ಫೆ. 10, 11: ಕುಟುಂಬ ಆಶೀರ್ವಾದ ಕೂಟ, ವಿಶೇಷ ಪ್ರಾರ್ಥನೆ
Team Udayavani, Feb 9, 2018, 12:13 PM IST
ಮಂಗಳೂರು: ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿರುವ ಜೀಸಸ್ ಕಾಲ್ಸ್ ಮಂಗಳೂರು ಆಶ್ರಯದಲ್ಲಿ ಫೆ. 10 ಮತ್ತು 11ರಂದು ಮಂಗಳೂರು ಕುಟುಂಬ ಆಶೀರ್ವಾದ ಕೂಟ, ದೇವರ ಸಂದೇಶ ಮತ್ತು ಸಿಸ್ಟರ್ ಸ್ಟೆಲ್ಲಾ ದಿನಕರನ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟನಾ ಸಮಿತಿಯ ಅಧ್ಯಕ್ಷ ರೆ| ಎಡ್ವಿನ್ ವಾಲ್ಟರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ಬಲ್ಮಠ ಮೈದಾನದಲ್ಲಿ ಸಂಜೆ 5.30ರಿಂದ 8.30ರ ತನಕ ನಡೆಯುವ ಎರಡು ದಿನಗಳ ಪ್ರಾರ್ಥನಾ ಕೂಟದಲ್ಲಿ ಸುಮಾರು 5,000ಕ್ಕೂ ಹೆಚ್ಚಿನ ಮಂದಿ ಭಾಗವಹಿಸಲಿದ್ದಾರೆ. ಸಾರ್ವಜನಿಕರಿಗೂ ಮುಕ್ತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಜೀಸಸ್ ಕಾಲ್ಸ್ ಕ್ರಿಶ್ಚಿಯನ್ ಮಿನಿಸ್ಟ್ರಿ ಆರ್ಗನೈಸೇಶನ್‌ನಿಂದ ಸ್ಥಾಪನೆಗೊಂಡಿದ್ದು ದಿ| ಡಿ.ಜಿ.ಎಸ್. ದಿನಕರನ್ ಅವರು ಸಂಸ್ಥಾಪಕರು. ಅವರ ಪುತ್ರ ತಮಿಳುನಾಡಿನ ಕೊಯಮತ್ತೂರು ಕಾರುಣ್ಯ ಯುನಿವರ್ಸಿಟಿಯ ಚಾನ್ಸ್‌ಲರ್ ಡಾ| ಪೌಲ್ ದಿನಕರನ್ ಅವರ ಮುಂದಾಳತ್ವದ ಅಪಾರ ಅನುಯಾಯಿಗಳನ್ನು ಹೊಂದಿರುವ ಸಂಸ್ಥೆ ಇದಾಗಿದೆ. ಈ ಕಾರ್ಯಕ್ರಮವು ಶಾಂತಿ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಬೆಳೆಸುವಲ್ಲಿ ಪೂರಕವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೀಸಸ್ ಕಾಲ್ಸ್ ಬೆಂಗಳೂರಿನ ರೀಜನಲ್ ಮ್ಯಾನೇಜರ್ ವಂ| ದಿನೇಶ್ ವಿ., ಸಮಿತಿಯ ಉಪಾಧ್ಯಕ್ಷ ಜಯಕರ ಸಮರ್ಥ, ಕಾರ್ಯದರ್ಶಿ ಜೋ ಡೇವಿಡ್ ಮತ್ತು ಸಮಿತಿಯ ಸಾರ್ವಜನಿಕ ಸಂಪರ್ಕಾಧಿಕಾರಿ ವಾಲ್ಟರ್ ಕರ್ಕಡ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.