‘ಶಿಕ್ಷಕರ ಏಳ್ಗೆಗೆ ದುಡಿಯುವೆ`
Team Udayavani, Jul 10, 2018, 1:12 PM IST
ಪುತ್ತೂರು : ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಲು ಹರಸಿದ ಶಿಕ್ಷಕರಿಗೆ ಋಣಿಯಾಗಿದ್ದೇನೆ. ಅವರ ಏಳ್ಗೆಗೆ ದುಡಿಯಲು ಉತ್ಸುಕನಾಗಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಅವರು ಹೇಳಿದರು.
ತಾ| ಪ್ರೌಢಶಿಕ್ಷಕರ ಸಂಘದ ನೇತೃತ್ವದಲ್ಲಿ ತಾ| ಉಪನ್ಯಾಸಕರ ಸಂಘ, ರಾಜ್ಯ ಸರಕಾರಿ ನೌಕರರ ಸಂಘದ ಸಹಭಾಗಿತ್ವದಲ್ಲಿ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಬಿ.ಎಡ್. ಪದವಿ ಕಡ್ಡಾಯಗೊಳಿಸಿ ಎಂದು ಏಕಾಏಕಿ ಹೇಳುವುದರಲ್ಲಿ ಅರ್ಥವಿಲ್ಲ. ಹಾಗಾದರೆ ಅಷ್ಟು ವರ್ಷ ಬೋಧಿಸಿದ್ದು ವ್ಯರ್ಥವೇ? ಜೀವನದ ಸಂಧ್ಯಾ ಕಾಲದಲ್ಲಿ ಆರ್ಥಿಕ ಭದ್ರತೆ ಸಿಗದೆ, ಕೈಕಾಲು ಗಟ್ಟಿ ಇರುವಾಗಲೇ ಪಿಂಚಣಿ ಸಿಗುವುದು ಸಮ್ಮತವೇ? ಶಾಸಕರಿಗೂ ಪಿಂಚಣಿ ಸಿಗುವಾಗ ಶಿಕ್ಷಕರಿಗೆ ಏಕಿಲ್ಲ? ಹೊಸ ಪಿಂಚಣಿ ಮಸೂದೆ ಶಿಕ್ಷಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಹಾಗೂ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಆಲ್ಫ್ರೆಡ್ ಜಾನ್ ಪಿಂಟೋ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಗುಣಮಟ್ಟ ಕಾಯ್ದುಕೊಳ್ಳಬೇಕಾದರೆ ಶಿಕ್ಷಕರ ನೇಮಕಾತಿ ಅನಿವಾರ್ಯ ಎಂದರು.
ಶಿಕ್ಷಕರಿಗೆ ನ್ಯಾಯದ ಭರವಸೆ
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್. ಮಾತನಾಡಿ, ಶಿಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಂಡಿರುವ ಭೋಜೇಗೌಡರು ಶಿಕ್ಷಕರ ಸಮಸ್ಯೆಗೆ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ಇದೆ ಎಂದರು.
ಎನ್‌ಪಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಮಾತನಾಡಿ, ಪಿಂಚಣಿ ಎನ್ನುವುದು ಭಿಕ್ಷೆ ಅಲ್ಲ. ಅದನ್ನು ಪಡೆದುಕೊಳ್ಳುವುದು ನಮ್ಮೆಲ್ಲರ ಹಕ್ಕು. ಇಳಿವಯಸ್ಸಿನಲ್ಲಿ ನಮ್ಮ ಆರ್ಥಿಕ ಭದ್ರತೆಗೆ ಇದೇ ಪಿಂಚಣಿ ವೇತನ ನೆರವಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ನಮಗೆ ಸಿಗುವ ವೇತನವನ್ನು ಶೇರು ಮಾರುಕಟ್ಟೆಗೆ ವಿನಿಯೋಗಿಸಿರುವುದು ಖಂಡನೀಯ. ನೈಋತ್ಯ ಪದವೀಧರ ಕ್ಷೇತ್ರದಿಂದ ಆಯ್ಕೆಗೊಂಡಿರುವ ಭೋಜೆಗೌಡರು ಶಿಕ್ಷಕರ ಹಾಗೂ ಉಪನ್ಯಾಸಕರ ಭವಿಷ್ಯಕ್ಕಾಗಿ ದುಡಿಯಬೇಕು ಎಂದು ಮನವಿ ಮಾಡಿಕೊಂಡರು.
ಬೇಡಿಕೆ ಈಡೇರಿಸಿ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಪುತ್ತೂರು ಶಾಖೆಯ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿದರು.
ತಾಲೂಕು ಯುವಸಬಲೀಕರಣ ಹಾಗೂ ಕ್ರೀಡಾಧಿಕಾರಿ ಮಾಮಚ್ಚನ್ ಎಂ. ಮಾತನಾಡಿ, ಭೋಜೇಗೌಡರು ಅಧಿಕಾರ ಇಲ್ಲದೆಯೂ ಸರಕಾರಿ ನೌಕರರ ಸಂಘಕ್ಕೆ ನೆರವಾಗುತ್ತಿದ್ದರು. 20 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಆಗುತ್ತಿಲ್ಲ. ವೃಂದ ಮತ್ತು ನೇಮಕಾತಿಯಲ್ಲಿ ತಿದ್ದುಪಡಿಯೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನಾಗಿಸುವ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿದೆ. ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದುರಸ್ತಿ ಬಗ್ಗೆ ಹಾಗೂ ಅಂತರ್- ಜಿಲ್ಲೆಯಿಂದ ಆಗಮಿಸುವ ಶಿಕ್ಷಕರನ್ನು ಮರಳಿ ಅವರ ಜಿಲ್ಲೆಗೆ ನಿಯುಕ್ತಿಗೊಳಿಸಲು ಪ್ರಾಶಸ್ತ್ಯ ನೀಡಬೇಕೆಂದು ಮನವಿ ಮಾಡಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಟಿಜಿಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹರಿಪ್ರಸಾದ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ, ತಾಲೂಕು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಹರಿಕೃಷ್ಣ ಬೈಲಾಡಿ ಉಪಸ್ಥಿತರಿದ್ದರು. ಪ್ರೌಢಶಾಲಾ ಸಹಶಿಕ್ಷಕಿ ಅನ್ನಪೂರ್ಣಾ ಪ್ರಾರ್ಥಿಸಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸದಸ್ಯ ಉಮಾಶಂಕರ್ ಸ್ವಾಗತಿಸಿ, ಎನ್‌ಪಿಎಸ್ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಮಾಚಾರ್ ವಂದಿಸಿದರು. ಕೆಯ್ಯೂರು ಪ್ರೌಢಶಾಲೆ ಸಹಶಿಕ್ಷಕ ವಿನೋದ್ ಕುಮಾರ್ ನಿರೂಪಿಸಿದರು.
ಶಿಕ್ಷಕರಿಗೇಕಿಲ್ಲ?
ಜೀವನದ ಸಂಧ್ಯಾ ಕಾಲದಲ್ಲಿ ಆರ್ಥಿಕ ಭದ್ರತೆ ಸಿಗದೆ, ಕೈಕಾಲು ಗಟ್ಟಿ ಇರುವಾಗಲೇ ಪಿಂಚಣಿ ಸಿಗುವುದು ಸಮ್ಮತವೇ? ಶಾಸಕರಿಗೂ ಪಿಂಚಣಿ ಸಿಗುವಾಗ ಶಿಕ್ಷಕರಿಗೆ ಏಕಿಲ್ಲ? ಹೊಸ ಪಿಂಚಣಿ ಮಸೂದೆ ಶಿಕ್ಷಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
– ಎಸ್.ಎಲ್. ಭೋಜೇಗೌಡ
ವಿಧಾನ ಪರಿಷತ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.