ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವಾಗಲಿ: ಪ್ರಭಾಕರ್ ಭಟ್
"ಕೈರಂಗಳ ಕೃಷಿ ಉತ್ಸವ-2019'ಕ್ಕೆ ಚಾಲನೆ
Team Udayavani, Dec 27, 2019, 8:16 PM IST
ಕೈರಂಗಳ: ಸರಕಾರದ ಸಾಲಮನ್ನಾದಿಂದ ರೈತರ ಬದುಕು ಉದ್ಧಾರ ಆಗಲಾರದು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ಕೃಷಿಗೆ ಸರಿಯಾಗಿ ಪ್ರತಿಫಲ ಸಿಗುವ ಯೋಜನೆಯನ್ನು ಸರಕಾರ ರೂಪಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತೀಯ ಕಾರ್ಯಕಾರಣಿ ಸದಸ್ಯ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅಭಿಪ್ರಾಯಪಟ್ಟರು.
ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೆರವಿನೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಡಿಪು ವಲಯ ಸಹಕಾರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಎರಡನೇ ವರ್ಷದ “ಕೈರಂಗಳ ಕೃಷಿ ಉತ್ಸವ-2019’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರೈತರ ಮೇಲೆ ವಿಶೇಷ ಕಾಳಜಿಯಿದೆ. ಈನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷಿಕ ಬೆಳೆದ ಫಸಲನ್ನು ಸಂಗ್ರಹಗಾರವನ್ನು ಸ್ಥಾಪನೆ ಮಾಡಬೇಕು. ಇಂದು ಹಳ್ಳಿಗಳು ನಗರೀಕರಣದ ಪ್ರಭಾವದಿಂದ ಬರಡಾಗುತ್ತಿವೆ. ಕೃಷಿಯನ್ನು ತ್ಯಜಿಸಿ ನಗರಕ್ಕೆ ವಲಸೆ ಹೋಗುತ್ತಿದ್ದಾರೆ ಈ ನಿಟ್ಟಿನಲ್ಲಿ ಕೃಷಿ ಉತ್ಸವಗಳು ಮಕ್ಕಳಲ್ಲಿ ಕೃಷಿಯ ಬಗ್ಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಪೂರಕವಾಗಬೇಕು ಎಂದರು.
ರೈತ ಭೂಮಿಯನ್ನು ಮಾರಾಟ ಮಾಡುವುದಿಲ್ಲ
ನಿಜವಾದ ರೈತ ಕೃಷಿ ಭೂಮಿಯನ್ನು ಮಾರಾಟ ಮಾಡುವುದಿಲ್ಲ . ಅವರಿಗೆ ಮಣ್ಣಿನ ಮೇಲೆ ಪ್ರೀತಿ ಇರುತ್ತದೆ. ಆದರೆ ಕೃಷಿ ಕಾರ್ಯದಿಂದ ವಿಮುಖರಾದವರೂ ಮಾತ್ರ ಮಾರಾಟ ಮಾಡುತ್ತಾರೆ. ಈ ನಿ ನಿಟ್ಟಿನಲ್ಲಿ ಕೃಷಿ ಉತ್ಸವದಲ್ಲಿ ರೈತರಿಗೆ ಆಧುನಿಕ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯವನ್ನು ಕೃಷಿ ಉತ್ಸವದಲ್ಲಿ ವ್ಯವಸ್ಥೆ ಮಾಡಿದೆ ಎಂದರು.
ಜಿ.ಪಂ. ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿದರು.ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಕಿನಿಲ ಅಶೋಕ್ ಭಟ್, ಮಂಗಳೂರು ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಮಂಗಳೂರು ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬ್ಳಿ, ಶಾರದಾ ಗಣಪತಿ ವಿದ್ಯಾಕೇಂದ್ರದ ಕಾರ್ಯದರ್ಶಿ ನಾಗರಾಜ್ ಭಟ್, ತಾ.ಪಂ. ಸದಸ್ಯ ನವೀನ್ ಪಾದಲ್ಪಾಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ್ ಗಟ್ಟಿ, ಕೈರಂಗಳ ವ್ಯವಸಾಯ ಸಹಕಾರಿ ಸಂಘ ಮಹೇಶ್ ಚೌಟ ಚಕ್ರಕೋಡಿ ಉಪಸ್ಥಿತರಿದ್ದರು. ಉತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ರೈ ಸ್ವಾಗತಿಸಿದರು. ಗೌರವಾಧ್ಯಕ್ಷ ಟಿ.ಜಿ. ರಾಜಾರಾಮ್ ಭಟ್ ವಂದಿಸಿದರು. ಶಿಕ್ಷಕ ಶ್ರೀನಿವಾಸ ಭಟ್ ಸೆರಾಜೆ ಮತ್ತು ಯೋಗಿತ ಕಾರ್ಯಕ್ರಮ ನಿರೂಪಿಸಿದರು.
ಕೃಷಿ ಉತ್ಸವಕ್ಕೆ ವಿದ್ಯಾರ್ಥಿಗಳ ದಂಡು
ಕೈರಂಗಳ ಕೃಷಿ ಉತ್ಸವದ ಮೊದಲ ದಿನವಾದ ಶುಕ್ರವಾರ ಬೆಳಗ್ಗಿನಿಂದಲೇ ವಿದ್ಯಾರ್ಥಿಗಳು ಆಗಮಿಸಿ ಕೃಷಿ ಕುರಿತಾದ ಮಾಹಿತಿಯನ್ನು ಪಡೆದುಕೊಂಡರು. ಕೃಷಿ ಯಂತ್ರೋಪಕರಣಗಳು ವಿವಿಧ ಸಾವಯವ ಹಾಗೂ ರಸಗೊಬ್ಬರಗಳು ನವೋದಯ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ತರಕಾರಿ ಬೀಜಗಳು ಸಾವಯವ ತರಕಾರಿ ಬೀಜಗಳ ಮಾರಾಟ, ಕೋಳಿಗಳ ಪ್ರದರ್ಶನ ಜೇನುಸಾಕಣೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಮಾಹಿತಿ ಮಳಿಗೆಗಳು, ಅಲಂಕಾರಿಕ ಮೀನು ಹಾಗೂ ಪಕ್ಷಿಗಳು ಜಾಕ್ ಅನಿಲ್ ಅವರಿಂದ ವಿವಿಧ ತಳಿಗಳ ಹಲಸಿನ ಗಿಡಗಳ ಪ್ರದರ್ಶನ ಮಾರಾಟ, ನರ್ಸರಿಗಳು ಸಾಮ್ರಾಜ್ಯ ಖಾಸಗಿ ಮಾರಾಟಗಾರರಿಂದ ಕೃಷಿಯಾಗಿ ಆಧುನಿಕ ಹೈನುಗಾರಿಕ ಯಂತ್ರೋಪಕರಣಗಳ ಮಾರಾಟ ಮಳಿಗೆಗಳು, ಗೃಹ ಉತ್ಪನ್ನಗಳು ಹಾಗೂ ಗವ್ಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು, ಎಲೆಕ್ಟ್ರಿಕಲ್ಸ್ ಎಲೆಕ್ಟ್ರೋನಿಕ್ಸ್ ಹಾಗೂ ಸೋಲಾರ ಪ್ರದರ್ಶನ-ಮಾರಾಟ, ಕೃಷಿ ನೀರಾವರಿ ಸಲಕರಣೆಗಳ ಪ್ರದರ್ಶನ ಮತ್ತು ಮಾರಾಟ ಪಾರಂಪರಿಕ ಸಲಕರಣೆಗಳ ಪ್ರದರ್ಶನ ವ್ಯವಸ್ಥೆಗೊಳಿಸಿದ್ದು ಡಿ. 29ರ ರವಿವಾರದವರೆಗೆ ಕೃಷಿ ಉತ್ಸವ ನಡೆಯಲಿದೆ.
ಬೆಳೆಗೆ ದರ ನಿಗಧಿ ಅಗತ್ಯ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಂತ್ರೋಪಕರಣಗಳನ್ನು ತಯಾರಿಸಿ ಅದಕ್ಕೆ ದರ ನಿಗದಿ ಮಾಡಲಾಗುತ್ತದೆ. ಆದರೆ ಕೃಷಿಕರು ಬೆಳೆದ ಉತ್ಪನ್ನಗಳಿಗೆ ದರ ನಿಗದಿ ಮಾಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.