Suicide: ಕೌಟುಂಬಿಕ ಕಲಹ: ಯುವಕ ಬಾವಿಗೆ ಹಾರಿ ಆತ್ಮಹತ್ಯೆ
Team Udayavani, Aug 18, 2023, 12:35 AM IST
ವಿಟ್ಲ: ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರಾಜೆ ಗ್ರಾಮದಲ್ಲಿ ಸಂಭವಿಸಿದೆ. ಪೆರಾಜೆ ನಿವಾಸಿ ಪ್ರಶಾಂತ್ ನಾಯ್ಕ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ರಾತ್ರಿ ಸುಮಾರು 2 ಗಂಟೆಯ ಬಳಿಕ ಈತ ಬಾವಿಗೆ ಹಾರಿರಬೇಕು ಎಂದು ಹೇಳಲಾಗುತ್ತಿದೆ.
ಪ್ರಶಾಂತ್ ಅವರ ದೊಡ್ಡಮ್ಮ ತೀರಿಕೊಂಡಿದ್ದು, ಉತ್ತರಕ್ರಿಯೆ ಬುಧವಾರ ಇವರ ಮನೆಯಲ್ಲಿ ನಡೆದಿತ್ತು. ರಾತ್ರಿ ಊಟ ಮಾಡಿ ಸ್ನೇಹಿತರು ಹಾಗೂ ಬಂಧುಗಳು ತೆರಳಿದ ಬಳಿಕ ಎಲ್ಲರೂ ಮನೆಯಲ್ಲಿ ಮಲಗಿದ್ದಾಗ ಅವರು ಮನೆ ಬಳಿಯ ಬಾವಿಗೆ ಹಾರಿರಬೇಕು ಎಂದು ಶಂಕಿಸಲಾಗಿದೆ. ನೇರಳಕಟ್ಟೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಒಂದು ವರ್ಷ ಹಿಂದೆ ಮದುವೆಯಾಗಿದ್ದರು. ಸ್ನೇಹ ಜೀವಿಯಾಗಿದ್ದು, ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು. ಬಿಜೆಪಿಯ ಕಾರ್ಯಕರ್ತನಾಗಿದ್ದು, ಪೆರಾಜೆ ಯುವ ವೇದಿಕೆಯ ಕಾರ್ಯದರ್ಶಿಯಾಗಿ, ಪ್ರಸ್ತುತ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದರು.
ಕೌಟುಂಬಿಕ ಕಲಹ
ಕೌಟುಂಬಿಕ ಕಲಹ ಆತ್ಮಹತ್ಯೆಗೆ ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ. ಬಂಟ್ವಾಳ ಅಗ್ನಿಶಾಮಕದಳ ಹಾಗೂ ಗೂಡಿನಬಳಿಯ ಮುಳುಗು ತಜ್ಞರು ಆಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.