ದಾರಿಹೋಕರಿಗೆ ನೀರು ನೀಡುವ ದೇವಸ್ಯ ಕೃಷಿಕ
Team Udayavani, Apr 11, 2019, 6:00 AM IST
ರಸ್ತೆ ಬದಿ ಅಳವಡಿಸಿರುವ ಕುಡಿಯುವ ನೀರಿನ ನಳ್ಳಿ, ಫಲಕ.
ಸುಬ್ರಹ್ಮಣ್ಯ: ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರೂ ಸಿಗುತ್ತಿಲ್ಲ. ಈ ಸ್ಥಿತಿಯಲ್ಲಿ ಇಲ್ಲೊಬ್ಬ ಕೃಷಿಕರು ಮನೆಯ ನಳ್ಳಿ ಸಂಪರ್ಕದಿಂದ ಸಾರ್ವಜನಿಕರಿಗೆ ನೀರು ಒದಗಿಸುತ್ತಿದ್ದಾರೆ. ಗುತ್ತಿಗಾರು ಸಮೀಪದ ಆಚಳ್ಳಿ ಬಳಿಯ ದೇವಸ್ಯ ನಿವಾಸಿ ಲಕ್ಷ್ಮಣ ಎಂಬವರ ಮನೆ ಕಮಿಲ-ಬಳ್ಪ ಸಂಪರ್ಕ ರಸ್ತೆ ಬದಿಯಲ್ಲಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಕಮಿಲ-ಬಳ್ಪ ಸಂಪರ್ಕ ರಸ್ತೆಯ ಬದಿ ನಳ್ಳಿ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ. ತಮ್ಮ ಮನೆಯಿಂದ ರಸ್ತೆ ತನಕ ಪೈಪ್ ಜೋಡಿಸಿ, ನಳ್ಳಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಒಂದು ವಾರದ ಹಿಂದೆ ನಳ್ಳಿ ಜೋಡಿಸಿ, ಅದಕ್ಕೊಂದು ಫಲಕ ಹಾಕಿದ್ದಾರೆ. ಅದರಲ್ಲಿ ನಮ್ಮ ಮನೆಯ ಕುಡಿಯುವ ನೀರಿನ ನಳ್ಳಿ ಸಂಪರ್ಕದಿಂದ ಸಾರ್ವಜನಿಕರ ತಾತ್ಕಾಲಿಕ ಕುಡಿಯುವ ಮತ್ತು ಸ್ಥಳೀಯರಿಗೆ ಗೃಹ ಪಯೋಗಿ ಬಳಕೆಗೆ ಎಂದು ಬರೆದಿದ್ದಾರೆ. ಬಳ್ಪ-ಕಮಿಲ ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರು ಈ ನಳ್ಳಿಯಿಂದ ನೀರು ಕುಡಿದು ಮುಂದೆ ಸಾಗುತ್ತಿದ್ದಾರೆ.
ಆತ್ಮತೃಪ್ತಿ ಇದೆ
ಬಾವಿಯಲ್ಲಿ ಸದ್ಯದ ಮಟ್ಟಿಗೆ ನೀರು ಇದೆ. ಕುಡಿಯಲು, ಇತರ ಬಳಕೆಗೆ ಕೊರತೆ ಆಗಲಿಕ್ಕಿಲ್ಲ. ಹೀಗಾಗಿ, ಎಲ್ಲರಿಗೂ ಇದರ ಪ್ರಯೋಜನ ಸಿಗಲಿ ಎಂದು ನಮ್ಮ ಮನೆಯಲ್ಲಿ ಕುಡಿಯಲು ಉಪಯೋಗಿಸುವ ನೀರನ್ನೆ ಸಾರ್ವಜನಕರಿಗೆ ರಸ್ತೆ ಬದಿ ನಳ್ಳಿ ಅಳವಡಿಸಿ ಕೊಡುತ್ತಿದ್ದೇನೆ. ಇದ್ದ ನೀರನ್ನು ಹಂಚಿ ಕುಡಿಯುವ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ. ಇದರಲ್ಲಿ ನನ್ನ ದೊಡ್ಡತನವಿಲ್ಲ. ನನಗೆ ತೋಚಿದಂತೆ ಮಾಡಿರುವೆ. ಇದು ಪ್ರಚಾರಕ್ಕಾಗಿ ಅಲ್ಲ. ಆತ್ಮ ತೃಪ್ತಿಗೆ, ಮನಸ್ಸಿನ ಸಮಾಧಾನಕ್ಕೆ ಇದನ್ನು ಮಾಡಿರುವೆ.
ಲಕ್ಷ್ಮಣ ಗೌಡ, ದೇವಸ್ಯ, ಕೃಷಿಕ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.