ಅತಂತ್ರ ಸ್ಥಿತಿಯಲ್ಲಿ ರೈತರ ಕುಟುಂಬ
Team Udayavani, Feb 13, 2022, 6:05 AM IST
ಮಂಗಳೂರು: ಕೊರೊನಾದಿಂದ ಮೃತಪಟ್ಟ ರೈತರ ಸಾಲ ಮನ್ನಾ ಹೊಣೆಯನ್ನು ಡಿಸಿಸಿ ಬ್ಯಾಂಕ್‌ಗಳಿಗೆ ವರ್ಗಾಯಿಸಿ ಸರಕಾರ ಕೈತೊಳೆದುಕೊಂಡಿದ್ದು, ಘೋಷಣೆಯನ್ನು ನಂಬಿ ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ಸಂತ್ರಸ್ತ ರೈತರ ಕುಟುಂಬಗಳು ಇದೀಗ ಅತಂತ್ರವಾಗಿವೆ.
ರಾಜ್ಯದಲ್ಲಿ ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ ಮೃತಪಟ್ಟಿರುವ 10,187 ರೈತರ 79.47 ಕೋ.ರೂ. ಸಾಲ ಮನ್ನಾ ಮಾಡಲು ಸರಕಾರ ನಿರ್ಧರಿಸಿರುವುದಾಗಿ ಸಹಕಾರ ಸಚಿವ
ಎಸ್.ಟಿ. ಸೋಮಶೇಖರ್ 2021ರ ಜುಲೈಯಲ್ಲಿ ಘೋಷಿಸಿದ್ದರು. ಕುಟುಂಬದ ಅಧಾರವನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ರೈತರ ಕುಟುಂಬಗಳಲ್ಲಿ ಇದು ಹೊಸ ಭರವಸೆ ಮೂಡಿಸಿತ್ತು. ಇನ್ನೇನು ಸಾಲಮನ್ನಾ ಆಗುತ್ತದೆ ಎಂದು ಕುಟುಂಬಗಳು ನಿರೀಕ್ಷೆಯಲ್ಲಿರುವಾಗ ತನ್ನ ಘೋಷಣೆಯನ್ನು ಅನುಷ್ಠಾನಗೊಳಿಸುವ ಬದಲಾಗಿ ಸಾಲ ಮನ್ನಾ ಮಾಡುವ ಹೊಣೆಯನ್ನು ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ. ತಮ್ಮ ಲಾಭದ ಮೊತ್ತದಲ್ಲಿ ಭರಿಸುವಂತೆ ಡಿಸಿಸಿ ಬ್ಯಾಂಕ್‌ಗಳಿಗೆ ಸೂಚಿಸಿದೆ. ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಕಷ್ಟಸಾಧ್ಯ ಎಂಬುದಾಗಿ ಬಹುತೇಕ ಡಿಸಿಸಿ ಬ್ಯಾಂಕ್‌ಗಳು ಹೇಳುತ್ತಿವೆ. ಪರಿಣಾಮ ಇದೀಗ ಸುಸ್ತಿ ಅವಧಿ ಮೀರಿರುವ ಸಾಲಗಳ ಪಾವತಿಗೆ ಸಹಕಾರಿ ಬ್ಯಾಂಕ್‌ಗಳಿಂದ ನೋಟಿಸ್ ಬರುತ್ತಿದ್ದು ರೈತರ ಕುಟುಂಬಗಳು ಕಂಗಲಾಗಿವೆ.
ಕೊರೊನಾದಿಂದಾಗಿ ಹೆಚ್ಚಿನ ಡಿಸಿಸಿ ಬ್ಯಾಂಕ್‌ಗಳು ಯಥೇಷ್ಟ ಲಾಭದಲ್ಲಿಲ್ಲ. ಭಾರೀ ಲಾಭದಲ್ಲಿರುವ ಬ್ಯಾಂಕ್‌ಗಳಿಗೆ ಇದು ಸಾಧ್ಯವಾಗಬಹುದು. ಈ ಪರಿಸ್ಥಿತಿಯಲ್ಲಿ ಕೋಟ್ಯಂತರ ರೂ. ಹೆಚ್ಚುವರಿ ಹೊರೆಯನ್ನು ಸರಕಾರ ನಮ್ಮ ಮೇಲೆ ಹೊರಿಸಿದರೆ ಬ್ಯಾಂಕ್‌ಗಳ ಅರ್ಥಿಕ ಸಮತೋಲನಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ಡಿಸಿಸಿ ಬ್ಯಾಂಕ್‌ಗಳ ವಲಯದಿಂದ ಕೇಳಿಬರುತ್ತಿರುವ ಅಳಲು.
ನಿಲುವು ಸ್ಪಷ್ಟಗೊಳ್ಳಬೇಕಾಗಿದೆ
ಸಾಲ ಮನ್ನಾ ಮಾಡುವುದಾಗಿ ಹೇಳಿದ್ದು ಸರಕಾರ. ಇದನ್ನು ನಂಬಿದ್ದ ಸಾವಿರಾರು ರೈತರ ಕುಟುಂಬಗಳು ಇದೀಗ ಬರುತ್ತಿರುವ ಸಾಲಮರುಪಾವತಿ ನೋಟಿಸ್‌ಗಳಿಂದ ಕಂಗೆಟ್ಟಿವೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಹೊಣೆ ಸರಕಾರದ ಮೇಲಿದೆ. ಡಿಸಿಸಿ ಬ್ಯಾಂಕ್‌ಗಳು ಕೊರೊನಾದಿಂದ ಮೃತಪಟ್ಟಿರುವ ರೈತರ ಸಾಲ ಮನ್ನಾ ಮಾಡದಿದ್ದರೆ ಮುಂದೇನು ಎಂಬ ಬಗ್ಗೆ ಸರಕಾರ ಸರಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕಾಗಿದೆ.
ಜಿಲ್ಲೆ ಮೃತಪಟ್ಟ
ರೈತರು ಸಾಲ
(ರೂ.ಗಳಲ್ಲಿ)
ಬೆಳಗಾವಿ 3,334 23,84,51,700
ಬಾಗಲಕೋಟೆ 672 5,42,26,261
ದಕ್ಷಿಣ ಕನ್ನಡ 152 2,40,63,450
ಬಳ್ಳಾರಿ 357 3,65,98,411
ಬೆಂಗಳೂರು 381 2,36,72,500
ಬೀದರ್ 824 5,47,68,271
ಚಿಕ್ಕಮಗಳೂರು 113 2,03,86,020
ಚಿತ್ರದುರ್ಗ 156 1,63,71,000
ದಾವಣಗೆರೆ 402 2,66,22,071
ಹಾಸನ 454 2,86,42,000
ಕಲಬುರಗಿ 224 8,73,8,776
ಧಾರವಾಡ 376 2,07,10,455
ಕೊಡಗು 113 1,82,99,040
ಮಂಡ್ಯ 410 2,73,28,268
ಮೈಸೂರು 281 3,13,99,000
ರಾಯಚೂರು 237 1,92,03,700
ಶಿವಮೊಗ್ಗ 307 3,27,01,000
ತುಮಕೂರು 307 1,87,22,000
ವಿಜಯಪುರ 754 5,13,40,000
ಕೊರೊನಾದಿಂದ ಮೃತಪಟ್ಟಿರುವ ರೈತರ ಸಾಲ ಮನ್ನಾ ಮಾಡುವಂತೆ ಡಿಸಿಸಿ ಬ್ಯಾಂಕ್‌ಗಳಿಗೆ ಯಾವುದೇ ಆದೇಶ ನೀಡಿಲ್ಲ. ಆದರೆ ಬ್ಯಾಂಕ್‌ಗಳಿಗೆ ಆರ್ಥಿಕ ಹೊಡೆತ ಬೀಳದಂತೆ ಲಾಭಾಂಶದಲ್ಲಿ ಒಂದಷ್ಟು ಪರ್ಸೆಂಟೇಜ್ ಸಾಲ ಮನ್ನಾ ಮಾಡಿ ಎಂದು ಸೂಚಿಸಿದ್ದೇವೆ. 1 ಲಕ್ಷ, 75 ಸಾವಿರ, 50 ಸಾವಿರ, 25,000 ರೂ. ಹೀಗೆ ಬ್ಯಾಂಕ್‌ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಮನ್ನಾ ಮಾಡುತ್ತಾರೆ. – ಎಸ್.ಟಿ. ಸೋಮಶೇಖರ್, ಸಹಕಾರ ಸಚಿವ
-ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.