ಫೆ. 4: ಅಮ್ಮನೆಡೆಗೆ ನಮ್ಮ ನಡೆ
Team Udayavani, Jan 9, 2018, 11:27 AM IST
ಮಂಗಳೂರು: ಶ್ರೀ ಕ್ಷೇತ್ರ ಕಟೀಲಿಗೆ 5ನೇ ವರ್ಷದ ಪಾದಯಾತ್ರೆ ಅಭಿಯಾನ “ಅಮ್ಮನೆಡೆಗೆ ನಮ್ಮ ನಡೆ’ ಫೆ.4ರಂದು ನಡೆಯಲಿದೆ ಎಂದು ಅಭಿಯಾನ ಅಧ್ಯಕ್ಷ ಸಂದೀಪ್ ಶೆಟ್ಟಿ ಮರ ವೂರು ತಿಳಿಸಿದರು.
ಬೆಳಗ್ಗೆ 6.30ಕ್ಕೆ ಮರವೂರು ಸೇತುವೆ ಬಳಿ ಇರುವ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಕ್ತರು ಸಮಾವೇಶಗೊಂಡು ಸಾಮೂಹಿಕ ಪ್ರಾರ್ಥನೆ ಬಳಿಕ 7 ಗಂಟೆಗೆ ಪಾದಯಾತ್ರೆ ಆರಂಭಗೊಳ್ಳ ಲಿದೆ. ದುರ್ಗಾದೇವಿ ಚಿತ್ರಪಟ ಹೊತ್ತ ವಾಹನದೊಂದಿಗೆ ಜಾಥಾ ಸಾಗ ಲಿದ್ದು, ಕ್ಷೇತ್ರದಲ್ಲಿ ದೇವಿ ದರ್ಶನ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾಸೋಹದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ಸುಮಾರು 25,000 ಮಂದಿ ಭಾಗ ವಹಿಸಿದ್ದರು ಎಂದು ಅವರು ಹೇಳಿದರು.
ಭಾಸ್ಕರ್ ರೈ ಕುಕ್ಕುವಳ್ಳಿ, ಸುಕೇಶ್ ಶೆಟ್ಟಿ ಮುಂಡಾರು ಗುತ್ತು, ನಿವೇದಿತಾ ಎನ್. ಶೆಟ್ಟಿ, ವೇಣುಗೋಪಾಲ್ ಪುತ್ರನ್ ಉಪಸ್ಥಿತರಿದ್ದರು.
“ಪಂಚಮ ನಡೆ ರಿಕ್ಷಾದ ಕಡೆ’
ಪಾದಯಾತ್ರೆಯ 5ನೇ ವರ್ಷದ ಸೇವಾ ಅಭಿಯಾನದ ಅಂಗವಾಗಿ ಸಮಿತಿಯು “ಪಂಚಮ ನಡೆ ರಿಕ್ಷಾದ ಕಡೆ’ ಎಂಬ ವಿಶಿಷ್ಟ ಕಾರ್ಯಕ್ರಮ ವನ್ನು ಆಯೋಜಿಸಿದೆ. ಬಡ ರಿಕ್ಷಾ ಚಾಲಕರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ನೋಂದಣಿ ಪ್ರಕ್ರಿಯೆ ನಡೆಸಿದ್ದು, 150 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಫೆ. 11ರಂದು ರಿಕ್ಷಾ ಚಾಲಕರಿಗೆ ಸಹಾಯ ಧನ ವಿತರಿಸಲಾಗುವುದು. ರಿಕ್ಷಾದ ಮೇಲೆ ಮಾಡಿರುವ ಸಾಲ ಕಂತನ್ನು ತುಂಬಲು ಕಷ್ಟಪಡುತ್ತಿರುವ 50 ಮಂದಿಗೆ ತಲಾ 8,000 ರೂ. ಹಾಗೂ 100 ಮಂದಿಗೆ ತಲಾ 6,000 ರೂ.ಗಳಂತೆ ಆರ್ಥಿಕ ನೆರವು ನೀಡಲಾಗುವುದು ಸಂದೀಪ್ ಶೆಟ್ಟಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.