ಕರಾವಳಿಯಲ್ಲಿ ಭೂಮಿಗೆ ಹೆಚ್ಚಿನ ಮೊತ್ತದ ಪರಿಹಾರಕ್ಕೆ ರೈತರ ಪಟ್ಟು
Team Udayavani, Aug 17, 2017, 8:00 AM IST
ಮಂಗಳೂರು: ಕರಾವಳಿ ಭಾಗದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಕಂಪೆನಿ(ಗೇಲ…)ಯ ಬಹು ನಿರೀಕ್ಷಿತ ಕೊಚ್ಚಿ -ಕುಟ್ಟನಾಡು -ಮಂಗಳೂರು ಗ್ಯಾಸ್ ಪೈಪ್‌ಲೈನ್ ಯೋಜನೆ ಅನುಷ್ಠಾನ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದೆ. ಆ ಪ್ರಕಾರ, ಕೇರಳದ ಕೊಚ್ಚಿಯಿಂದ ಮಂಗಳೂರಿನ ಎಂಸಿಎಫ್‌ಗೆ ನೈಸರ್ಗಿಕ ಅನಿಲ ಪೂರೈಸುವ ಈ ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ 16 ಹಳ್ಳಿಗಳಲ್ಲಿ ರೈತರ ಭೂಮಿಯನ್ನು ಸ್ವಾಧೀನಪಡಿಸಲಾಗುತ್ತದೆ.
ಗ್ಯಾಸ್ ಪೈಪ್‌ಲೈನ್ ಯೋಜನೆಯನ್ನು ಭಾರತ ಸರಕಾರದ ಅಧೀನ ಸಂಸ್ಥೆ, ಪೆಟ್ರೋಲಿಯಂ ಉದ್ಯಮದ ದೈತ್ಯ ಸಂಸ್ಥೆಯಾದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(ಗೈಲ್) ಅನುಷ್ಠಾನಗೊಳಿಸುತ್ತಿದೆ. ಸಂಸ್ಥೆಯ ಅಧಿಕಾರಿಗಳು ಈಗಾಗಲೇ ಗ್ರಾಮ ಪಂಚಾಯತ್‌ಗಳ ಕಾರ್ಯದರ್ಶಿಗಳಿಗೆ ಭೂಸ್ವಾಧೀನ ಸಂಬಂಧಿಸಿದ ದಾಖಲೆ ಪತ್ರಗಳನ್ನು ಒಪ್ಪಿಸಿ, ಆವಶ್ಯಕವಾಗಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡುವ ನಿಟ್ಟಿನಲ್ಲಿ ವಿಶೇಷ ಸಭೆಯನ್ನು ಭೂಮಾಲೀಕರೊಂದಿಗೆ ಮಂಗಳೂರು ಪುರಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತಾದರೂ, ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮತ್ತೂಂದು ಸಭೆ ನಡೆಸಿ, ಸೂಕ್ತ ಪರಿಹಾರದ ಬಗ್ಗೆ ನಿರ್ಧರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ತಿಳಿಸಿದೆ.
ಕೈರಂಗಳದ ಮೂಲಕ ಕರಾವಳಿ ಪ್ರವೇಶ
2007ರಲ್ಲಿ ಗೈಲ್ ಗ್ಯಾಸ್ ಪೈಪ್‌ಲೈನ್ ನಡೆಸಲು ಕೇಂದ್ರದ ಅನುಮತಿ ದೊರಕಿದೆ. ಸುಮಾರು 450 ಕಿ.ಮೀ. ಉದ್ದದ ಗ್ಯಾಸ್ ಪೈಪ್‌ಲೈನ್ ಅಳವಡಿಕೆಯು ಭಾರಿ ಪ್ರತಿರೋಧದ ಮಧ್ಯೆಯೇ ತಮಿಳುನಾಡು ಹಾಗೂ ಕೇರಳದಲ್ಲಿ ಭರದಿಂದ ನಡೆಯುತ್ತಿದೆ. ಇಲ್ಲಿನ ಕಲ್ಲಿಕೋಟೆ-ಕಣ್ಣೂರು-ಕಾಸರಗೋಡು ಮೂಲಕ ಕರ್ನಾಟಕದ 35 ಕಿ.ಮೀ. ಉದ್ದದಲ್ಲಿ ಅನಿಲ ಕೊಳವೆ ಮಾರ್ಗ ಸಾಗಿ ಬರಲಿದೆ. ಕರ್ನಾಟಕ- ಕೇರಳ ಗಡಿಭಾಗದ ಕೈರಂಗಳ ಗ್ರಾಮದ ಶಾರದಾ ಗಣಪತಿ ಪ್ರಾಥಮಿಕ ಶಾಲೆ ಸಮೀಪದಲ್ಲಿ ಈ ಪೈಪ್‌ಲೈನ್ ಕರ್ನಾಟಕವನ್ನು ಪ್ರವೇಶಿಸಲಿದೆ. ಅಲ್ಲಿಂದ ಮುಂದೆ ಮುಡಿಪು, ಕೊಣಾಜೆ, ಬಂಟ್ವಾಳದ ಅರ್ಕುಳ, ಪುದು, ಮಲ್ಲೂರು, ಅದ್ಯಪಾಡಿ, ಕೆಂಜಾರು, ತೋಕೂರು ಮೂಲಕ ಎಂಸಿಎಫ್ ಪ್ರವೇಶಿಸಲಿದೆ. ಈ ಸಂಬಂಧ ತೋಕೂರುವಿನ- 2.6 ಎಕರೆ, ಕೆಂಜಾರು -5.1, ಮಳವೂರು -3.6, ಅದ್ಯಪಾಡಿ – 5.7, ಕಂದಾವರ -1.5, ಅಡೂxರು – 5.6, ಮಲ್ಲೂರು – 3.3, ಪಾವೂರು – 5.5, ಮೇರಮಜಲು -6.2, ಕೈರಂಗಳ – 4.0, ಅರ್ಕುಳ -3.8, ಅಮ್ಮುಂಜೆ – 1.7, ಬಾಳೇಪುಣಿ – 0.03 ಎಕರೆ ಭೂಮಿ ಗ್ಯಾಸ್ ಪೈಪ್‌ಲೈನ್‌ಗೆ ಹೋಗಲಿದೆ. ಮೂಲ ಪ್ರಸ್ತಾವನೆಯಂತೆ ಈ ಯೋಜನೆ 2012 -13ರ ಮಾರ್ಚ್‌ಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಇನ್ನೂ ಕೂಡ ಕರ್ನಾಟಕದಲ್ಲಿ ಭೂಸ್ವಾಧೀನ ಪ್ರಕ್ರಿಯೆಯೇ ಮುಗಿಯದ ಕಾರಣ ಯೋಜನೆ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆಗಳೇ ಜಾಸ್ತಿ.
ಪೈಪ್ ಸಾಗಲು ಬೇಕು 60 ಅಡಿ ಸ್ಥಳ
ಗೇಲ್ ಕಂಪೆನಿಯ ಪೈಪ್‌ಲೈನ್ ಮೂಲಕ ಆರಂಭದಲ್ಲಿ ಎಂಸಿಎಫ್‌ಗೆ ಮಾತ್ರ ಅನಿಲ ಪೂರೈಕೆಯಾಗಲಿದೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಘಟಕ ನಿರ್ಮಾಣ ಮಾಡಿ ಕೊಳವೆ ಮೂಲಕ ಮನೆಗಳಿಗೆ, ಹೋಟೆಲ್‌ಗಳಿಗೆ ಅನಿಲ ಪೂರೈಕೆ ಮಾಡುವ ಗುರಿ ಇದೆ. ಎಲ್‌ಪಿಜಿ ಅನಿಲಕ್ಕಿಂತ ಕಡಿಮೆ ದರದಲ್ಲಿ ಹಾಗೂ ದಿನಪೂರ್ತಿ ಅನಿಲ ಪೂರೈಕೆ ಈ ಯೋಜನೆಯಿಂದ ಸಾಧ್ಯ. ಪೈಪ್‌ಲೈನ್ ಹಾಕಲು ಸ್ವಾಧೀನ ಪಡಿಸುವ ಸ್ಥಳಕ್ಕೆ ನಷ್ಟ ಪರಿಹಾರ ನೀಡಲಾಗುತ್ತದೆ. ಅಲ್ಲದೆ ಜಾಗವನ್ನು ಮಾಲಕರಿಗೆ ಬಿಟ್ಟು ಕೊಡಲಾಗುತ್ತಿದೆ. ಸುಮಾರು 60 ಫೀಟ್ ಸ್ಥಳದಲ್ಲಿ ಪೈಪ್ ಹಾದು ಹೋಗಲಿದ್ದು, ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಹಾಗೂ ಶಾಶ್ವತ ಕೃಷಿ ಬೆಳೆಯಲು ಅವಕಾಶ ಇಲ್ಲ. ತಾತ್ಕಾಲಿಕ ಬೆಳೆಯನ್ನು, ತರಕಾರಿ ಬೆಳೆಯಲು ಅವಕಾಶ ಇದೆ. ಯಾವುದೇ ಅಪಾಯ ಇದರಿಂದ ಇಲ್ಲ ಎನ್ನುವುದು ಗೇಲ್ ಕಂಪೆನಿಯ ಅಭಿಪ್ರಾಯ.
ಗ್ಯಾಸ್ ಪೈಪ್‌ಲೈನ್ ಉದ್ದೇಶ
ಗೈಲ್ ಕಂಪೆನಿ ಕೇರಳದ ಕೊಚ್ಚಿಯಿಂದ ಮಂಗಳೂರಿನ ಎಂಸಿಎಫ್‌ಗೆ ರಾಸಾಯನಿಕ ಗೊಬ್ಬರ ತಯಾರಿಕೆಗಾಗಿ ಗ್ಯಾಸ್ ಪೂರೈಕೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಂಡಿದೆ. ಆರಂಭದಲ್ಲಿ ಎಂಸಿಎಫ್‌ಗೆ ಮಾತ್ರ ಗ್ಯಾಸ್ ಪೂರೈಕೆಯ ಗುರಿ ಇದ್ದು, ಆ ಬಳಿಕ ಮನೆ, ಮನೆಗೆ ಕೊಳವೆ ಮೂಲಕ ಗ್ಯಾಸ್ ಪೂರೈಕೆ ಮಾಡುವ ಉದ್ದೇಶವೂ ಈ ಯೋಜನೆಯಲ್ಲಿದೆ. ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು, ಜಾಗವನ್ನು ಸ್ವಾಧೀನಪಡಿಸಿ ಕೊಡುವ ಜವಾಬ್ದಾರಿ ರಾಜ್ಯ ಸರಕಾರದ್ದು.
ಭೂ ಮಾಲಕರ ಜತೆಗಿನ ಇಂದಿನ ಸಭೆ ಮುಂದೂಡಿಕೆ
ಗೈಲ್ ಗ್ಯಾಸ್‌ಪೈಪ್‌ಲೈನ್ ಸಾಗುವ ಭೂಮಿಯ ವರಿಗೆ ಸಮರ್ಪಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭೂ ಮಾಲಕರ ಜತೆಗೆ ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ಪುರಭವನದಲ್ಲಿ ನಡೆಸಲಾಗಿದೆ. ಆ.17ರಂದು ಎರಡನೇ ಸುತ್ತಿನ ಸಭೆ ನಡೆಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ, ಕಂದಾಯ ಸಚಿವರು ಮಂಗಳೂರಿಗೆ ಅದೇ ಸಮಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಪುರಭವನದಲ್ಲಿ ಆಯೋಜಿಸಲಾದ ಸಭೆಯನ್ನು ಆ. 31ಕ್ಕೆ ದ.ಕ. ಜಿಲ್ಲಾಡಳಿತ ಮುಂದೂಡುವಂತೆ ತಿಳಿಸಿದೆ. ಅದರಂತೆ ಸಭೆಯನ್ನು ಆ. 31ರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ ಎಂದು ಗೈಲ್ ಇಂಡಿಯಾ ಕಂಪೆನಿಯದ ಭೂಸ್ವಾಧೀನ ತಹಶೀಲ್ದಾರ್, ಕೆ.ಬಿ. ಮರೋಲ್ ತಿಳಿಸಿದ್ದಾರೆ.
ಕಡಲ ಬದಿಯಲ್ಲಿ ಸಾಗಲಿ: ಸಂತೋಷ್ ಕುಮಾರ್ ರೈ
ಕೇರಳದ ಕೊಚ್ಚಿಯಿಂದ ಮಂಗಳೂರುವರೆಗೂ ಸಮುದ್ರ ಕಿನಾರೆ ಇದ್ದು, ಸಿಆರ್‌ಝಡ್ ವ್ಯಾಪ್ತಿಯಲ್ಲಿಯೇ ಗ್ಯಾಸ್ ಪೈಪ್ ಅಳವಡಿಸಲು ಸಾಧ್ಯವೇ ಎಂಬುದನ್ನು ಪರಿಶಿಲಿಸುವಂತೆ ನಾವು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ ಎಂದು ಹೋರಾಟಗಾರ ಬೋಳಾÂರ್ ಸಂತೋಷ್ ಕುಮಾರ್ ರೈ ತಿಳಿಸದ್ದಾರೆ. ಇದರಿಂದ ಹಲವು ಕುಟುಂಬಗಳು ಬೀದಿಗೆ ಬರುವುದು ತಪ್ಪುತ್ತದೆ. ಕೃಷಿಕರನ್ನು ಬಲಿ ಕೊಟ್ಟು ಯೋಜನೆ ಕಾರ್ಯಗತ ಮಾಡುವುದು ಬೇಡ. 1 ಸೆಂಟ್ಸ್‌ಗೆ 1 ಲಕ್ಷ ರೂ. ಇರುವಂತಹ ಸ್ಥಳವನ್ನು 2,500 ರೂ.ನಂತೆ ಪರಿಹಾರ ಮೊತ್ತ ನೀಡಲು ಮುಂದಾಗುವುದು ಯಾವ ನ್ಯಾಯ? ಪರಿಹಾರ ಮೊತ್ತ ಸಮರ್ಪಕವಾಗಿ ಎಲ್ಲರಿಗೂ ಒಪ್ಪುವಂತಾಗಲಿ. ಆ ಬಳಿಕ ಗ್ಯಾಸ್ ಪೈಪ್‌ಲೈನ್‌ಗೆ ಸ್ಥಳ ಬಿಟ್ಟುಕೊಡುವ ಬಗ್ಗೆ ನಿರ್ಧರಿಸೋ ಎಂದವರು ಹೇಳಿದ್ದಾರೆ.
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru; ಮದ್ಯ ಕುಡಿಸಿ ಅತ್ಯಾಚಾ*ರ: ಬಿಜೆಪಿ ಮುಖಂಡ ಜಿಮ್ ಸೋಮನ ವಿರುದ್ಧ ಕೇಸ್
Kadur; ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.