ಬೆಳ್ತಂಗಡಿಯಲ್ಲಿ ಇಲಿ ಜ್ವರ ಭೀತಿ
ರೋಗ ಲಕ್ಷಣ ದೃಢಪಡಿಸಿದ ವೈದ್ಯರು
Team Udayavani, Oct 16, 2019, 5:19 AM IST
ಬೆಳ್ತಂಗಡಿ: ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಶಂಕಿತ ಇಲಿ ಜ್ವರದ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಕೊಯ್ಯೂರು ಗ್ರಾಮದ ಮಾಜಿ ಸೈನಿಕ ಎರ್ಮಾಜೆ ಸುರೇಶ್ ಭಟ್ (52) ಎಂಬವರಿಗೆ ಶಂಕಿತ ಇಲಿ ಜ್ವರ ಬಾಧಿಸಿದೆ. ಅ.9ರಂದು ಜ್ವರ
ಕಾಣಿಸಿಕೊಂಡು ವಿಪರೀತ ಗಂಟು ನೋವು ಉಂಟಾಗಿದ್ದರಿಂದ ಮಂಗ ಳೂರಿನ ಖಾಸಗಿ ಆಸ್ಪತ್ರೆಗೆ ಅ.14ರಂದು ದಾಖಲಾಗಿದ್ದರು. ವೈದ್ಯರು ರಕ್ತದ ಮಾದರಿ ಪಡೆದು ಅ.15ರಂದು ಇಲಿ ಜ್ವರ ಎಂಬುದನ್ನು ಖಚಿತಪಡಿಸಿದ್ದಾರೆ.
ಗಂಟು ನೋವು ಸೇರಿದಂತೆ ವಿಪರೀತ ಆಯಾಸ, ವಾಂತಿ ಲಕ್ಷಣ ಗೋಚರಿಸಿದ್ದು, ಬಿಳಿ ರಕ್ತಕಣ 42 ಸಾವಿರಕ್ಕೆ ಇಳಿಕೆಯಾಗಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ.
ಇಲಿ ಜ್ವರದಿಂದ ಕಿಡ್ನಿ ಮತ್ತು ಲಿವರ್ ಸಮಸ್ಯೆ ಎದುರಾಗುವುದರಿಂದ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಬೆಳ್ತಂಗಡಿಯಲ್ಲಿ ಮೊದಲ ಬಾರಿಗೆ ಇಲಿಜ್ವರ ಪ್ರಕರಣ ಬೆಳಕಿಗೆ ಬಂದಿರು ವುದಾಗಿಯೂ ವೈದ್ಯರು ಹೇಳಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಪ್ರಕರಣ ಬೆಳಕಿಗೆ ಬಂದಿದ್ದರೂ ತಾಲೂಕು ಆರೋಗ್ಯ ಅಧಿಕಾರಿ ಕಚೇರಿಗೆ ಮಾಹಿತಿ ಲಭಿಸಿಲ್ಲ.
ನೀರಿನಿಂದ ಪ್ರಸಾರ
ವೈದ್ಯಕೀಯವಾಗಿ ಲೆಪ್ಟೊಸ್ಪೈ ರೋಸಿಸ್ ಎಂದು ಕರೆಸಿಕೊಳ್ಳುವ ಇಲಿ ಜ್ವರದ ರೋಗಾಣು ಮಣ್ಣಲ್ಲಿ ಸುಮಾರು ಆರು ಗಂಟೆವರೆಗೆ ಮಾತ್ರ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು ಎಂಬುದು ದೃಢಪಟ್ಟಿದೆ. ನೀರಿನ ಮೂಲಕ ಹರಡುವುದರಿಂದ ಕುದಿಸಿ ಆರಿಸಿದ ನೀರು ಬಳಸುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ.
ತಾಲೂಕಿನಲ್ಲಿ ಇಲಿ ಜ್ವರ ಪ್ರಕರಣ ಇದೇ ಮೊದಲು. ಕೆಲವು ದಿನಗಳ ಹಿಂದೆ ಕೊಕ್ಕಡದ ಬೇಬಿ ಎಂಬವರಿಗೆ ರೋಗ ಲಕ್ಷಣ ಕಂಡುಬಂದಿದ್ದು, ಅವರು ಗುಣಮುಖರಾಗಿ ಬಂದಿದ್ದಾರೆ. ಇದರ ಹೊರತಾಗಿ ಬೇರೆ ಪ್ರಕರಣದ ಮಾಹಿತಿ ಇಲ್ಲ. ಜಿಲ್ಲಾ ಆಸ್ಪತ್ರೆಗಳ ವರದಿ ಪಡೆದು ಪರಿಶೀಲಿಸಲಾಗುವುದು.
– ಡಾ| ಕಲಾಮಧು, ತಾ| ಆರೋಗ್ಯಾಧಿಕಾರಿ, ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
MUST WATCH
ಹೊಸ ಸೇರ್ಪಡೆ
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.