ಟೋಲ್‌ಗೇಟ್‌ನಲ್ಲಿ ಫಾಸ್ಟ್ ಟ್ಯಾಗ್ ಲೇನ್‌ಗೆ ಬಿಡುವು, ಪಾವತಿ ಮಾಡುವವರಿಗೆ ಕ್ಯೂ ಬಿಸಿ !
-ಸಶಸ್ತ್ರ ಪೊಲೀಸ್ ಭದ್ರತೆ
Team Udayavani, Dec 15, 2019, 8:02 PM IST
ಸುರತ್ಕಲ್: ಕೇಂದ್ರ ಸರಕಾರ ಫಾಸ್ಟ್ ಟ್ಯಾಗ್ ಕಡ್ಡಾಯ ಮುಂದೂಡಿದ್ದು ಶೇ 60ಕ್ಕೂ ಅಧಿಕ ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲ. ಹೀಗಾಗಿ ಸುರತ್ಕಲ್ ಟೋಲ್‌ಕೇಂದ್ರದಲ್ಲಿ ರವಿವಾರ ಫಾಸ್ಟ್ ಟ್ಯಾಗ್ ಲೇನ್‌ಗಳಲ್ಲಿ ವಿರಳವಾಗಿ ವಾಹನ ಸಂಚರಿಸಿದರೆ ,ಇತ್ತ ಹಣ ಪಾವತಿ ಲೇನ್‌ಗಳಲ್ಲಿ ಕ್ಯೂ ಕಂಡು ಬಂತು. ಸುರತ್ಕಲ್‌ನ ಎರಡು ಲೇನ್‌ಗಳಲ್ಲಿ ಹಣ ಪಾವತಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಫಾಸ್ಟ್ ಟ್ಯಾಗ್ ರೀಡಿಂಗ್‌ನಲ್ಲಿ ರವಿವಾರ ಸರ್ವರ್ ವೇಗವಿದ್ದುದರಿಂದ ವಾಹನ ಸವಾರರಿಗೆ ಕಾಯುವ ಪ್ರಮೇಯ ಬರಲಿಲ್ಲ.ಟೋಲ್ ಸೆನ್ಸಾರ್ ಮುಂದೆ ಬಂದು ನಿಂತ ಐದು ಸೆಕೆಂಡ್‌ಗಳಲ್ಲಿ ಗೇಟ್ ತೆರೆಯಲ್ಪಡುತ್ತಿತ್ತು.ಇನ್ನು ಕೆಲವು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿದ್ದರೂ ಆಕ್ಟಿವೇಟ್ ಮಾಡಿರಲಿಲ್ಲ. ಸ್ಟಿಕ್ಕರ್ ಮುಂಭಾಗ ಧೂಳು ನಿಂತಿದ್ದ ವಾಹನಗಳನ್ನು ಹ್ಯಾಂಡ್ ಸ್ಕ್ಯಾನರ್ ಬಳಕೆ ಮಾಡಿ ಕಳಿಸಿಕೊಡಲಾಯಿತು.ಕಂಪ್ಯೂಟರ್ ಕೈಕೊಟ್ಟಲ್ಲಿ 10ಕ್ಕೂ ಮಿಕ್ಕಿ ಸ್ಕ್ಯಾನರ್ ಗಳು ಟೋಲ್ ಸಿಬಂದಿಗಳಿಗೆ ಒದಗಿಸಲಾಗಿದೆ. ಫಾಸ್ಟ್ ಟ್ಯಾಗ್ ಲೇನ್‌ನಲ್ಲಿ ನಿಮಿಷಕ್ಕೆ ಸರಾಸರಿ ಆರರಿಂದ ಏಳು ವಾಹನ ಸಂಚರಿಸುತ್ತಿತ್ತು.
ಪೊಲೀಸ್ ಭದ್ರತೆ:
ರವಿವಾರದಿಂದ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.ಒಂದು ತುಕಡಿ ಕೆಎಸ್‌ಆರ್‌ಪಿ , ಹೆ„ವೆ ಪೆಟ್ರೋಲಿಂಗ್ ವಾಹನಗಳು ಭದ್ರತೆ ಒದಗಿಸಿದ್ದವು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಅ ಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಬೀಚ್ ರಸ್ತೆಯಲ್ಲಿ ವಾಹನಗಳ ಓಡಾಟ!
ಸ್ಥಳೀಯ ವಾಹನಗಳು ಸುರತ್ಕಲ್ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿಯ ಬೀಚ್ ರಸ್ತೆಯಾಗಿ ಸಾಗಿ ಮುಕ್ಕ ಹೆದ್ದಾರಿಯನ್ನು ಸೇರುತ್ತಿದ್ದವು. ಹೆಚ್ಚಿನ ವಾಹನಗಳು ಟೋಲ್ ನೀಡುವುದನ್ನು ತಪ್ಪಿಸಲು ಈ ಮಾರ್ಗವನ್ನು ಆಯ್ಕೆ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.