ತಂಗಿಯ ಕೊಲೆಗೆ ತಾರತಮ್ಯದ ಭಾವನೆಯೇ ಕಾರಣ: ಡಾ| ಹರ್ಷ
Team Udayavani, Oct 29, 2019, 4:14 AM IST
ಮಂಗಳೂರು: ಹೆತ್ತವರು ತನ್ನನ್ನು ಕಡೆಗಣಿಸುತ್ತಿದ್ದಾರೆ ಮತ್ತು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಿಯ ಭ್ರಮೆಯೇ ಕಂಬಳಪದವಿನ ವಿದ್ಯಾರ್ಥಿನಿ ಫಿಯೋನಾ ಸ್ವೀಡಲ್ ಕುಟಿನ್ಹೊ (16)ಳ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ
ಡಾ| ಹರ್ಷ ಪಿ.ಎಸ್. ತಿಳಿಸಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಆರೋಪಿ ಸ್ಯಾಮ್ಸನ್ ಮಾದಕ ವ್ಯಸನ ಮತ್ತಿತರ ದುಶ್ಚಟಗಳಿಗೆ ಬಲಿಯಾಗಿ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಮನೆಯಲ್ಲಿದ್ದ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ತಂಗಿ ಫಿಯೋನಾ ಪ್ರತಿಭಾನ್ವಿತಳಾಗಿದ್ದು, ಆಕೆಯ ಬಗ್ಗೆ ಹೆತ್ತವರು ಹೆಚ್ಚು ಮಮತೆ ತೋರುತ್ತಿದ್ದಾರೆ ಎಂಬ ಭಾವನೆ ಸ್ಯಾಮ್ಸನ್‌ನಲ್ಲಿತ್ತು ಎಂದು ಆಯುಕ್ತರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆತ್ತವರು ತಂಗಿಗೆ ಒಳ್ಳೆಯ ಮೊಬೈಲ್ ಫೋನ್ ಕೊಡಿಸಿದ್ದರು. ಊಟ, ತಿಂಡಿಯಲ್ಲೂ ಆಕೆಗೆ ಆದ್ಯತೆ ನೀಡಲಾಗುತ್ತಿತ್ತು ಎಂದು ಸ್ಯಾಮ್ಸನ್ ತಿಳಿ ಸಿದ್ದಾನೆ. ಇಂಥ ಭಾವನೆ ಆತನಲ್ಲಿ ಬೆಳೆದು ಸಹೋದರಿ ಮೇಲೆ ಅಸೂಯೆಪಟ್ಟು ಕೊಲೆ ಮಾಡಿದ್ದಾನೆ ಎಂಬುದು ಈ ವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದರು.
ಫಿಯೋನಾ ನಾಪತ್ತೆ ಬಗ್ಗೆ ಆಕೆಯ ಹೆತ್ತವರು ಅ. 9ರಂದು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಸ್ತೃತ ತನಿಖೆ ನಡೆಸಿದ್ದ ರೂ ಸುಳಿವು ಲಭ್ಯವಾಗಿಲ್ಲ. ಆಕೆಯ ಮೊಬೈಲ್ ಫೋನ್ ಕರೆ ವಿವರ ಹಾಗೂ ಸ್ಥಳೀಯರಿಂದ ಸಿಕ್ಕಿದ ಮಾಹಿತಿ ಪ್ರಕಾರ ಅವ ಳು ಅ. 8ರಂದು ಮನೆಯಿಂದ ಹೊರಗೆ ಹೋಗಿಲ್ಲ ಎಂಬುದು ತಿಳಿ ಯಿತು. ಹಾಗಾಗಿ ಮನೆಯವರ ಮೇಲೆಯೇ ಸಂಶಯ ಮೂಡಿತ್ತು. ಬಳಿಕ ಸ್ಯಾಮ್ಸನ್‌ನನ್ನು ಹೆಚ್ಚಿನ ತನಿಖೆಗೆ ಒಳಪಡಿ ಸಿ ದಾಗ ಕೊಲೆಯ ಬಗ್ಗೆ ಒಪ್ಪಿ ಕೊಂಡ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದು, ಅವನನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುವುದು. ಫಿಯೋನಾಳನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದು, ಮೃತದೇಹದ ಅವಶೇಷಗಳ ಬಗ್ಗೆ ಫೂರೆನ್ಸಿಕ್ ತಜ್ಞರಿಂದಲೂ ವರದಿ ತರಿಸಿ ತನಿಖೆ ನಡೆಸಲಾಗುವುದು ಎಂದು ಆಯು ಕ್ತರು ಹೇಳಿದರು.
2 ದಿನ ಆತ ಮನೆಯಲ್ಲಿರಲಿಲ್ಲ
ಕೊಲೆ ಮಾಡಿದ ಬಳಿಕ ಎರಡು ದಿನ ಆರೋಪಿ ಮನೆಯಲ್ಲಿರಲಿಲ್ಲ. ತನಗೆ ತಲೆನೋವು ಎಂದು ಹೇಳಿ ಆತ ಹೊರಗೆ ಹೋಗಿದ್ದ. ತಮ್ಮ ಮಕ್ಕಳು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿದ್ದಾರೆ ಎಂದು ಒಪ್ಪಿಕೊಳ್ಳಲು ಯಾವುದೇ ಹೆತ್ತವರು ಸಿದ್ಧರಿಲ್ಲ. ಹಾಗಾಗಿ ಮಾದಕ ದ್ರವ್ಯ ವ್ಯಸನ ವಿರುದ್ಧ ಜಾಗೃತಿ ಮೂಡಿಸಲು ಪೊಲೀಸರು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.
ಒಬ್ಬನಿಂದಲೇ ಕೃತ್ಯ
ಸುತ್ತಿಗೆಯಿಂದ ತಲೆಗೆ ಮರಣಾಂತಿಕ ಹಲ್ಲೆ ನಡೆಸಿದ್ದರಿಂದ ಫಿಯೋನಾ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಳು. ಬಳಿಕ ಮೃತದೇಹವನ್ನು ಮನೆಯಿಂದ ಸುಮಾರು 100 ಮೀ. ದೂರ ಕಾಡಿನ ಮಧ್ಯೆ ಇರುವ ತೋಡಿಗೆ ಎಸೆದಿದ್ದ. ಇಲ್ಲಿ ಜನಸಂಚಾರ ಕಡಿಮೆ ಇದ್ದು, ಮಳೆಯೂ ಬರುತ್ತಿದ್ದ ಕಾರಣ ಶವ ಕೊಳೆತರೂ ವಾಸನೆ ಬಂದಿರಲಿಲ್ಲ. ಕೊಲೆ ಬಳಿಕ ಆತನೊಬ್ಬನೇ ಶವವನ್ನು ಹೊತ್ತೂಯ್ದಿರುವುದು ಈ ವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.