ಕುಟುಂಬಗಳು ಮನೆಗೆ: ಮಳೆ ಭೀತಿ!
Team Udayavani, Aug 25, 2018, 9:28 AM IST
ಸುಳ್ಯ: ಕಲ್ಲುಗುಂಡಿ, ಸಂಪಾಜೆ ಮತ್ತು ಅರಂತೋಡು ಪರಿ ಹಾರ ಕೇಂದ್ರದಿಂದ ಶುಕ್ರವಾರ 30ಕ್ಕೂ ಅಧಿಕ ಸಂತ್ರಸ್ತ ಕುಟುಂಬಗಳು ಮನೆಗೆ ತೆರಳಿವೆ. ಪಾಕೃತಿಕ ವಿಕೋಪಕ್ಕೆ ಈಡಾಗಿರುವ ಸ್ಥಳದಲ್ಲಿ ಪರಿಸ್ಥಿತಿ ಸುಧಾರಣೆ ಕಂಡು ಬಂದಿರುವ ಪ್ರದೇಶಗಳಿಗೆ ತಹಶೀಲ್ದಾರ್ ಸೂಚನೆ ಪ್ರಕಾರ ಬುಧವಾರ ಸಂಜೆಯಿಂದ ಮನೆಗೆ ಕಳುಹಿ ಸುವ ಪ್ರಕ್ರಿಯೆ ಆರಂಭ ಗೊಂಡಿತ್ತು. ಈಗಾಗಲೇ 90ಕ್ಕೂ ಅಧಿಕ ಕುಟುಂಬಗಳು ಮನೆಗೆ ವಾಪಸಾಗಿವೆ.
ಶಾಲೆಗೆ ವ್ಯವಸ್ಥೆ
ಸಂತ್ರಸ್ತ ಕೇಂದ್ರದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು 90 ಮಕ್ಕಳನ್ನು ಆಸುಪಾಸಿನ ಶಾಲೆ ಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ನೀರು ಕುದಿಸಿ ಬಳಸಿ: ಸೂಚನೆ
ಪಯಸ್ವಿನಿಯಲ್ಲಿ ಕೆಸರು ಮಿಶ್ರಿತ ನೀರಿನಿಂದಾಗಿ ನಗರದ ಜನರಿಗೆ ಕುಡಿಯುವ ನೀರಿನ ತತ್ವಾರ ಉಂಟಾಗಿದೆ. ಪಂಪ್ಹೌಸ್ನಿಂದ ತಾತ್ಕಾಲಿಕವಾಗಿ ನೀರು ಪೂರೈಕೆ ಸ್ಥಗಿತಗೊಳಿಸಿದ್ದರೂ ನದಿ ನೀರನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಜನರ ಮುಂದಿದೆ. ಜನರ ಆರೋಗ್ಯದ ಮೇಲೆ ಪರಿ ಣಾಮ ಬೀರುವ ಹಿನ್ನೆಲೆಯಲ್ಲಿ ನ.ಪಂ. ವತಿಯಿಂದ ಧ್ವನಿವರ್ಧಕ ಬಳಸಿ ಕುದಿಸಿ ಆರಿಸಿದ ನೀರನ್ನು ಬಳಸುವಂತೆ ಸೂಚನೆ ನೀಡಲಾಗಿದೆ. ನೀರು ಶುದ್ಧೀಕರಣದ ಘಟಕವೂ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸದ ಕಾರಣ ಪಯಸ್ವಿನಿ ತಾನಾಗಿ ತಿಳಿಯಾಗುವ ತನಕ ಕಾಯ ಬೇಕಿದೆ. ಅಲ್ಲಿಯ ತನಕ ಟ್ಯಾಂಕರ್, ಕೊಳವೆಬಾವಿ ಮೂಲಕ ನೀರು ಪೂರೈಸುವ ಭರವಸೆ ನೀಡಲಾಗಿದೆ.
ಬಿರುಸಿನ ಮಳೆ ಸೂಚನೆ?
ಮುಂದಿನ ಎರಡು ದಿನಗಳಲ್ಲಿ ಕೊಡಗು ಮತ್ತು ಕರಾವಳಿ ಭಾಗದಲ್ಲಿ ಮತ್ತೆ ಬಿರುಸಿನ ಮಳೆ ಆಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತು ವಾರಿ ಇಲಾಖೆ ನಿರ್ದೇಶಕರು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಮನೆಗೆ ಮರಳಿರುವ ಕುಟುಂಬಗಳಿಗೆ ಆತಂಕ ಕಾಡಿದೆ. ಅಳಿದು ಉಳಿದ ಮನೆ ದುರಸ್ತಿ ಕಾಯಕ ದಲ್ಲಿ ತೊಡಗಿರುವ ಕುಟುಂಬಕ್ಕೆ ಮತ್ತೆ ಸಂತ್ರಸ್ತ ಕೇಂದ್ರ ಸೇರುವ ಭೀತಿ ಇದೆ. ಈಗಷ್ಟೇ ಶಾಲಾ ಕಾಲೇಜು ಪುನರಾರಂಭಗೊಂಡಿದ್ದು, ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಪರಿಹಾರ ಕೇಂದ್ರದಲ್ಲಿ ಮಾತಿನ ಚಕಮಕಿ
ಪರಿಹಾರ ಮೊತ್ತ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತದೆ ಎಂದು ಆರೋಪಿಸಿ ಶುಕ್ರವಾರ ಅಧಿಕಾರಿಗಳು ಮತ್ತು ಸಂತ್ರಸ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಹಾರ ಕೇಂದ್ರದಲ್ಲಿ ಹೆಸರು ನೋಂದಾಯಿಸಿ, ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಕುಟುಂಬಗಳಿಗೆ ದಿನಸಿ ಸಾಮಗ್ರಿ ಮಾತ್ರ ನೀಡಲಾಗಿದ್ದು, ಅವರು ಕೂಡ ಪರಿಹಾರಧನದ ಬೇಡಿಕೆ ಇರಿಸಿದ್ದರು. ಕೇಂದ್ರದಲ್ಲಿ ವಾಸ ಇರುವ ಕುಟುಂಬಗಳಿಗೆ ಮಾತ್ರ ಪರಿಹಾರ ಮೊತ್ತ ಪಾವತಿಸಲು ಸೂಚನೆ ಇರುವ ಕಾರಣ ಅಧಿಕಾರಿಗಳು ನೀಡಲು ಒಪ್ಪಲಿಲ್ಲ. ಮೇಲಧಿಕಾರಿಗಳಿಂದ ಸೂಚನೆ ಬಂದ ಬಳಿಕ ಉಳಿದವರಿಗೂ ಪಾವತಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.