ಕೊಡಿಮರ ಸಾಗಿಸುವ ವಾಹನ ಸಾರಥಿ ಸಾಹಸ ವೈರಲ್‌


Team Udayavani, Dec 11, 2018, 3:50 AM IST

kodimara-10-12.jpg

ನಗರ: ಅಗಲ ಕಿರಿದಾದ ರಸ್ತೆ, ಬಲ ಭಾಗದಲ್ಲಿ ಕೆರೆ, ಎಡ ಭಾಗದಲ್ಲಿ ಹೊಳೆ, ಜತೆಗೆ ದೊಡ್ಡ ತಿರುವು. ಇಂತಹ ರಸ್ತೆಯಲ್ಲಿ ದೊಡ್ಡ ಭಾರದ ಮರವನ್ನು ತುಂಬಿಕೊಂಡ 18 ಚಕ್ರದ ಟ್ರೈಲರ್‌ ಅನ್ನು ಅದರ ಚಾಲಕ ಯಶಸ್ವಿಯಾಗಿ ಮುನ್ನಡೆಸುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಶೇಷ ನಡೆದಿರುವುದು ಬಡಗನ್ನೂರು ಗ್ರಾಮದ ಪಟ್ಟೆಯಲ್ಲಿ. ಅವಳಿ ವೀರ ಪುರುಷರಾದ ಕೋಟಿ – ಚೆನ್ನಯರು ಹಾಗೂ ತಾಯಿ ದೇಯಿ ಬೈದ್ಯೆತಿಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರಕ್ಕೆ ಬಿಂಬಮರ ಮತ್ತು ಕೊಡಿ ಮರವನ್ನು ಮೆರವಣಿಗೆಯ ಮೂಲಕ ಸಾಗಿಸುವಾಗ ನಡೆದ ಘಟನೆಯಿದು. ಟ್ರೈಲರನ್ನು ಚಾಲನೆ ಮಾಡಿರುವುದು ನುರಿತ ಚಾಲಕ ಮಂಗಳೂರು ಪಣಂಬೂರು ನಿವಾಸಿ ದಿವಾಕರ ಪೂಜಾರಿ.

289ನೇ ಅನುಭವ
ದಿವಾಕರ ಪೂಜಾರಿ ಅವರು ರಾಜ್ಯ, ಹೊರ ರಾಜ್ಯಗಳಲ್ಲಿ 289 ದೈವ, ದೇವಸ್ಥಾನಗಳಿಗೆ ಕೊಡಿಮರ ಸಾಗಿಸಿ ಅನುಭವ ಇರುವ ಚಾಲಕ. ಈ ಸೇವೆಯನ್ನು ಭಕ್ತಿಯಿಂದ ಮಾಡಿರುವ ಅವರು ಕೋಟಿ – ಚೆನ್ನಯ ಮೂಲಸ್ಥಾನಕ್ಕೆ 28ನೇ ಕೊಡಿಮರ ಸಾಗಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎನ್ನುತ್ತಾರೆ. ದೈವಸ್ಥಾನ, ದೇವಸ್ಥಾನಗಳಿಗೆ ಉಚಿತವಾಗಿ ಟ್ರೈಲರ್‌ ಒದಗಿಸುವ ಮಾಲಕ ಮಾಜಿ ಸಚಿವ ನಾಗರಾಜ ಶೆಟ್ಟಿ ಅವರ ಭಕ್ತಿಯ ಸೇವೆಯನ್ನು ನೆನೆಯುತ್ತಾರೆ. ರಾಜ್ಯದೊಳಗೆ ದೇವಾಲಯಗಳಿಗೆ ಕೊಡಿಮರ ಕೊಂಡೊಯ್ಯುವ ಸಂದರ್ಭ ಉಚಿತ ವಾಹನದ ವ್ಯವಸ್ಥೆ ಮಾಡುವ ಇವರು ಹೊರರಾಜ್ಯಗಳಿಗೆ ಮಾತ್ರ ಲೋಡ್‌ ಆದ ಬಳಿಕದ ಖರ್ಚು ತೆಗೆದುಕೊಳ್ಳುತ್ತಾರೆ.

ಯಶಸ್ವಿ ಪಯಣ
ಪೊಳಲಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಶರವು ಮಹಾಗಣಪತಿ ದೇವಸ್ಥಾನ ಸಹಿತ ಜಿಲ್ಲೆಯ-ಹೊರಜಿಲ್ಲೆಗಳ ದೇವಾಲಯದ ಕೊಡಿಮರ, ಮೈಸೂರು ಚಾಮುಂಡಿ ಬೆಟ್ಟ, ಆಂಧ್ರಪ್ರದೇಶದ ಶ್ರೀ ಶೈಲಂ ಮಹಾನಂದಿ ದೇವಾಲಯ, ಮಹಾರಾಷ್ಟ್ರ  ಜಿ.ಎಸ್‌.ಬಿ. ದೇವಾಲಯಗಳಿಗೆ ಕೊಡಿಮರ, ದೊಡ್ಡ ಗಾತ್ರದ ಶಿಲೆಗಳನ್ನು ಸಾಗಿಸಿದ ಹೆಗ್ಗಳಿಕೆ ದಿವಾಕರ ಪೂಜಾರಿ ಅವರದ್ದು. ಕಾರ್ಕಳದಿಂದ ಸಾವಿರ ಕಂಬ ಬಸದಿಗೆ ಗೊಮಟೇಶ್ವರ ಮೂರ್ತಿ ಕೊಂಡೊಯ್ದಿರುವುದು, ವಿವಿಧ ಕಡೆಗಳಿಗೆ ಸುಮಾರು 5 ರಥಗಳನ್ನು ವಾಹನದ ಸಾರಥಿಯಾಗಿ ಇವರು ಯಶಸ್ವಿಯಾಗಿ ಸಾಗಿಸಿದ್ದಾರೆ.

ರಿಸ್ಕ್ ಇದೆ
ಈ ಜವಾಬ್ದಾರಿಯಲ್ಲಿ ಸಾಕಷ್ಟು ರಿಸ್ಕ್ ಇದೆ. ವರ್ಷದಲ್ಲಿ 10 -20 ಕ್ಷೇತ್ರಗಳಿಗೆ ಕೊಡಿಮರಗಳನ್ನು ಸಾಗಿಸುತ್ತೇನೆ. ಎಷ್ಟೇ ಅನುಭವ ಇದ್ದರೂ ಟ್ರೇಲರ್‌ಗೆ ಲೋಡ್‌ ಮಾಡಿದ ಬಳಿಕ ದೈವ, ದೇವರ ಕಾರಣಿಕದಿಂದ ಯಶಸ್ಸು ಲಭಿಸುತ್ತದೆ. ಶ್ರದ್ಧೆ, ನಿಷ್ಠೆಯ ಜತೆಗೆ ಶುದ್ಧತೆಯ ವ್ರತವನ್ನು ಕೊಡಿಮರ ಸಾಗಿಸುವ ಸಂದರ್ಭ ಪಾಲಿಸುತ್ತೇನೆ. 
– ದಿವಾಕರ ಪೂಜಾರಿ, ಟ್ರೇಲರ್‌ ಚಾಲಕ

ಟಾಪ್ ನ್ಯೂಸ್

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.