ಬೆಳ್ತಂಗಡಿ: ನಗರದ ಹೆಸರಾಂತ ಉದ್ಯಮಿ ಬಾವಿಗೆ ಹಾರಿ ಆತ್ಮಹತ್ಯೆ
Team Udayavani, Aug 12, 2020, 8:54 PM IST
ಬೆಳ್ತಂಗಡಿ: ನಗರದ ಖ್ಯಾತ ಉದ್ಯಮಿ, MRF ಟಯರ್ಸ್ ಮಳಿಗೆ ಮಾಲಕ ಪ್ರಕಾಶ್ ತುಳುಪುಲೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತುಳುಪುಳೆ ಅವರು ಇಂದು ಸಾಯಂಕಾಲದ ಸಮಯ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತಾಗಿ ಇದೀಗ ಮಾಹಿತಿ ಲಭ್ಯವಾಗಿದೆ.
ಈ ಪರಿಸರದಲ್ಲಿ ಹೆಸರಾಂತ ಉದ್ಯಮಿಯಾಗಿ ಪ್ರಕಾಶ್ ಅವರು ಆತ್ಮಹತ್ಯೆಯ ನಿರ್ಧಾರಕ್ಕೆ ಬರಲು ನಿರ್ಧಿಷ್ಟ ಕಾರಣ ಯಾವುದೆಂದು ತಿಳಿದುಬಂದಿಲ್ಲ.
ಇಂದು ಸಂಜೆ 5.30ರ ಸುಮಾರಿಗೆ ತಮ್ಮ ಮನೆ ಮುಂಭಾಗದಲ್ಲೇ ಇರುವ ಮಳಿಗೆ ಬಂದ್ ಮಾಡಿ ಮನೆಗೆ ತೆರಳಿದ್ದರು. ಆ ಬಳಿಕ, ಮನೆ ಹಿಂಭಾಗದ ಶೆಡ್ ಬಳಿಗೆ ಹೋಗಿ ಬರುವುದಾಗಿ ತಮ್ಮ ಮಗಳ ಬಳಿ ತಿಳಿಸಿದ್ದರು.
ಬಹಳ ಹೊತ್ತಾದರೂ ಅಪ್ಪ ಮರಳದಿರುವುದನ್ನು ಕಂಡು ಅವರ ಮಗಳು ಹೊರಬಂದು ನೋಡಿದಾಗ ಪ್ರಕಾಶ್ ಅವರ ಚಪ್ಪಲಿ ಬಾವಿಯ ಸಮೀಪ ಕಂಡಿದೆ. ಇದರಿಂದ ಅನುಮಾನಗೊಂಡ ಮಗಳು ಆತಂಕದಲ್ಲಿ ಕೂಗಿಕೊಂಡಾಗ ಅಕ್ಕಪಕ್ಕದವರು ಗಾಬರಿಗೊಂಡು ಬಂದು ಬಾವಿಯಲ್ಲಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಳಿಕ ಇಸ್ಮಾಯಿಲ್ ಎಂಬುವವರು ಬಾವಿಗೆ ಇಳಿದು ತಳಕ್ಕೆ ಹೋಗಿದ್ದ ಪ್ರಕಾಶ್ ಅವರ ದೇಹವನ್ನು ಮೆಲಕ್ಕೆತ್ತಿ ತಕ್ಷಣವೇ ಆಸ್ಪತ್ರೆಗೆ ರವಾನಿಸುವಲ್ಲಿ ಸಹಕರಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪ್ರಕಾಶ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.