ಶಾಲೆಗೆ ಶತಸಂಭ್ರಮ: ಸವಣೂರಿನಲ್ಲಿ ಹಬ್ಬದ ವಾತಾವರಣ
Team Udayavani, Dec 30, 2017, 3:49 PM IST
ಸವಣೂರು: ಶಾಲೆಯೊಂದು ಶತಮಾನ ಪೂರೈಸುವ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲು ಇಡೀ ಊರೇ ಸಿದ್ಧವಾಗಿದೆ. ಊರ ತುಂಬಾ ಹಬ್ಬದ ವಾತಾವರಣ. ಸವಣೂರು ಪೇಟೆಯನ್ನು ವಿದ್ಯುತ್ ದೀಪ, ರಾಷ್ಟ್ರ ಧ್ವಜಗಳಿಂದ ಶೃಂಗರಿಸಲಾಗಿದೆ. ಶ್ರವಣರ ಊರು ಸವಣೂರು ಈಗ ಶಿಕ್ಷಣದೂರು ಆಗಿದೆ. ನೂರು ವರ್ಷಗಳಲ್ಲಿ ಈ ಶಾಲೆಯಲ್ಲಿ ಕಲಿತು ವಿವಿಧೆಡೆ ಉನ್ನತ ಉದ್ಯೋಗ ಪಡೆದವರು ಹಲವರು.
1917 ಡಿಸೆಂಬರ್ 15ರಂದು ಚಾಪಲ್ಲ ಎಂಬಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಳ್ಳವುವ ಮೂಲಕ ಜ್ಞಾನಮಂದಿರವೊಂದು ರೂಪುಗೊಂಡಿತು.ಅಜಲಾಡಿ ಬೀಡು ಕರಿಯಪ್ಪ ಬಂಟ ಮುಗೇರುಗುತ್ತು ಅವರ ಮುಖಂಡತ್ವದಲ್ಲಿ ಊರಿನವರು ಸೇರಿ ಶಾಲೆಗೊಂದು ಸೂರು ಮಾಡಿದರೆಂದು ಹೇಳಲಾಗಿದೆ. 1963ರ ವರೆಗೂ ಕಿರಿಯ ಪ್ರಾಥಮಿಕ ಶಾಲೆಯಾಗಿದ್ದ ಇದು ಜುಲೈ 8,1963ರಂದು ಇದು ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡು ಹೊಂದಿ ಜಿಲ್ಲಾ ಬೋರ್ಡ್‌ನ ಉಸ್ತುವಾರಿಯಲ್ಲಿದ್ದ ಈ ಶಾಲೆಯು ಸವಣೂರು ಬಸದಿ ಬಳಿಯ ಕಟ್ಟಡವೊಂದರಲ್ಲಿ 15-04-1970ನೇ ಇಸವಿಯವರೆಗೆ ನಡೆಯಿತು.
ನಂತರ ಸವಣೂರು, ಪುಣ್ಚಪ್ಪಾಡಿ ಗ್ರಾಮದ ಶಿಕ್ಷಣಾಸಕ್ತರು ಸೇರಿಕೊಂಡು ತಾಲೂಕು ಅಭಿವೃದ್ಧಿ ಮಂಡಳಿ, ಗ್ರಾ.ಪಂ.ನ ಸಹಕಾರದಲ್ಲಿ ಈಗಿರುವ ಸ್ಥಳದಲ್ಲಿ ಸುಂದರವಾದ ವಿದ್ಯಾದೇಗುಲ ನಿರ್ಮಿಸಿದರು. ಅಂದು 200 ಮಕ್ಕಳನ್ನು ಹೊಂದಿದ್ದ ಈ ಶಿಕ್ಷಣ ಸಂಸ್ಥೆ ಈಗಲೂ ಅದನ್ನು ಉಳಿಸಿಕೊಂಡಿದೆ.
ಅಂದು ಮುಳಿಹುಲ್ಲಿನ ಛಾವ ಣಿಯಾಗಿದ್ದ ಶಾಲೆ ಇಂದು ತಾರಸಿ ಛಾವಣಿಯಾಗಿದೆ. ಶತ ಸಂಭ್ರಮದಲ್ಲಿರುವ ಈ ಶಾಲೆಯ ಶತಮಾನೋತ್ಸವ ಅವಿಸ್ಮರಣೀಯ ವಾಗಿರಿಸುವ ನಿಟ್ಟಿನಲ್ಲಿ ಈಗಾಗಲೇ ಸುಮಾರು 23 ಲಕ್ಷ ರೂ. ವೆಚ್ಚದಲ್ಲಿ ಗ್ಯಾಲರಿ ನಿರ್ಮಿಸಲಾಗಿದೆ. 25 ಲಕ್ಷ ರೂ. ವೆಚ್ಚದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಕೊಠಡಿಗಳಲ್ಲಿ ವರ್ಲಿ ಚಿತ್ರಕಲೆ ಬಿಡಿಸಲಾಗಿದೆ. ಸಂಸ್ಕೃತಿ, ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳು ಮೂಡಿಬಂದಿದೆ. ಶತಸಂಭ್ರಮದಲ್ಲಿರುವ ಈ ಶಾಲೆಯಲ್ಲಿ ಇಲ್ಲಿವರೆಗೆ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಗೌರವಿಸುವುದು,ಅವರ ಸೇವಾ ವಿವರವನ್ನು ಶತಹೆಜ್ಜೆ ಪುಸ್ತಕದಲ್ಲಿ ದಾಖಲಿಸುವ ಮೂಲಕ ಅವರ ಸೇವೆ ಗುರುತಿಸುವ ಕಾರ್ಯ ನಡೆದಿದೆ.
ಪ್ರಸ್ತುತ ಈ ಶಾಲೆಯಲ್ಲಿ 226 ವಿದ್ಯಾರ್ಥಿಗಳು, ಮುಖ್ಯಶಿಕ್ಷಕರು ಸೇರಿ 8 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನೊಳಗೊಂಡ ಶತಸಂಭ್ರಮಾಚರಣೆಯನ್ನು ಕಣ್ತುಂಬಿಸಿಕೊಳ್ಳಲು ಇಡೀ ಊರಿಗೆ ಊರೇ ಎದುರು ನೋಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.