ಹದಿನೈದು ವರ್ಷಗಳಲ್ಲಿ ಐರಾಳ ಒಡಲಿಗೆ ಹದಿನೈದು ಬಲಿ


Team Udayavani, Jun 7, 2017, 2:59 PM IST

46AKA3.jpg

ಆಲಂಕಾರು : ಪುತ್ತೂರು ತಾಲೂಕಿನ ಪೆರಾಬೆ ಗ್ರಾಮ ಕುಂಟ್ಯಾನ ಹಾಗೂ ಚಾರ್ವಾಕ ಗ್ರಾಮದ ಅಂಬಲು ಮಧ್ಯೆ ಕುಮಾರಧಾರಾ ನದಿಯಲ್ಲಿರುವ ಐರಾಳ ಕಡವಿಗೆ ಸಾರ್ವಕಾಲಿಕ ತೂಗು ಸೇತುವೆ ನಿರ್ಮಾಣಕ್ಕಾಗಿ ಸುಮಾರು 27 ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಪ್ರಯೋಜನವಾಗಿಲ್ಲ.

ತೂಗು ಸೇತುವೆ ಹೋರಾಟ ಸಮಿತಿಯ ರಚಿಸಿ ಹೋರಾ ಟಕ್ಕಿಳಿಯಲು ಪೆರಾಬೆ, ಚಾರ್ವಾಕ ಗ್ರಾಮಸ್ಥರು ನಿರ್ಣಯಿಸಿದ್ದಾರೆ. ಐರಾಳ ಕಡವಿಗೆ ಹದಿನೈದು ವರ್ಷದಲ್ಲಿ 15 ಜೀವ ಬಲಿ ಯಾಗಿವೆ ಎಂಬ ಮಾಹಿತಿ ಇದರ ಇತಿಹಾಸ ಕೆದಕಿದಾಗ ಸಿಕ್ಕಿದೆ.

ಐರಾಳ 
ಚಾರ್ವಾಕ ಗ್ರಾಮದ ಕುಂಬ್ಲಾಡಿ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ದೇವರ ಅವಭೃಥ ಸ್ಥಳವಾದ ಐರಾಳ ಎನ್ನುವ ಹೆಸರಿಗೆ ಒಂದು ಇತಿಹಾಸವಿದೆ. ಈ ಕಡವಿನಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ ನಾಡ ದೋಣಿ ವ್ಯವಸ್ಥೆ ಇರಲಿಲ್ಲ. ಆಗ ಐವರು ಒಬ್ಬನ್ನೊಬ್ಬರು ಕೈ ಕೈ ಹಿಡಿದುಕೊಂಡು ನದಿ ದಾಟುತ್ತಿದ್ದಾಗ ನೀರು ಪಾಲಾಗಿದ್ದರು. ಐವರು ಇಲ್ಲವಾದ ಸ್ಥಳಕ್ಕೆ ಐರಾಳ ಎನ್ನುವ ನಾಮಕರಣವಾಯಿತು ಎನ್ನುತ್ತಾರೆ ಹಿರಿಯರು. ಅದೇ ಹೆಸರು ಈಗಲೂ ಪ್ರಚಲಿತ.

ಇಲ್ಲಿ ಹಲವು ವರ್ಷಗಳಿಂದ ನಾಡ ದೋಣಿ ವ್ಯವಸ್ಥೆಯಿದ್ದರೂ ಹಲವರು ನದಿ ದಾಟುವ ದುಸ್ಸಾಹಕ್ಕೆ ಇಳಿದು ಪ್ರಾಣ ಕಳೆದುಕೊಂಡಿದ್ದಾರೆ. ದೋಣಿಯಲ್ಲಿ ನದಿ ದಾಟಿಸುವ ವ್ಯವಸ್ಥೆ ಇತ್ತೀಚಿನ ಐದಾರು ವರ್ಷಗಳ ಹಿಂದೆ ಚಾಲ್ತಿಯಲ್ಲಿತ್ತು. ದೋಣಿ ಮಾಲಕರು ನಿಲ್ಲಿಸಿದರು. ಬಳಿಕ ಜನ ಆಲಂಕಾರು ಮುಖಾಂತರ ಶಾಂತಿಮೊಗರು ಅಥವಾ ಏಮಯ ದೋಣಿ ಕಡವಿನಲ್ಲಿ ಅತ್ತಿಂದ ಇತ್ತ ನದಿ ದಾಟಿ ತಮ್ಮ ವ್ಯವಹಾರಕ್ಕೆ ಹೋಗುತ್ತಿದ್ದರು. ಆದರೆ ಕುಂತೂರು, ಕುಂಟ್ಯಾನ ಭಾಗದಿಂದ ಚಾರ್ವಾಕ ಗ್ರಾಮದ ಅಂಬುಲ, ಖಂಡಿಗಾ, ಚಾರ್ವಾಕ, ಕುಂಬ್ಲಾಡಿ ಮುಂತಾದ ಪ್ರದೇಶಗಳಿಗೆ ಸುಲಭ ಸಂಪರ್ಕಕ್ಕೆ ಇರುವುದು ಐರಾಳ ಕಡವು. ನದಿ ನೀರು ಕಡಿಮೆಯಾದಾಗ ಅಥವಾ ಬೇಸಿಗೆ ಕಾಲದಲ್ಲಿ ಇಲ್ಲಿ ಜನರಿಗೆ ಸಮಸ್ಯೆ ಇಲ್ಲ. ಆದರೆ ಮಳೆ ನೀರು ಅಧಿಕವಾದಾಗ ಕಡವು ಅಪಾಯದ ಮಟ್ಟದಲ್ಲಿದ್ದಾಗ ಏನೂ ಮಾಡದ ಸ್ಥಿತಿ ಇದೆ.

ದುಸ್ಸಾಹಕ್ಕಿಳಿದು ಪ್ರಾಣ ಕಳೆದುಕೊಂಡರು
ಐರಾಳದಿಂದ ಅರ್ಧ ಕಿ.ಮೀ. ದೂರದಲ್ಲಿ ನವೆಂಬರ್‌ ತಿಂಗಳಲ್ಲಿ ಬಾರ್ಕುಲಿ ಗುಜ್ಜರ್ಮೆ ಎಂಬಲ್ಲಿ ತೆಪ್ಪ ಮುಳುಗಿ ಇಬ್ಬರು ಮೃತಪಟ್ಟಿದ್ದರು. ಸ್ಥಳೀಯ ಕಾಂಗ್ರೆಸ್‌ ಮುಖಂಡ ಸಿ.ಪಿ. ಜಯರಾಮ ಗೌಡರ ಪುತ್ರ ವಿಶ್ವಾಸ್‌ ಅರುವ ಹಾಗೂ ಅವರ ಸಂಬಂಧಿಯೋರ್ವರು ಇದೇ ಜಾಗದಲ್ಲಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸ್ಥಳೀಯರಾದ ಸಂಕಪ್ಪ ಗೌಡ ಮತ್ತು ಮತ್ತೂಬ್ಬರು ಇಲ್ಲೇ ಸಾವನ್ನಪ್ಪಿದ್ದರು. ಎರಡು ಜನ ಮಹಿಳೆಯರು ಬಟ್ಟೆ ತೊಳೆ ಯಲು ಬಂದವರು ಕಾಲು ಜಾರಿ ನೀರು ಪಾಲಾಗಿದ್ದರು. ಆ ಬಳಿಕ ಮತ್ತೂಬ್ಬ ರೂ ನದಿಪಾಲಾಗಿದ್ದರು. ಕುಂತೂರಿನ ವ್ಯಕ್ತಿ ಯೊಬ್ಬರು ಅಂಬುಲಕ್ಕೆ ಮಳೆಗಾಲದಲ್ಲಿ ನದಿ ದಾಟಲು ಹೋಗಿ ನೀರು ಪಾಲಾಗಿ ಶವ ಸಿಕ್ಕಿರಲಿಲ್ಲ. ಚಾರ್ವಾಕ ಅರ್ವದ ಯುವಕ ಹಾಗೂ ಅವರ ಸಂಬಂಧಿಕ ಯುವಕರಿಬ್ಬರು ಒಂದೇ ದಿನ ಇಲ್ಲಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಕುಂತೂರಿನ ಪಲ್ಲತಡ್ಕ ನಿವಾಸಿಯೊಬ್ಬರು ಇಲ್ಲಿಯೇ ನೀರು ಪಾಲಾಗಿದ್ದರು.

ಇಪ್ಪತ್ತೇಳು ವರ್ಷಗಳ ಬೇಡಿಕೆ
ಕುಂತೂರು, ಪೆರಾಬೆ, ಚಾರ್ವಾಕ, ಕುದ್ಮಾರು, ಕಾಣಿಯೂರು ಗ್ರಾಮದ ಸಂಪರ್ಕಕ್ಕೆ ಐರಾಳ ಮುಖ್ಯ ಸ್ಥಳ. ಮಳೆಗಾಲದಲ್ಲಿ ಸುಮಾರು 9ಕಿ.ಮೀ ಸುತ್ತು ಬಳಸಿ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಸಾಗಬೇಕಿದೆ. ಇದನ್ನು ತಪ್ಪಿಸಲು ನದಿ ದಾಟಲು ಯತ್ನಿಸಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಊರಿನ ಪ್ರಮುಖರು ಸರ್ವಋತು ತೂಗುಸೇತುವೆ ನಿರ್ಮಿಸಬೇಕೆಂದು ಸ್ಥಳೀಯ ಜನಪ್ರತಿನಿಧಿಗಳಿಗೆ 1990ರಲ್ಲಿ ಮನವಿ ಮಾಡಿದ್ದರು. ಆದರೆ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಹೋರಾಟ ನಡೆಸಿಯೇ ಸಿದ್ಧ
ಐರಾಳದಲ್ಲಿ ಈವರೆಗೆ ಹಲವು ಜೀವಗಳು ಬಲಿಯಾಗಿವೆ. ಇಂತಹ ಘಟನೆಗಳು ಮುಂದೆ ಮರುಕಳಿಸಬಾರದೆಂದು ಇಲ್ಲಿ ಸರ್ವಋತು ತೂಗುಸೇತುವೆ ನಿರ್ಮಾಣಕ್ಕೆ ನ್ಯಾಯಯುತ ಹೋರಾಟ ಮಾಡಲಾಗುವುದು. ಈ ವಿಚಾರವಾಗಿ ಮುಂದಿನ ಪೆರಾಬೆ ಗಾ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.
– ಚೆನ್ನಪ್ಪಗೌಡ, 
ಪೆರಾಬೆ ಗ್ರಾ.ಪಂ.ಸದಸ್ಯ

– ಸದಾನಂದ ಆಲಂಕಾರು 

ಟಾಪ್ ನ್ಯೂಸ್

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.