ಚರಂಡಿಯಿಲ್ಲದೆ ಮನೆಗಳಿಗೆ ನೀರು ನುಗ್ಗುವ ಭೀತಿ!
Team Udayavani, Jun 2, 2018, 11:31 AM IST
ಮಹಾನಗರ : ನಗರದ ದೇರೆಬೈಲ್-ಕೊಂಚಾಡಿಯ ಕಾರ್ಜಹಿತ್ಲು ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಹೊಸದಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದು, ಆದರೆ ಮಳೆ ನೀರು ಹರಿಯುವುದಕ್ಕೆ ಚರಂಡಿಯನ್ನು ನಿರ್ಮಿಸದೇ ಇರುವುದರಿಂದ ಈಗ ಮಳೆ ನೀರು ಮನೆಗಳಿಗೆ ನುಗ್ಗುವ ಭೀತಿ ಎದುರಾಗಿದೆ.
ಜೋರು ಮಳೆ ಬರುವ ವೇಳೆ ರಸ್ತೆಯಲ್ಲಿ ಪೂರ್ತಿ ನೀರು ಹರಿಯುತ್ತದೆ. ಆದರೆ ಸ್ಥಳೀಯ ಪ್ರತಿ ಮನೆಯವರು ತಮ್ಮ ಕಾಂಪೌಂಡಿನ ಗೇಟಿನ ಮುಂಭಾಗ ಕಟ್ಟೆ ರೀತಿ ಮಾಡಿರುವುದರಿಂದ ನೀರು ಒಳ ನುಗ್ಗಿಲ್ಲ. ಆದರೆ ಇತ್ತೀ ಚೆಗೆ ಸುರಿದಂತೆ ಧಾರಾಕಾರ ಮಳೆ ಬಂದರೆ ನೀರು ಒಳನುಗ್ಗುವ ಸಾಧ್ಯತೆ ಹೆಚ್ಚಿದೆ.
ಮೇ 29ರಂದು ಕೂಡ ಸ್ವಲ್ಪ ಪ್ರಮಾಣದ ನೀರು ಒಳನುಗ್ಗಿದ್ದು, ಯಾವುದೇ ಅಪಾಯ ಸೃಷ್ಟಿಯಾಗಿಲ್ಲ. ಆದರೆ ಮುಂದೆ ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭಗೊಂಡರೆ ನೀರು ಮನೆಗೆ ನುಗ್ಗುವ ಸಾಧ್ಯತೆಯ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಅರ್ಧಕ್ಕೆ
ಚರಂಡಿ ಮಾಡಿ ಹಾಗೇ ಬಿಟ್ಟಿದ್ದಾರೆ.
ಮಳೆ ನೀರು ಕಾಂಕ್ರೀಟ್ ರಸ್ತೆಯಲ್ಲಿ ಹರಿದು ಪಾಚಿ ಉಂಟಾಗಿರುವುದರಿಂದ ದ್ವಿಚಕ್ರ ಸವಾರರು ಬೀಳುವ ಅಪಾಯವೂ ಇದೆ. ಹೀಗಾಗಿ ಸಂಬಂಧಪಟ್ಟ ಪಾಲಿಕೆಯು ಈ ಕುರಿತು ಗಮನಹರಿಸಿ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಬೋಳದಲ್ಲಿ ಅಬಕಾರಿ ದಾಳಿ… ಅಕ್ರಮ ದಾಸ್ತಾನಿಸಿರಿದ್ದ ಮದ್ಯದ ಬಾಕ್ಸ್ ಗಳು ವಶಕ್ಕೆ
ShivaRajkumar: ʼಘೋಸ್ಟ್ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್ ರಿವೀಲ್
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Sullia: 10 ವರ್ಷದ ಬಳಿಕ ಚಿಂಗಾಣಿ ಗುಡ್ಡೆ ಟ್ಯಾಂಕ್‌ಗೆ ಕೊನೆಗೂ ನೀರು ಬಂತು!
Waqf Board Case: ಆಪ್ ಶಾಸಕ ಅಮಾನತುಲ್ಲಾ ಖಾನ್ ಗೆ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.