ಐವತ್ತು ಸಾವಿರಕ್ಕೂ  ಮಿಕ್ಕಿ ಜಾಗತಿಕ ಜಪ ಮಾಲೆಗಳ ಪ್ರದರ್ಶನ


Team Udayavani, Nov 10, 2017, 11:32 AM IST

10-Nov-5.jpg

ಮಹಾನಗರ: ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್‌ ಉಪಕರಣಗಳು, ಫರ್ನಿಚರ್‌ಗಳು; ಹಣ್ಣು, ತರಕಾರಿ ಮತ್ತಿತರ ಆಹಾರ ವಸ್ತುಗಳು, ಬಟ್ಟೆ ಬರೆ ಇತ್ಯಾದಿಗಳ ಪ್ರದರ್ಶನ ನಗರದಲ್ಲಿ ಸಾಮಾನ್ಯ. ಈಗ ಅವುಗಳ ಸಾಲಿಗೆ ವಿಶೇಷವಾದ ಧಾರ್ಮಿಕ ವಸ್ತುಗಳ ಪ್ರದರ್ಶನವೂ ಸೇರಿದೆ.

ಕೆಥೋಲಿಕ್‌ ಕ್ರೈಸ್ತರು ಪ್ರಾರ್ಥನೆಗೆ ಬಳಸುವ ಜಪ ಮಾಲೆಗಳ ಜಾಗತಿಕ ಮಟ್ಟದ ಪ್ರದರ್ಶನ ರೊಜಾರಿಯೋ ಕೆಥಡ್ರಲ್‌ ಆವರಣದಲ್ಲಿರುವ ರೊಜಾರಿಯೋ ಕಲ್ಚರಲ್‌ ಹಾಲ್‌ನಲ್ಲಿ ಗುರುವಾರ ಪ್ರಾರಂಭವಾಗಿದ್ದು, ನ. 12ರ ತನಕ ಪ್ರತಿದಿನ
ಬೆಳಗ್ಗೆ 10ರಿಂದ ರಾತ್ರಿ 8ರ ತನಕ ನಡೆಯಲಿದೆ. ಕೇರಳದ ಸಾಬೂ ಎಂಬವರು ಇದನ್ನು ಸಂಘಟಿಸಿದ್ದು, ಇದು ಅವರ 125ನೇ ಪ್ರದರ್ಶನವಾಗಿದೆ.

ಮರ, ವಿವಿಧ ಮಣಿ, ಲೋಹಗಳು ಸಹಿತ ಜಗತ್ತಿನ 80ಕ್ಕೂ ಅಧಿಕ ದೇಶಗಳ 50,000ಕ್ಕೂ ಮಿಕ್ಕಿದ ಜಪ ಮಾಲೆಗಳು ಪ್ರದರ್ಶನದಲ್ಲಿವೆ. ಸಂತರ ಅಮೃತ ಹಸ್ತಗಳಿಂದ ಆಶೀರ್ವದಿಸಿದ ಜಪ ಮಾಲೆಗಳು, ದಿವಂಗತ ಪೋಪ್‌ ಸಂತ ಜಾನ್‌ ಪಾವ್ಲ್  ದ್ವಿತೀಯ ಅವರು ಮತ್ತು ಸಂತ ಮದರ್‌ ತೆರೇಸಾ ಅವರು ಆಶೀರ್ವಚಿಸಿದ ಜಪಸರಗಳು ಇಲ್ಲಿವೆ.

ದುಬಾರಿ ವಜ್ರ (ಸರೋಸ್ಕಿ ಡೈಮಂಡ್‌), ಶ್ವೇತ ಬಂಗಾರ (ವೈಟ್‌ ಗೋಲ್ಡ್‌)ದ ಜಪ ಮಾಲೆ ಕೂಡ ಇಲ್ಲಿದೆ. ವಜ್ರದ ಜಪ ಮಾಲೆಯನ್ನು ಅವರಿಗೆ ಇಟಲಿಯ ಧರ್ಮಗುರು ಒಬ್ಬರು ನೀಡಿದ್ದರು.

ಸಾಬೂ ಕೇರಳದ ಕೊಚ್ಚಿಯ ನಿವಾಸಿಯಾಗಿದ್ದು, ಜಪ ಮಾಲೆಗಳ ಸಂಗ್ರಹ ಅವರ ಹವ್ಯಾಸ. 35 ವರ್ಷಗಳಿಂದ ಈ ಹವ್ಯಾಸದಲ್ಲಿದ್ದು, 10 ವರ್ಷಗಳಿಂದ (2007ರಿಂದ) ಅವುಗಳ ಪ್ರದರ್ಶನವನ್ನು ದೇಶದ ವಿವಿಧ ಭಾಗಗಳಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಪತ್ನಿ ಬೆನೆಟ್ಟಾ ಮತ್ತು ಪುತ್ರ ಫ್ರಾನ್ಸಿಸ್‌ ಅಘಿಲ್‌ ಸಾಥ್‌ ನೀಡುತ್ತಿದ್ದಾರೆ. 

‘ನನಗೆ ಮೇರಿ ಮಾತೆಯ ಮೇಲಣ ಭಕ್ತಿ ಮತ್ತು ಜಪ ಮಾಲೆಯ ಪ್ರಾರ್ಥನೆಯ ಪರಂಪರೆ ನನ್ನ ಕುಟುಂಬದಿಂದ ಬಳುವಳಿಯಾಗಿ ಬಂದಿದೆ. 1981ರಲ್ಲಿ ನನ್ನ ಅಜ್ಜ ಮರಣ ಶಯ್ಯೆಯಲ್ಲಿದ್ದಾಗ ನೀಡಿದ ಜಪ ಮಾಲೆಯು ನನ್ನ ಭಕ್ತಿ ಮತ್ತು ಶ್ರದ್ಧೆಗೆ ಮತ್ತಷ್ಟು ಉತ್ತೇಜನ ನೀಡಿತು. ವೆಲಂಕಣಿ ಮಾತೆ ಧರಿಸಿದ್ದ ಎರಡು ಜಪ ಮಾಲೆಗಳು ನನ್ನ ಕೈ ಸೇರಿದ ಬಳಿಕ ನಾನು ಜಪ ಮಾಲೆಗಳ ಸಂಗ್ರಹವನ್ನು ಆರಂಭಿಸಿದೆ’ ಎನ್ನುತ್ತಾರೆ ಸಾಬೂ.

‘ಜಪ ಮಾಲೆಗಳ ಸಂಗ್ರಹದ ಕಾಯಕವನ್ನು ಮುಂದುವರಿಸಿದಾಗ ದೇಶ ವಿದೇಶಗಳ ಬಿಷಪರು ಬಳಸುತ್ತಿದ್ದ ಜಪ ಮಾಲೆಗಳು ಲಭಿಸಿದವು. ಈಗ 800ಕ್ಕೂ ಮಿಕ್ಕಿ ಹಳೆಯ ಜಪ ಮಾಲೆಗಳಿವೆ. ಕಾರ್ಡಿನಲ್‌ಗ‌ಳು, ಬಿಷಪರು, ಧರ್ಮ ಗುರುಗಶು, ಧರ್ಮ ಭಗಿನಿಯರು, ಸ್ನೇಹಿತರು, ಹಿತೈಷಿಗಳು ಜಪ ಮಾಲೆಗಳನ್ನು ನೀಡಿದ್ದು, ಪ್ರಸ್ತುತ 60,000ದಷ್ಟು ಸಂಗ್ರಹವಿದೆ. ಮದರ್‌ ತೆರೇಸಾ, ಪೋಪ್‌ ಜಾನ್‌ ಪಾವ್ಲ್ ದ್ವಿತೀಯ, ಪೋಪ್‌ ಬೆನೆಡಿಕ್ಟ್ 16, ಈಗಿನ ಪೋಪ್‌ ಫ್ರಾನ್ಸಿಸ್‌ ಅವರು ಆಶೀರ್ವಚನ ಮಾಡಿದ ಜಪ ಮಾಲೆಗಳಿವೆ. ಜೆರುಸಲೆಂ, ಬೆತ್ಲೆಹೇಂ, ಫಾತಿಮಾ, ಲೂರ್ಡ್ಸ್, ಕಿಬಿಹೊ, ನಾಕ್‌, ಅಮೆರಿಕದ ಜಪ ಮಾಲೆಗಳಿವೆ’ ಎನ್ನುತ್ತಾರೆ.

ಬಿಷಪ್‌ ಉದ್ಘಾಟನೆ
ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಗುರುವಾರ ಈ ಜಾಗತಿಕ ಮಟ್ಟದ ಜಪ ಮಾಲೆಗಳ ಪ್ರದರ್ಶನವನ್ನು ಉದ್ಘಾಟಿಸಿದರು. ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್‌ ಮೊರಾಸ್‌ ಪ್ರಭು, ಪಾಲನಾ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಶಾಸಕ ಜೆ.ಆರ್‌.ಲೋಬೋ, ಸಾಬು, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್‌ ಕ್ಯಾಸ್ಟೆಲಿನೊ, ಅರ್ಸುಲಾಯ್ನ ಫ್ರಾನ್ರಿಸ್ಕನ್‌ ಧರ್ಮ ಭಗಿನಿಯರ ಸಂಘಟನೆಯ ಸುಪೀರಿಯರ್‌ ಸಿ| ರೀಟಾ ವಾಸ್‌ ಅವರು ವೇದಿಕೆಯಲ್ಲಿದ್ದರು. ರೊಜಾರಿಯೋ ಕೆಥೆಡ್ರಲ್‌ನ ಪ್ರಧಾನ ಗುರು ಫಾ| ಜೆ.ಬಿ. ಕ್ರಾಸ್ತಾ ಸ್ವಾಗತಿಸಿದರು. ಉಪಾಧ್ಯಕ್ಷ ಸೈಮನ್‌, ಕಾರ್ಯದರ್ಶಿ ಎಲಿಜಬೆತ್‌ ರೋಚ್‌ ಮತ್ತಿತರರು ಉಪಸ್ಥಿತರಿದ್ದರು.

ಕೆಥೆಡ್ರಲ್‌ನ 450ನೇ ವರ್ಷದ ಸ್ಮರಣಾರ್ಥ
ರೊಜಾರಿಯೋ ಕೆಥೆಡ್ರಲ್‌ ಅಥವಾ ಮಹಾ ದೇವಾಲಯವು ಅವಿಭಜಿತ ಮಂಗಳೂರು ಧರ್ಮ ಪ್ರಾಂತದ (ದಕ್ಷಿಣ ಕನ್ನಡ,
ಉಡುಪಿ ಜಿಲ್ಲೆ ಮತ್ತು ಕಾಸರಗೋಡು) ಪ್ರಥಮ ಚರ್ಚ್‌. ಜಪ ಮಾಲಾ ಮಾತೆ (ಅವರ್‌ ಲೇಡಿ ಆಫ್‌ ರೋಜರಿ)ಗೆ ಸಮರ್ಪಿಸಿದ ಈ ಮಹಾ ದೇವಾಲಯಕ್ಕೆ 450 ವರ್ಷಗಳಾಗುತ್ತಿರುವ ನೆನಪಿಗೆ ಹಾಗೂ 2018ನೇ ವರ್ಷವನ್ನು ಜಪ ಮಾಲೆಯ ಪ್ರಾರ್ಥನಾ ವರ್ಷವಾಗಿ ಆಚರಿಸಲು ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದರ್ಶನ. 

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿಯಿಂದ ರೈಲು ಸೇವೆಯಲ್ಲಿ ವ್ಯತ್ಯಯ

Rain-12

Rain: ಎಲ್ಲೋ ಅಲರ್ಟ್‌; ವಾಯುಭಾರ ಕುಸಿತ, ಕರಾವಳಿಯಲ್ಲಿ ಮುಂದುವರಿದ ಮಳೆ

prasad-Kanchan

Udupi: ತಿರುಚಿದ ಛಾಯಾಚಿತ್ರ ಪ್ರಸಾರದ ವಿರುದ್ಧ ಕ್ರಮ: ಪ್ರಸಾದ್‌ರಾಜ್‌ ಕಾಂಚನ್‌

MGM-College

Udupi: ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆ ಬದಲಾಗಲ್ಲ: ಕುಲಪತಿ ಡಾ.ಧರ್ಮ

DC-Office

Udupi: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

PUTHIGE-kar

Udupi: ಅಖಿಲ ಭಾರತೀಯ ಪ್ರಾಚ್ಯ ವಿದ್ಯಾ ಸಮ್ಮೇಳನ: ಕಾರ್ಯಾಲಯ ಉದ್ಘಾಟನೆ

Congress-Symbol

Mangaluru: ಕೇಂದ್ರದ ತೆರಿಗೆ ವಿಷಯದಲ್ಲಿ ಬಿಜೆಪಿ ಮೌನ: ಯು.ಟಿ. ಫರ್ಝಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Railway

Mangaluru: ಹಳಿ ನಿರ್ವಹಣೆ ಕಾಮಗಾರಿಯಿಂದ ರೈಲು ಸೇವೆಯಲ್ಲಿ ವ್ಯತ್ಯಯ

Congress-Symbol

Mangaluru: ಕೇಂದ್ರದ ತೆರಿಗೆ ವಿಷಯದಲ್ಲಿ ಬಿಜೆಪಿ ಮೌನ: ಯು.ಟಿ. ಫರ್ಝಾನ

Ullal-Acci

Ullala: ಮರಕ್ಕೆ ಸ್ಕೂಟರ್‌ ಢಿಕ್ಕಿ: ಸವಾರ ಸಾವು

18

Kinnigoli: ಮರ ಬಿದ್ದು ಬೈಕ್‌ ಹಾನಿ

Mangaluru: ಟ್ರೇಡಿಂಗ್‌ನಲ್ಲಿ ಲಾಭ ಗಳಿಸುವ ಆಸೆಯಿಂದ 1.12 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!

Mangaluru: ಟ್ರೇಡಿಂಗ್‌ನಲ್ಲಿ ಲಾಭ ಗಳಿಸುವ ಆಸೆಯಿಂದ 1.12 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿಯಿಂದ ರೈಲು ಸೇವೆಯಲ್ಲಿ ವ್ಯತ್ಯಯ

Rain-12

Rain: ಎಲ್ಲೋ ಅಲರ್ಟ್‌; ವಾಯುಭಾರ ಕುಸಿತ, ಕರಾವಳಿಯಲ್ಲಿ ಮುಂದುವರಿದ ಮಳೆ

prasad-Kanchan

Udupi: ತಿರುಚಿದ ಛಾಯಾಚಿತ್ರ ಪ್ರಸಾರದ ವಿರುದ್ಧ ಕ್ರಮ: ಪ್ರಸಾದ್‌ರಾಜ್‌ ಕಾಂಚನ್‌

MGM-College

Udupi: ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆ ಬದಲಾಗಲ್ಲ: ಕುಲಪತಿ ಡಾ.ಧರ್ಮ

DC-Office

Udupi: ಕನ್ನಡ ರಾಜ್ಯೋತ್ಸವ ಸಿದ್ಧತೆಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.