ಫೆ. 9 ರಿಂದ 11ರ ವರೆಗೆ ಹಕ್ಕಿ ಹಬ್ಬ
Team Udayavani, Feb 3, 2018, 10:58 AM IST
ಮಹಾನಗರ : ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸೇರಿದಂತೆ ವಿವಿಧ ರೀತಿಯ ‘ಉತ್ಸವ’ಗಳನ್ನು ಆಯೋಜಿಸುತ್ತಿರುವ ಮಂಗಳೂರು ಇದೀಗ ವಿನೂತನವಾದ ‘ಬರ್ಡ್ ಫೆಸ್ಟಿ ವಲ್'(ಹಕ್ಕಿ ಹಬ್ಬ)ಗೆ ಸಜ್ಜಾಗುತ್ತಿದೆ.
ರಂಗನತಿಟ್ಟು, ದಾಂಡೇಲಿ ಹಾಗೂ ಬಳ್ಳಾರಿಯಲ್ಲಿ ಈಗಾಗಲೇ ಯಶಸ್ವಿಯಾಗಿರುವ ಈ ಹಬ್ಬ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ವಿಶೇಷವೆಂದರೆ ಸಮುದ್ರದಲ್ಲಿರುವ ಅಪರೂಪದ ಹಕ್ಕಿಗಳ ವೀಕ್ಷಣೆ ಹಾಗೂ ಛಾಯಾಗ್ರಹಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ನೇತ್ರಾವತಿ ನದಿ ಬಳಿ ಫೋಟೋಗ್ರಾಫರ್ ಸತೀಶ್ ಇರಾ ಅವರ ಕೆಮರಾಕ್ಕೆ ಸೆರೆ ಸಿಕ್ಕ ಅಪರೂಪದ ಹಕ್ಕಿ.
ಫೆ.9ರಿಂದ 11ರವರೆಗೆ ‘ಹಕ್ಕಿ ಹಬ್ಬ’ ನಡೆಯಲಿದೆ. ಹಕ್ಕಿಗಳ ಕುರಿತು ಆಸಕ್ತರಿಗೆ ಹಾಗೂ ಅಧ್ಯಯನಶೀಲರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದೊಂದಿಗೆ ಸ್ಥಳೀಯರಲ್ಲೂ ಪರಿಸರ-ಹಕ್ಕಿಗಳ ಕುರಿತು ಜಾಗೃತಿ ಮೂಡಲಿ ಎಂಬುದೂ ಸೇರಿದೆ. ಮಣಿಪಾಲ ಹಾಗೂ ಮಂಗಳೂರು ವ್ಯಾಪ್ತಿಯ ಬರ್ಡ್ ಫೋಟೋಗ್ರಾಫರ್ ಹಾಗೂ ಆಸಕ್ತರು ಪಾಲ್ಗೊಳ್ಳುವರು.
ತಜ್ಞರು ಭಾಗವಹಿಸುವರು
ಮಂಗಳೂರಿನ ಸಮುದ್ರದಲ್ಲಿ ಸುಮಾರು 10-15 ಕಿ.ಮೀ. ನಷ್ಟು ದೂರದವರೆಗೆ ಆಸಕ್ತರನ್ನು ಬೋಟು ಮೂಲಕ ಕರೆದೊಯ್ದು ಹಕ್ಕಿಗಳ ದಿಗªರ್ಶನ ಮಾಡಿಸುವುದು ಈ ಉತ್ಸವದ ವಿಶೇಷ. ಇದಕ್ಕಾಗಿ ಈಗಾಗಲೇ ಪಣಂಬೂರು ಕಡಲ ಕಿನಾರೆಯಿಂದ ಕೆಲವು ಬೋಟುಗಳನ್ನು ಪಡೆದುಕೊಳ್ಳಲಾಗುತ್ತಿದೆ. ಅಂಡಮಾನ್, ನಿಕೋಬಾರ್ ವ್ಯಾಪ್ತಿಯಲ್ಲಿ ಹಕ್ಕಿಗಳ ಬಗ್ಗೆ ಅಭ್ಯಸಿಸಿದ ತಜ್ಞರೂ ಭಾಗವಹಿಸುವರು.
ರಾಜ್ಯ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಇಕೋ ಟೂರಿಸಂ ಡೆವಲಪ್ ಮೆಂಟ್ ಬೋರ್ಡ್ ನೇತೃತ್ವದಲ್ಲಿ ಈ ಹಬ್ಬ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಅರಣ್ಯ ಸಚಿವರೂ ಆಗಿರುವ ಹಿನ್ನೆಲೆಯಲ್ಲಿ ಈ ಅವಕಾಶ ಸಿಕ್ಕಿದೆ. ಆನ್ ಲೈನ್ ಮೂಲಕ ಆಸಕ್ತರು ಪಾಲ್ಗೊಳ್ಳುವ ಉತ್ಸಾಹ ತೋರಿದ್ದಾರೆ.
ಫೆ.9ರಂದು ಬೆಳಗ್ಗೆ 11ರ ಸುಮಾರಿಗೆ ಪುರಭವನದಲ್ಲಿ ಹಬ್ಬವನ್ನು ಉದ್ಘಾಟಿಸಲಾಗುವುದು. ಗುರುಪುರ ನದಿ ಬದಿಯ ಪಿಲಿಕುಳ ರಿವರ್ ಲಾಡ್ಜ್ನಲ್ಲಿ ಸಮೀಪ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ , ಸಂಜೆಯ ನಿಗದಿತ ಸಮಯದಲ್ಲಿ ಕುದುರೆಮುಖ, ಕುಂದಾಪುರ ಸೇರಿದಂತೆ ಹಕ್ಕಿಗಳು ಅಧಿಕ ಸಂಚಾರವಿರುವ ಪ್ರದೇಶಗಳಿಗೆ ಭೇಟಿ ನೀಡಲಾಗುತ್ತದೆ. ಇದರ ಮಧ್ಯೆ ನುರಿತರಿಂದ ಹಕ್ಕಿಗಳ ಕುರಿತ ಛಾಯಾಚಿತ್ರ ಪ್ರದರ್ಶನ, ಸಮಾಲೋಚನ ಸಭೆ ನಡೆಯಲಿದೆ.
ರಾಜ್ಯದ ನಾಲ್ಕನೇ ಹಕ್ಕಿಹಬ್ಬ
ರಾಜ್ಯದ 4ನೇ ಹಕ್ಕಿಹಬ್ಬವನ್ನು ಫೆ.9ರಿಂದ 11ರವರೆಗೆ ಆಯೋಜಿಸಲಾಗಿದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಹಕ್ಕಿಗಳ ಕುರಿತ ಆಸಕ್ತರು ಭಾಗವಹಿಸುವರು. ಮಂಗಳೂರು ವ್ಯಾಪ್ತಿಯ ಬೇರೆ ಬೇರೆ ಕಡೆಗಳಲ್ಲಿ ಹಕ್ಕಿಗಳ ವೀಕ್ಷಣೆಗೆ ಅವಕಾಶವಿದೆ. ಕೊನೆಯ ದಿನದಂದು ಸಮುದ್ರದಲ್ಲಿ ಸಂಚರಿಸಿ ಹಕ್ಕಿ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುವುದು.
– ವಿ.ಕರಿಕಾಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಕರಾವಳಿಗೆ ದೊಡ್ಡ ಗೌರವ’
ಮಂಗಳೂರಿನಲ್ಲಿ ಸುಮಾರು 30ರಷ್ಟು ಬರ್ಡ್ ಫೋಟೋಗ್ರಾಫರ್ ಹಾಗೂ ನೂರಾರು ಹಕ್ಕಿ ಪ್ರಿಯರಿದ್ದಾರೆ. ಕರಾವಳಿ ಭಾಗದ ವಿವಿಧೆಡೆ ಹಕ್ಕಿಗಳ ಕುರಿತು ಅಧ್ಯಯನ ನಡೆಸುವವರಿದ್ದಾರೆ. ಇದೀಗ ಹಕ್ಕಿ ಹಬ್ಬ ಆಚರಿಸುತ್ತಿರುವುದು ಹಕ್ಕಿ ಪ್ರಿಯರಿಗೆ ಹೊಸ ಉತ್ತೇಜನ ನೀಡಿದಂತಾಗಲಿದೆ.
–ರೋಶನ್ ಕಾಮತ್,
ಬರ್ಡ್ ಫೋಟೋಗ್ರಾಫರ್
ದಾಂಡೇಲಿಯಲ್ಲಿ ಹಾರ್ನ್ ಬಿಲ್ ಹಕ್ಕಿ ಹಬ್ಬ
ಪಕ್ಷಿಪ್ರಿಯರಲ್ಲಿ ‘ಕಾಡಿನ ರೈತ’ ಎಂದೇ ಹೆಸರಾದ ಹಾರ್ನ್ಬಿಲ್ ಹಕ್ಕಿಯ (ಮಂಗಟ್ಟಿ) ಹಬ್ಬ ಈ ಬಾರಿ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಫೆ.2ರಿಂದ ಆರಂಭವಾಗಿದ್ದು, 4ರವರೆಗೆ ನಡೆಯಲಿದೆ. ಅಳಿವಿನ ಅಂಚಿನಲ್ಲಿರುವ ಈ ಹಕ್ಕಿಗಳ ಮೇಲಿನ ಅಧ್ಯಯನದ ಕುರಿತು ಅರಿವು ಮೂಡಿಸಲು ಈ ಹಬ್ಬ ಆಚರಿಸಲಾಗುತ್ತಿದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.