ಪ್ರಾಪರ್ಟಿ ಕಾರ್ಡ್‌ ಅವ್ಯವಸ್ಥೆ ಸರಿಪಡಿಸದಿದ್ದರೆ ಉಪವಾಸ ಸತ್ಯಾಗ್ರಹ: ವೇದವ್ಯಾಸ

Team Udayavani, Jun 11, 2019, 5:00 AM IST

b-39

ಮಹಾನಗರ: ನಗರದಲ್ಲಿ ಸ್ಥಿರಾಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡುವುದನ್ನು ತತ್‌ಕ್ಷಣವೇ ಮುಂದೂಡಬೇಕು. ಈ ಕುರಿತಂತೆ ಎದುರಾಗಿರುವ ಸಮಸ್ಯೆ, ಜನರ ಸಂಕಷ್ಟಗಳ ಬಗ್ಗೆ ಸರಕಾರ ಕೂಡಲೇ ಸ್ಪಂದಿ ಸಬೇಕು. ಇಲ್ಲವಾದರೆ, ಅನ್ನಸತ್ಯಾಗ್ರಹ ಮಾಡುವ ಮುಖೇನ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್‌ ಎಚ್ಚರಿಸಿದ್ದಾರೆ.

ಪ್ರಾಪರ್ಟಿ ಕಾರ್ಡ್‌ ವಿತರಣೆಯ ಅವ್ಯವಸ್ಥೆಯನ್ನು ಖಂಡಿಸಿ ಮಂಗಳೂರಿನ ಮಿನಿ ವಿಧಾನಸೌಧದ ಆವರಣದ ಪ್ರಾಪ ರ್ಟಿ ಕಾರ್ಡ್‌ ವಿತರಣೆ ಕೇಂದ್ರದ ಎದುರು ಬಿಜೆಪಿ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನ ಸಭೆಯಲ್ಲಿ ಮಾತನಾಡಿದರು. ಮಂಗಳೂರು ಸಬ್‌ರಿಜಿಸ್ಟ್ರಾರ್‌ ತಾಲೂಕು, ನಗರದಲ್ಲಿ ಒಟ್ಟು 1,70,000ಕ್ಕೂ ಅಧಿಕ ಆಸ್ತಿಗಳಿದ್ದು, ಈಗ ದೊರಕಿರುವ ಮಾಹಿತಿ ಪ್ರಕಾರ ಕೇವಲ 30,000ರೂ.ಗಳಿಂದ 35,000 ಆಸ್ತಿಗಳಿಗೆ ಮಾತ್ರ ಪ್ರಾಪರ್ಟಿ ಕಾರ್ಡ್‌ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆಸ್ತಿ ಪರಭಾರೆಗೆ ಪ್ರಾಪರ್ಟಿ ಕಾರ್ಡ್‌ ಅನ್ನು ಕಡ್ಡಾಯಗೊಳಿಸುವಾಗ ಶೇ.80ಕ್ಕೂ ಅಧಿಕ ಜನರಿಗೆ ಪ್ರಾಪರ್ಟಿ ಕಾರ್ಡ್‌ನ್ನು ಜನರಿಗೆ ವಿತರಿಸಲಾಗಿತ್ತು. ಆದರೆ ಜನತೆಯ ತಾಳ್ಮೆಯನ್ನು ಪರಿಶೀಲಿಸಲು ಸರಕಾರವು ಇದನ್ನು ಹೇರಿರುವುದು ಖಂಡನೀಯ ಎಂದರು.

ಸುಮಾರು 2 ತಿಂಗಳ ಹಿಂದೆ ಕಡ್ಡಾಯವಾಗಿ ಪ್ರಾಪರ್ಟಿ ಕಾರ್ಡ್‌ ನೀಡಬೇಕಾದದ್ದನ್ನು ಮುಂದೂ ಡುವ ಸಮಯದಲ್ಲಿ ಯುಪಿಒಆರ್‌ ಕಚೇರಿಯಲ್ಲಿ ಸಾರ್ವ ಜನಿಕರಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಸಂಪೂಣ ìವಾಗಿ ಪೂರೈಕೆ ಮಾಡಿದ ಅನಂತರವೇ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವುದಾಗಿ ಭೂದಾ ಖ ಲೆಗಳ ಆಯುಕ್ತರು ತಿಳಿಸಿದ್ದರು. ಆದರೆ, ಯುಪಿಒಆರ್‌ ಎಲ್ಲ ವ್ಯವಸ್ಥೆಗಳು ಸದ್ಯಕ್ಕೆ ಸಂಪೂರ್ಣ ಅವ್ಯ ವಸ್ಥೆ ಯಲ್ಲಿದೆ. ಇಲ್ಲಿ ಯಾರಿಗೂ ಸರಿಯಾದ ಮಾಹಿತಿ ಪ್ರಥಮವಾಗಿ ಸಿಗುವುದಿಲ್ಲ. ಬೇಕಾದ ಕಂಪ್ಯೂಟರ್‌, ಸ್ಕಾನರ್‌ ವ್ಯವಸ್ಥೆಯೂ ಇಲ್ಲ. ಬರುವ ನಾಗರಿ ಕರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ, ಆಸನ ವ್ಯವಸ್ಥೆ ಯೂ ಇಲ್ಲ. ಇದರ ಮಧ್ಯೆಯೇ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡುತ್ತಿರುವುದು ಯಾವ ನ್ಯಾಯ ಎಂದವರು ಪ್ರಶ್ನಿಸಿದರು.

ಪ್ರಮುಖರಾದ ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು, ಬ್ರಿಜೇಶ್‌ ಚೌಟ, ಜಿ.ಆನಂದ್‌, ನಿತಿನ್‌ ಕುಮಾರ್‌, ರಮೇಶ್‌ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ, ಪ್ರಭಾ ಮಾಲಿನಿ, ಸಂಧ್ಯಾ ವೆಂಕಟೇಶ್‌, ಶಿವರಾಮ್‌ ಮಣಿಯಾಣಿ, ಪುರಂದರ ಶೆಟ್ಟಿ, ಶ್ರೀಧರ್‌ ಸುವರ್ಣ, ಪ್ರವೀಣ್‌ ಕುಮಾರ್‌ ಅದ್ಯಪಾಡಿ, ರವಿ ಪ್ರಸನ್ನ, ವಿಕ್ರಮ್‌, ಭರತ್‌, ರವಿ ಪ್ರಸಾದ್‌, ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್‌ ಉಪಸ್ಥಿತರಿದ್ದರು.

ಶೇ.20ರಷ್ಟು ಪ್ರಾಪರ್ಟಿ ಕಾರ್ಡ್‌ ನೀಡಿಲ್ಲ
ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಮಂಗಳೂರಿನ 32 ಗ್ರಾಮಗಳಲ್ಲಿರುವ ಆಸ್ತಿಗಳ ಪೈಕಿ ಶೇ.75ಕ್ಕಿಂತಲೂ ಅಧಿಕ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್‌ ನೀಡಿದ ನಂತರ ಕಡ್ಡಾಯ ಮಾಡುವುದು ಸಮಂಜಸ. ಆದರೆ, ಮಂಗಳೂರಿನಲ್ಲಿ ಶೇ.20ರಷ್ಟು ಕೂಡ ಪ್ರಾಪರ್ಟಿ ಕಾರ್ಡ್‌ ನೀಡದೆ ಈಗ ಏಕಾಏಕಿ ಕಡ್ಡಾಯ ಮಾಡುವುದು ಸರಿಯಲ್ಲ. ಯಾವುದೇ ವ್ಯವಸ್ಥೆಗಳನ್ನು ಪೂರ್ಣವಾಗಿ ಮಾಡದೆ ಇದೀಗ ಸರಕಾರ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಮಾಡಲು ಮುಂದಾಗಿರುವುದು ಖಂಡನೀಯ ಎಂದರು.

ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಕ್ರಮ ಜಾರಿ
ನಗರ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಕ್ರಮ ಸೋಮವಾರದಿಂದ ಮತ್ತೆ ಜಾರಿಗೆ ಬಂದಿದೆ. ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ಮೂಲ್ಕಿ ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ಮಾರಾಟ, ನೋಂದಣಿಗೆ ಸೋಮವಾರದಿಂದ ಪ್ರಾಪರ್ಟಿಕಾರ್ಡ್‌ ಕಡ್ಡಾಯವಾಗಿದೆ. ಕಡ್ಡಾಯಕ್ಕೆ ನೀಡಿದ್ದ ವಿನಾಯತಿ ಜೂ. 10ಕ್ಕೆ ಕೊನೆಗೊಂಡಿದೆ. ಉಪನೋಂದಣಿ ಕಚೇರಿಗಳ ಸರ್ವರ್‌ಗಳಿಗೆ ಪ್ರಾಪರ್ಟಿ ಕಾರ್ಡ್‌ ಸರ್ವರ್‌ ಜೋಡಣೆಯಾಗಿದೆ. ಕಾರ್ಡ್‌ ವಿತರಣೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಸೋಮವಾರ ಸುಮಾರು 70 ಪ್ರಾಪರ್ಟಿ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಪ್ರಾಪರ್ಟಿ ಕಾರ್ಡ್‌ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ

Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.