ಡೆಂಗ್ಯೂ ವಿರುದ್ಧ ಸಹಭಾಗಿ ಸಮರ: ಡಿಸಿ

ಜು. 28: ಮಂಗಳೂರಿನಲ್ಲಿ ಡ್ರೈವ್‌ ಡೇ; 'ಲಾರ್ವಾ ಬೇಟೆ'

Team Udayavani, Jul 27, 2019, 5:29 AM IST

v-48

ಮಂಗಳೂರು: ಡೆಂಗ್ಯೂ ನಿಯಂತ್ರಣಕ್ಕಾಗಿ ಸೊಳ್ಳೆಗಳ ಲಾರ್ವಾ ನಾಶಕ್ಕೆ ವಿಶೇಷ ಒತ್ತು ನೀಡಿರುವ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ನಗರದಲ್ಲಿ ರವಿವಾರ (ಜು. 28) ಡ್ರೈವ್‌ ಡೇ ಆಚರಿಸಲು ನಿರ್ಧರಿಸಿದ್ದಾರೆ.

ಅಂದು ಬೆಳಗ್ಗೆ 10ರಿಂದ 11 ಗಂಟೆಯ ತನಕ ಎಲ್ಲ ನಾಗರಿಕರು ತಮ್ಮ ಮನೆ ಮತ್ತು ಸುತ್ತಮುತ್ತ ತೆರೆದ ಪ್ರದೇಶ, ವಸ್ತುಗಳಲ್ಲಿ ಸಂಗ್ರಹವಾಗಿ ರುವ ನೀರನ್ನು ಬರಿದು ಮಾಡಿ ಸ್ವಚ್ಛಗೊಳಿಸುವ ಜತೆಗೆ ಸೊಳ್ಳೆ ಲಾರ್ವಾ ಪತ್ತೆ ಹಚ್ಚಿ ನಾಶ ಮಾಡುವ ಕಾರ್ಯಾಚರಣೆ (ಡ್ರೈವ್‌ ಡೇ) ನಡೆಸಲಾಗುವುದು ಎಂದವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರಸ್‌ ಕ್ಲಬ್‌ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.

ಜಿಲ್ಲಾಡಳಿತವು ಡೆಂಗ್ಯೂ ಪೀಡಿತ ಪ್ರದೇಶಗಳಲ್ಲಿ ತಪಾಸಣೆ ಮತ್ತು ಜಾಗೃತಿ ಕೈಗೊಳ್ಳುತ್ತಿದೆ. ಸಾರ್ವಜನಿಕರು ಸಂಪೂರ್ಣ ಸಹಕಾರ ಕೊಡಬೇಕು ಎಂದವರು ಮನವಿ ಮಾಡಿದರು.

ಹೋರಾಟ ಲಾರ್ವಾ ವಿರುದ್ಧ!
ಸದ್ಯ ಮಂಗಳೂರು ನಗರದಲ್ಲಿ ಮುಂದೆ ತಾಲೂಕುಗಳಲ್ಲಿಯೂ ಡ್ರೈವ್‌ ಡೇ ಅಭಿಯಾನ ನಡೆಸಲಾಗು ವುದು. ಡೆಂಗ್ಯೂ ಸೊಳ್ಳೆಗಳ ನಾಶಕ್ಕೆ ಫಾಗಿಂಗ್‌ ಪರಿಹಾರವಲ್ಲ ಎಂದು ವೈದ್ಯರೂ ಸಲಹೆ ಮಾಡಿದ್ದಾರೆ. ಸೊಳ್ಳೆಗಳ ಲಾರ್ವಾ ನಾಶವೊಂದೇ ಸದ್ಯದ ಪರಿಹಾರ. ಅದಕ್ಕೆ ಹೆಚ್ಚಿನ ಆದ್ಯತೆ ಮತ್ತು ಗಮನವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ವಿವರಿಸಿದರು.

ಪರಿಹಾರಕ್ಕೆ ಮನವಿ
ಸಾಂಕ್ರಾಮಿಕ ರೋಗಗಳಿಂದ ಸಾವ ನ್ನಪ್ಪಿದವರಿಗೆ ಸರಕಾರದಿಂದ ಪರಿಹಾರ ಲಭ್ಯವಿಲ್ಲ. ಆದರೆ ಡೆಂಗ್ಯೂನಿಂದ ಸಾವನ್ನಪ್ಪಿದವರಿಗೆ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗುವುದು ಎಂದರು.

ಎಜೆ ಆಸ್ಪತ್ರೆಯ ಡೀನ್‌ ಡಾ| ಅಶೋಕ್‌ ಹೆಗ್ಡೆ, ಕಾ.ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.

ಸಂವಾದಕ್ಕೆ ಮುನ್ನ ಪತ್ರಕರ್ತರು ಮತ್ತು ಕುಟುಂಬದವರ ಉಚಿತ ರಕ್ತ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ದ.ಕ. 46; ಉಡುಪಿ 97 ಪ್ರಕರಣ
ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 46 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಶುಕ್ರವಾರ ದಾಖಲಾಗಿರುವ 46 ಪ್ರಕರಣಗಳ ಪೈಕಿ 40 ಮಂಗಳೂರು ತಾಲೂಕು, 4 ಬಂಟ್ವಾಳ ತಾಲೂಕು ಮತ್ತು 2 ಪ್ರಕರಣ ಇತರ ಜಿಲ್ಲೆಗಳದು.

35 ಸಾವಿರ ರೂ. ದಂಡ
ಸೊಳ್ಳೆ ಉತ್ಪತ್ತಿಗೆ ಪೂರಕ ತಾಣಗಳಿರುವ ಕಟ್ಟಡಗಳಿಗೆ ದಂಡ ಮುಂದುವರಿದಿದ್ದು, ಶುಕ್ರವಾರ 35 ಸಾವಿರ ರೂ. ದಂಡ ಸಂಗ್ರಹವಾಗಿದೆ. ಪಾಂಡೇಶ್ವರ, ಬಂದರು ಪ್ರದೇಶಗಳಲ್ಲಿ ದಂಡ ವಿಧಿಸಲಾಗಿದೆ.

ಉಡುಪಿ: 97 ಡೆಂಗ್ಯೂ 50 ಮಲೇರಿಯಾ
ಉಡುಪಿ: ಜಿಲ್ಲೆಯಲ್ಲಿ ಜು.26ರ ವರೆಗೆ ಒಟ್ಟು 97 ಡೆಂಗ್ಯೂ ಮತ್ತು 50 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಹೆಚ್ಚು ಡೆಂಗ್ಯೂ ಪತ್ತೆ ಯಾದ ವಾರಂಬಳ್ಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಫಾಗಿಂಗ್‌ ಮಾಡಲಾಗಿದೆ. ಸೊಳ್ಳೆ ಉತ್ಪತ್ತಿ ತಾಣ ನಾಶವೇ ಮುಖ್ಯ ಗುರಿ,ಇದರಲ್ಲಿ ಆಶಾ ಕಾರ್ಯಕರ್ತರು ಕೈ ಜೋಡಿಸುತ್ತಿದ್ದಾರೆಎಂದು ರಾ. ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್‌ ಭಟ್ ತಿಳಿಸಿದ್ದಾರೆ.

ಟಾಪ್ ನ್ಯೂಸ್

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Japan rivals: ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

1-huli

Pilikula: 2 ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Japan rivals: ನಿಸ್ಸಾನ್‌-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.