ಬಸವ ವಸತಿ ಸಹಾಯಧನ ನಂಬಿ ಬಸವಳಿದ ಕುಟುಂಬ


Team Udayavani, Sep 1, 2018, 10:14 AM IST

sepctember-3.jpg

ಸುಳ್ಯ : ಮನೆ ಗೋಡೆ ನಿರ್ಮಿಸಿದ ಬಳಿಕ ಅಧಿಕಾರಿಗಳು ಬಂದು ಪರಿಶೀಲಿಸಿಯೂ ಆಗಿದೆ. ಇಷ್ಟಾಗಿ ಒಂದು ವರ್ಷ ಕಳೆದಿದೆ. ಎರಡನೇ ಕಂತಿನ ಹಣ ಬಿಡುಗಡೆಯಾಗಿಲ್ಲ. ವಿಳಂಬದ ಕಾರಣ ಹೇಳುತ್ತಿಲ್ಲ. ಪೆರುವಾಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಿಧವೆ ಮಹಿಳೆ ಪಡುತ್ತಿರುವ ಪಾಡು ಇದು.

ಪೆರುವಾಜೆ ಗ್ರಾ.ಪಂ.ಗೆ ಒಳಪಟ್ಟಿರುವ ಕುಂಡಡ್ಕ ಸಾರಕರೆ ನಿವಾಸಿ, ಪರಿಶಿಷ್ಟ ಜಾತಿಗೆ ಸೇರಿರುವ ಭಾರತಿ ಅವರು ವಸತಿ ಯೋಜನೆಯ ಎರಡು ಕಂತಿನ ಹಣಕ್ಕೆ ಒಂದು ವರ್ಷದಿಂದ ಕಾಯುತ್ತಿದ್ದಾರೆ. ನಾಳೆ ಬರುತ್ತೆ, ಹದಿನೈದು ದಿವಸ ಕಳೆದು ಬರುತ್ತದೆ ಎಂಬ ಉತ್ತರ ಕೇಳಿ ಈ ಕುಟುಂಬ ಬಸವಳಿದಿದೆ. ಮೊದಲ ಕಂತು ಬಂದ ಬಳಿಕ ಎರಡನೇ ಕಂತು ಪಾವತಿಸಲು ಹಿಂದೇಟು ಹಾಕಿರುವುದು ಏಕೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.

ಬಸವ ವಸತಿ ಯೋಜನೆ
2017ರ ಆಗಸ್ಟ್‌ನಲ್ಲಿ ಪೆರುವಾಜೆ ಗ್ರಾ.ಪಂ. ಮೂಲಕ ಭಾರತಿ ಅವರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾಗಿತ್ತು. ಅಡಿಪಾಯ ಕಾಮಗಾರಿ ಮುಗಿದು ಪ್ರಥಮ ಹಂತದ 32 ಸಾವಿರ ರೂ. ಅನುದಾನ ಬಿಡುಗಡೆಯಾಗಿತ್ತು. 

ಗ್ರಾ.ಪಂ. ಸೂಚನೆ ಪ್ರಕಾರ ಗೋಡೆ ನಿರ್ಮಿಸಲಾಯಿತು. ಪಂಚಾಯತ್‌ ನಿಂದ ಪರಿಶೀಲನೆ ನಡೆದು, ಪೋಟೋ ತೆಗೆದು ಎರಡನೆ ಹಂತದ ಸಹಾಯಧನಕ್ಕೆ ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಲಾಗಿದೆ. ಹಣ ಶೀಘ್ರ ಪಾವತಿ ಆಗುತ್ತದೆ. ಬಳಿಕ ಛಾವಣಿ ಕೆಲಸ ಆರಂಭಿಸುವಂತೆಯೂ ತಿಳಿಸಲಾಗಿತ್ತು. ಇದನ್ನು ನಂಬಿದ ಈ ಕುಟುಂಬಕ್ಕೆ ಈಗ ದಿಕ್ಕು ತೋಚದ ಸ್ಥಿತಿ ಉಂಟಾಗಿದೆ.

ಬಾರದ ಹಣ
ಭಾರತಿ ಅವರು ಎರಡನೆ ಕಂತಿನ ಹಣಕ್ಕಾಗಿ ಪದೇ-ಪದೇ ಪಂಚಾಯತ್‌ ಗೆ, ಬ್ಯಾಂಕ್‌ಗೆ ಅಲೆದಾಡುತ್ತಿದ್ದಾರೆ. ಪಂಚಾಯತ್‌ ಅಧಿಕಾರಿಗಳ ಬಳಿ ವಿಚಾರಿಸಿದರೆ, ಬ್ಯಾಂಕಿಗೆ ಹಣ ಹಾಕಲಾಗಿದೆ. ವಾರ ಬಿಟ್ಟು ಹೋಗಿ ನೋಡಿ ಎನ್ನುವ ಉತ್ತರ ದೊರೆತಿದೆ. ಇದನ್ನು ನಂಬಿ ಭಾರತಿ ಅವರು ಅನೇಕ ಬಾರಿ ಬ್ಯಾಂಕ್‌ಗೆ ತೆರಳಿದ್ದಾರೆ. ಆದರೆ ಅಲ್ಲಿ ಬಂದಿಲ್ಲ ಎಂಬ ಉತ್ತರ ಬರುತ್ತಿದೆ. ಆ. 27ರಂದು ಗ್ರಾ.ಪಂ.ಗೆ ತೆರಳಿ ವಿಚಾರಿಸಿದ್ದಾರೆ. ಅಕೌಂಟ್‌ಗೆ ಹಣ ಪಾವತಿ ಆಗಿದೆ. ಬ್ಯಾಂಕಿಗೆ ಹೋಗಿ ಪರಿಶೀಲಿಸಿ ಎಂದಿದ್ದರು. ಅಲ್ಲಿ ಹೋಗಿ ವಿಚಾರಿಸಿದಾಗ ಬಂದಿರಲಿಲ್ಲ. ಆ. 29 ರಂದು ಪುನಃ ಗ್ರಾ.ಪಂ.ಗೆ ಬಂದು ವಿಷಯ ತಿಳಿಸಿದ್ದಾರೆ. 15 ದಿನ ಬಿಟ್ಟು ನೋಡಿ ಎಂಬ ಉತ್ತರ ದೊರೆತಿದೆ ಎಂದು ಫಲಾನುಭವಿ ಭಾರತಿ ಅಳಲು ತೋಡಿಕೊಂಡಿದ್ದಾರೆ.

ಬಡ ಕುಟುಂಬ
ಭಾರತಿ ಅವರ ಪತಿ ಕೆಲವು ಸಮಯಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ. ನಾಲ್ವರು ಮಕ್ಕಳಿರುವ ಕುಟುಂಬದ ಹೊಣೆ ಇವರ ಮೇಲಿದೆ. ಜೀವನ ನಿರ್ವಹಣೆಗೆ ಬೀಡಿ ಕಟ್ಟುವುದು ಬಿಟ್ಟರೆ ಬೇರೆ ಆದಾಯ ಇಲ್ಲ. ಈಗಿರುವ ಹಳೆ ಮನೆಯು ವಾಸಕ್ಕೆ ಯೋಗ್ಯವಾಗಿಲ್ಲ. ಹೊಸ ಮನೆ ಗೋಡೆ ಹಂತದಲ್ಲಿ ಬಾಕಿಯಾಗಿದೆ. ಹಣ ಪಾವತಿಯಾಗದೆ ಬಾಕಿ ಕೆಲಸ ಮಾಡುವಂತಿಲ್ಲ. ಅದಕ್ಕೆ ಬೇಕಾದ ಆರ್ಥಿಕ ಶಕ್ತಿಯೂ ಇಲ್ಲ. ದಿನವಿಡಿ ಪಂಚಾಯತ್‌, ಬ್ಯಾಂಕ್‌ ಗೆ ಸುತ್ತಾಡಬೇಕಾದರೆ ಜೀವನ ನಿರ್ವಹಣೆಗೆ ಏನು ಮಾಡುವುದು ಎಂಬ ಚಿಂತೆ ಈ ಕುಟುಂಬದ್ದು.

ಸಮಸ್ಯೆ ಇಲ್ಲ
ಗ್ರಾ.ಪಂ.ನಿಂದ ಯಾವುದೇ ಸಮಸ್ಯೆ ಆಗಿಲ್ಲ. ಎರಡನೇ ಕಂತಿನ ಹಣ ಬ್ಯಾಂಕ್‌ ಖಾತೆಗೆ ಪಾವತಿ ಆಗಿರುವ ಬಗ್ಗೆ ತೋರಿಸುತ್ತಿದ್ದರೂ ಹಣ ಬಂದಿಲ್ಲ ಎಂದು ಫಲಾನುಭವಿ ಗಮನಕ್ಕೆ ತಂದಿದ್ದಾರೆ. ಆಧಾರ್‌ ಕಾರ್ಡ್‌ ಸಲ್ಲಿಸಿರುವ ಬೇರೆ ಬ್ಯಾಂಕ್‌ ಖಾತೆಗೆ ಹಣ ಪಾವತಿ ಆಗಿರುವ ಸಾಧ್ಯತೆಯ ಬಗ್ಗೆ ಪರಿಶೀಲಿಸಬೇಕಿದೆ. ಈ ಬಗ್ಗೆ ನಾವು ಜಿ.ಪಂ.ನಲ್ಲಿ ಮಾತನಾಡಿದ್ದೇವೆ. ಆ ಕುಟುಂಬಕ್ಕೆ ನೆರವಾಗುವ ಪ್ರಯತ್ನ ಮುಂದುವರಿಸಿದ್ದೇವೆ.
– ಜಯಪ್ರಕಾಶ್‌
ಪಿಡಿಒ, ಪೆರುವಾಜೆ ಗ್ರಾ.ಪಂ.

ಅಲೆದು ಸಾಕಾಗಿದೆ
ಹಲವು ಬಾರಿ ಸುತ್ತಾಡಿದ್ದೇನೆ. ಬ್ಯಾಂಕ್‌ಗೆ ಬಂದಿದೆ ಎಂದು ಪಂಚಾಯತ್‌ ಹೇಳಿದರೆ, ಬಂದಿಲ್ಲ ಎಂದು ಬ್ಯಾಂಕ್‌ನವರು ಹೇಳುತ್ತಾರೆ. ಏನು ಸಮಸ್ಯೆ ಎಂಬುವುದಕ್ಕೆ ಉತ್ತರ ಸಿಕ್ಕಿಲ್ಲ. ಆರು ತಿಂಗಳ ಹಿಂದೆ ಮನೆ ಕಟ್ಟಿದವರಿಗೆ ಎಲ್ಲ ಕಂತು ಸಿಕ್ಕಿದೆ. ನಮಗೆ ಮಾತ್ರ ಸಿಕ್ಕಿಲ್ಲ.
– ಶಶಿಕಲಾ
ಭಾರತಿ ಅವರ ಮಗಳು

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.