಾಗಿ ಇರುತ್ತದೆ. ಆದುದರಿಂದ ವೆಚ್ಚ ಕಡಿಮೆ.
ಬೆಲೆ ನೇರವಾಗಿ ಬೆಳೆಗಾರನಿಗೇ ತಲುಪುತ್ತದೆ. ಮಳೆ ಆರಂಭವಾದಾಗ ನೀರಿನ ಅಂಶ ಹೆಚ್ಚಾಗುತ್ತದೆ ಮತ್ತು ಬೀಜವನ್ನು ಒಣಗಿಸುವುದಕ್ಕೆ ಡ್ರೈಯರ್ ಬೇಕು. ವೆಚ್ಚ ಜಾಸ್ತಿ. ರೈತರಿಗೆ ಸಿಗುವ ಬೆಲೆ ಇಳಿಮುಖವಾಗುತ್ತದೆ. 2014ನೇ
ಸಾಲಿನ ಬಳಿಕ ಇಂದಿನ ತನಕದ ಪ್ರತಿ ತಿಂಗಳ ಬೆಲೆ ವಿಶ್ಲೇಷಣೆ ಮಾಡಿದಾಗ ಏರಿಳಿಕೆಯ ಗತಿ ಹೀಗಿದೆ.
2014ರಲ್ಲಿ ಕೆ.ಜಿ.ಗೆ ಕೋಕೋ ದರ ಜನವರಿ- 50 ರೂ., ಫೆಬ್ರವರಿ-55 ರೂ., ಮಾರ್ಚ್- 60 ರೂ., ಎಪ್ರಿಲ್- 65 ರೂ., ಮೇ – 67 ರೂ., ಜೂನ್-62 ರೂ. 2015ರಲ್ಲಿ ಜನವರಿ-55 ರೂ., ಫೆಬ್ರವರಿ- 55 ರೂ., ಮಾರ್ಚ್-60 ರೂ., ಎಪ್ರಿಲ್- 65 ರೂ., ಮೇ -65, ಜೂನ್- 60 ರೂ. 2016ರಲ್ಲಿ ಜನವರಿ-50 ರೂ., ಫೆಬ್ರವರಿ-58 ರೂ., ಮಾರ್ಚ್ -59 ರೂ., ಎಪ್ರಿಲ್- 60 ರೂ., ಮೇ -60 ರೂ., ಜೂನ್-57 ರೂ. 2017ರಲ್ಲಿ ಜನವರಿ-65 ರೂ., ಫೆಬ್ರವರಿ-65 ರೂ., ಮಾರ್ಚ್-60 ರೂ. 2018ರಲ್ಲಿ ಜನವರಿ-45ರೂ., ಫೆಬ್ರವರಿ-48 ರೂ., ಎಪ್ರಿಲ್-53 ರೂ., ಮೇ 60 ರೂ. 2019ರಲ್ಲಿ ಜನವರಿ-65 ರೂ., ಫೆಬ್ರವರಿ-65 ರೂ., ಮಾರ್ಚ್-65 ರೂ., ಎಪ್ರಿಲ್- 60 ರೂ. 2019ರ ಮಾರ್ಚ್ ಕೊನೆ, ಎಪ್ರಿಲ್ ಆರಂಭದಲ್ಲಿ ಕೋಕೋ ಬೆಲೆ ಇಳಿಕೆ ಆರಂಭವಾಗಿದೆ. ಜೂನ್‌ನಲ್ಲಿ ಮತ್ತಷ್ಟು ಇಳಿಕೆ ಸಂಭವವಿದೆ ಎನ್ನುವ ಭಯ ಬೆಳೆಗಾರರದ್ದು ಹೆಚ್ಚುವರಿ ಕೊಂಬೆಗಳನ್ನು ಸವರುವುದರಿಂದ ತೋಟಕ್ಕೆ ಸೊಪ್ಪೂ ದೊರಕುತ್ತದೆ. ಉದುರಿದ ಎಲೆಗಳು ಕೂಡ ಇದೇ ರೀತಿಯ ಅನುಕೂಲವೊದಗಿಸುತ್ತವೆ.
· ಯಾವುದೇ ರೀತಿಯ ರೋಗ, ಕಾಟಗಳಿಲ್ಲ. ಕೆಲವು ಕಡೆ ಕಾಟಗಳು ಇವೆಯಾದರೂ ನಗಣ್ಯ.
· ತೋಟಕ್ಕೆ ನೆರಳು ಒದಗಿಸುತ್ತವೆ. ನೆರಳಿನಿಂದಾಗಿ ಎಳೆ ಅಡಿಕೆ ಸಸಿಗಳು ಬೆಳೆಯಲು ಸುಲಭವಾಗುತ್ತದೆ. ಅಡಿಕೆ
ಸಸಿಗಳಿಗೆ ಪಶ್ಚಿಮ ದಿಕ್ಕಿನಿಂದ ಸೂರ್ಯನ ಬಿಸಿಲು ಬೀಳಬಾರದು. ಆ ರಕ್ಷಣೆ ಇದರಿಂದ ಸಿಗುತ್ತದೆ.
ಅಡಿಕೆಗೆ ಮಾರಕವೇ ?
ರಾಸಾಯನಿಕ ಆಧಾರಿತ ಮತ್ತು ಸಾವಯವ ಅನುಸರಿಸುವ ಕೃಷಿಕರಿಬ್ಬರೂ ಅಡಿಕೆ ತೋಟದಲ್ಲಿ ಕೋಕೋ ಬೆಳೆಯುವುದು ಮುಖ್ಯ ಬೆಳೆಗೆ ಮಾರಕವೆನ್ನುತ್ತಾರೆ. ಕೋಕೋ ಬೇಕೆನ್ನುವವರು ನೀಡಿದ ಪಟ್ಟಿಯನ್ನು ಈ ಮಂದಿ ಅಲ್ಲಗಳೆಯುತ್ತಾರೆ. ಅವರ ಸಮರ್ಥನೆ, ಸಂಶೋಧನೆಗಳ ಪ್ರವರ ಇಲ್ಲಿದೆ.
· ಕೋಕೋ ಪ್ರತ್ಯೇಕ ನಿರ್ವಹಣೆ ಇಲ್ಲದೆ ಬೆಳೆಯಬಲ್ಲದು ನಿಜ. ಆದರೆ ಶೀಘ್ರ ಬೆಳವಣಿಗೆ ಲಕ್ಷಣಗಳನ್ನು ಹೊಂದಿರುವ
ಗಿಡಗಳು ಹೆಚ್ಚು ಭೂಸಾರ ತಿನ್ನುವುದು ಖಚಿತ. ಇದೇ ಜೀವಲಕ್ಷಣದ ಕೋಕೋ ಮುಖ್ಯ ಬೆಳೆಗೆ ತೊಂದರೆ
ನೀಡಬಹುದಲ್ಲವೇ ?
· ಕೋಕೋ ಸೊಪ್ಪುಗಳು ನೆರಳು ನೀಡುತ್ತದೆ. ಆದರೆ ಅದು ತೋಟಕ್ಕೆ ಹಾನಿಕರ. ಇವು ವಿಶಾಲವಾಗಿ ವಿಸ್ತರಿಸುವುದರರಿಂದ ತೋಟಕ್ಕೆ ಅಗತ್ಯಕ್ಕಿಂತ ಹೆಚ್ಚು ನೆರಳು ಸಿಗುತ್ತದೆ. ಆಗ ಅಡಿಕೆ ಸಸಿಗಳು ಮೇಲೇಳಲಾರವು. ಇತರೆ ಉಪಬೆಳೆಗಳಾದ ಏಲಕ್ಕಿ, ಕಾಫಿ ನಾಶವಾಗುತ್ತವೆ. ಅಲ್ಲದೆ ತೋಟದಲ್ಲಿ ನೀರು ಹರಿಯಲು ಮಾಡಿದ ಸಣ್ಣ ಕಾಲುವೆಯಲ್ಲಿ ಸೇರಿ ನೀರಿನ ಹರಿವಿಗೆ ಅಡಚಣೆ ಮಾಡುತ್ತದೆ. ತೋಟದಲ್ಲಿ ನೀರು ನಿಲ್ಲುವುದರಿಂದ ಕೊಳೆ ರೋಗಗಳ ಸಾಧ್ಯತೆ ಹೆಚ್ಚು.
· ಇತ್ತೀಚೆಗೆ ಇದಕ್ಕೆ ಕೊಳೆ ರೋಗದ ಬಾಧೆ ಕಾಣಿಸಿದೆ. ಕಾಯಿ ಬೆಳೆಯುವ ಮುನ್ನವೇ ರೋಗಾಣುಗಳಿಗೆ ತುತ್ತಾಗಿ ಕಪ್ಪಾಗಿ
ಕೊಳೆಯುತ್ತದೆ. ಅನೇಕರು ಈ ಸಮಸ್ಯೆಗೆ ಸಿಲುಕಿದ್ದಾರೆ.
· ಮಂಗ, ಅಳಿಲುಗಳು ಇದರ ರುಚಿ ಕಂಡಿವೆ. ಈ ಪ್ರಾಣಿಗಳ ಹಾವಳಿಯ ಅಂದಾಜು ಕಷ್ಟ ಕಡಿಮೆ ಬೆಲೆಗೆ ಆಮದು ಭಾರತದಲ್ಲಿ ತಯಾರಿಸುವ ಕೋಕೋ ಉತ್ಪನ್ನಗಳಿಗೆ ತಕ್ಕುದಾದ ಕೋಕೋ ಬೆಳೆಯಲಾಗುತ್ತಿಲ್ಲ. ಆದುದರಿಂದ ಹೊರದೇಶಗಳಿಂದ
ಆಮದು ಮಾಡಲಾಗುತ್ತದೆ. ಇದೀಗ ಹೊರದೇಶದಿಂದ ಕಡಿಮೆ ಬೆಲೆಗೆ ಆಮದು ಆಗುತ್ತಿರುವುದರಿಂದ ಮಾರುಕಟ್ಟೆ ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿರುವುದರಿಂದ ಈ ಏರಿಳಿತಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ
ಕೈಬಿಡುವಸ್ಥಿತಿಯಿದೆ ಹಿಂದೆ ಕೋಕೋ ಬಳಸುವ ಸಂಸ್ಥೆಗಳು ಕೋಕೋ ಗಿಡವನ್ನು ನೀಡಿ, ನೆಡಲು ಪ್ರೋತ್ಸಾಹ ನೀಡಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟರೆ ಸಹಜ ವಾಗಿ ಬೆಳೆ ಜಾಸ್ತಿ ಬರುತ್ತದೆ. ಆಗ ಫಸಲು ಜಾಸ್ತಿಯ ಕಾರಣ ನೀಡಿ ಬೆಲೆ ಇಳಿಸುವುದು ಸರಿಯಲ್ಲ.
ಹಾಗಾ ದರೆ ಈ ಸಂಸ್ಥೆಗಳು ಬೆಲೆ ಏರಿ ಸದೇ ಗಿಡಗಳನ್ನು ಕಡಿಯಲು ಪ್ರೋತ್ಸಾಹ ನೀಡಿದಂತಾಗಲಿಲ್ಲವೇ? ಅಂತಾ ರಾಷ್ಟ್ರೀಯ ಮಾರುಕಟ್ಟೆಗೆ ಪೈಪೋಟಿ ನೀಡಿದಲ್ಲಿ ಬೆಳೆಗಾರರ ಹಿತ ರಕ್ಷಣೆ ಕಾಪಾಡಬಹುದು. ಇಲ್ಲದೇ ಹೋದಲ್ಲಿ ಬೆಳೆಗಾರರ ರಕ್ಷಣೆ ಮಾಡಿ ದಂತಾಗುತ್ತದೆಯೇ? ಕೋಕೋವನ್ನು ಕೈಬಿಡುವ ಪರಿಸ್ಥಿತಿಯಿದೆ.
- ಸೇರಾಜೆ ಸುಬ್ರಹ್ಮಣ್ಯ ಭಟ್ ಕೋಕೋ ಬೆಳೆಗಾರ
ಸಮಸ್ಯೆ ಆಗದಂತೆ ಬೆಲೆ ಕರ್ನಾಟಕ, ದಕ್ಷಿಣ ಕೇರಳ ಭಾಗಗಳ ಕೃಷಿಕರಿಂದ ಕ್ಯಾಂಪ್ಕೋಗೆ ವಾರ್ಷಿಕ 1,500 ಟನ್ ಕೋಕೋ ಅವಶ್ಯವಿದೆ. ಕೋಕೋ ಪೌಡರ್ ಮತ್ತು ಬಟರ್‌ಗೆ ಬೇಡಿಕೆ ಇದೆ. ಆಮದಾಗುತ್ತಿರುವ ಪೌಡರ್ ಮತ್ತು ಬಟರ್ ಬೆಲೆ ಕೆ.ಜಿ.ಗೆ ಈಗ 198 ರೂ.ಗಳಿವೆ. ಅದಕ್ಕಿಂತ ಹೆಚ್ಚು ದರ ನಿಗದಿಪಡಿಸಿದರೆ ಕ್ಯಾಂಪ್ಕೋ ನಷ್ಟ ಅನುಭವಿಸುತ್ತದೆ.
ಪ್ರಸ್ತುತ ಆ ದರ 202 ಅನ್ನು ದಾಟುತ್ತಿರುವುದರಿಂದ ಕೋಕೋ ಹಸಿ ಬೀಜದ ದರವನ್ನು ನಾವು ಕೆ.ಜಿ.ಗೆ 65ರಿಂದ 60ಕ್ಕಿಳಿಸಬೇಕಾಯಿತು. ನಾವು ಕೃಷಿಕರಿಗೆ ತೊಂದರೆಯಾಗದಂತೆ ಮಳೆಗಾಲದಲ್ಲೂ ಪ್ರತಿ ಕೆ.ಜಿ.ಗೆ 50
ರೂ.ಗಿಂತ ಕೆಳಗಿಳಿಯಲು ಬಿಡಲಿಲ್ಲ.
- ಸುರೇಶ್ ಭಂಡಾರಿ ಮ್ಯಾನೇಜಿಂಗ್ ಡೈರೆಕ್ಟರ್, ಕ್ಯಾಂಪ್ಕೋ
ಉದಯಶಂಕರ್ ನೀರ್ಪಾಜ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.