ತುಂಬೆ ನೀರಾ ಘಟಕ: ಆಶಾದಾಯಕ ಬೆಳವಣಿಗೆ


Team Udayavani, Jul 13, 2017, 2:35 AM IST

1207bteph9.jpg

ಬಂಟ್ವಾಳ: ರಾಜ್ಯದಲ್ಲಿ ಪ್ರಥಮ ಅನುಷ್ಠಾನಿತ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಸ್ಥಾಪಿತ ನೀರಾ ಘಟಕ ಮುಚ್ಚುಗಡೆ ಯಾಗಿ ಇಂದಿಗೆ ಸರಿಯಾಗಿ ಎರಡು ವರ್ಷವಾಗಿದ್ದು ಇದೀಗ ಆಶಾದಾಯಕ ಬೆಳವಣಿಗೆಯೊಂದು ನಡೆಯುವ ಮೂಲಕ ಘಟಕ ಪುನಶ್ಚೇತನ ಆಗುವ ಲಕ್ಷಣಗಳು ಗೋಚರಿಸಿವೆ.

ಪ್ರಸ್ತುತ ಹಂತದಲ್ಲಿ ಘಟಕ ಪುನಶ್ಚೇತನಕ್ಕೆ ರಾಜ್ಯ ಸರಕಾರವು ಸೂಕ್ತವಾದ ಅನುದಾನ ಒದಗಿಸಿದರೆ ಖಾಸಗಿ ನೇತೃತ್ವದ ಕಂಪೆನಿಗಳು ನೀರಾ ಯೋಜನೆಯನ್ನು ಅನುಷ್ಠಾನಿಸಲು ಮುಂದೆ ಬರಲಿದೆ ಎಂದು ತಿಳಿದುಬಂದಿದೆ. 

ರೈತರ ಪಾಲಿಗೆ ಉದ್ಯೋಗ ಪೂರಕ ಘಟಕವನ್ನು ಪುನಶ್ಚೇತನ ಮಾಡುವಲ್ಲಿ ಖಾಸಗಿ ಕಂಪೆನಿಗಳ ಸಹಭಾಗಿತ್ವದ ಪ್ರಯತ್ನವೊಂದು ನಡೆದಿದೆ. 

ಎರಡು ವರ್ಷದ ಹಿಂದೆ ಸ್ಥಗಿತ
ಘಟಕ ಆರಂಭವಾದಾಗ ಕೇರಳ ರಾಜ್ಯದ ಖಾಸಗಿ ಕಂಪೆನಿ ಗುತ್ತಿಗೆ ನಿರ್ವಹಣೆ ವಹಿಸಿತ್ತು.  ಕಂಪೆನಿಯನ್ನು ನಿರ್ವಹಿಸುತ್ತಾ ಮೂರು ವರ್ಷಗಳಿಂದ ಸಹಾಯಧನ ಲಾಭ ಪಡೆದ ಕಂಪೆನಿ ಎರಡು ವರ್ಷದ ಹಿಂದೆ ಇಲ್ಲಿನ ಘಟಕಕ್ಕೆ ವಿದಾಯ ಹೇಳಿ ಸದ್ದಿಲ್ಲದೆ ಹೋಗಿಬಿಟ್ಟಿದೆ.

ಹಾಪ್‌ಕಾಮ್‌ ಘಟಕಕ್ಕೆ ರವಾನೆ 
ಕಲ್ಪರಸ ಅಭಿದಾನದ ತೆಂಗಿನ ಮರದ ದ್ರವೋತ್ಪನ್ನ. ನೀರಾ ಸಾಫ್ಟ್ ಡ್ರಿಂಕ್ಸ್‌  ಎಳನೀರಿನಷ್ಟೆ ಶುದ್ಧ. ರಾಷ್ಟ್ರಮಟ್ಟ
ದಲ್ಲಿಯೇ ಅತ್ಯಂತ ಆಧುನಿಕತೆಯ ಪ್ರಥಮ ಘಟಕ.  ಇದು ಬಂಟ್ವಾಳ ತಾಲೂಕು ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ  2011-12ನೇ ಸಾಲಿನಲ್ಲಿ ಮೊದಲಿಗೆ  ಅಳವಡಿಕೆ ಆಗಿತ್ತು.   ಸುದೀರ್ಘ‌ ಎರಡು ವರ್ಷಗಳ ಅವಧಿಯಲ್ಲಿ ನಿರ್ವಹಣೆ ವಿಚಾರದ ತಾಂತ್ರಿಕ ಅಡಚಣೆ ಬಳಿಕ ಅಧಿಕೃತ ಚಾಲನೆಗೆ ದಿನಗಣನೆ ಆರಂಭವಾಗಿತ್ತು. ಪ್ರಾಯೋಗಿಕ ಮಾರಾಟಕ್ಕಾಗಿ 2014 ಮೇ 6ರಂದು ನೀರಾ ತಂಪು ಪಾನೀಯ ಪ್ಯಾಕೆಟ್‌ ಮಾದರಿಯಲ್ಲಿ ಮಂಗಳೂರು ಹಾಪ್‌ಕಾಮ್‌ ಘಟಕಕ್ಕೆ ರವಾನೆಯಾಗಿದೆ.  ಅಂದು ಬಂಟ್ವಾಳ ತಾಲೂಕು ತೋಟಗಾರಿಕೆ  ಸಹಾಯಕ ನಿರ್ದೇಶಕ ಪಿ. ಸಂಜೀವ ನಾಯ್ಕ ಅವರು  ಮುತುವರ್ಜಿ ವಹಿಸಿ ಕೆಲಸ ಮಾಡಿದ್ದರು. ಆದರೆ ಅವರು ಕೆಲವೊಂದು ಹಿತಾಸಕ್ತಿಗಳಿಗೆ ಒಗ್ಗಿಕೊಳ್ಳದ ಕಾರಣ ಇಲ್ಲಿಂದ ಎತ್ತಂಗಡಿಯಾಗಿಉಡುಪಿಗೆ ವರ್ಗಾವಣೆಗೊಂಡರು. ಇದರೊಂದಿಗೆ ಬಂಟ್ವಾಳದಲ್ಲಿ ನೀರಾ ಘಟಕವು ಹಿಂದಡಿ ಇಡುತ್ತಾ ಅಂತಿಮವಾಗಿ ಮುಚ್ಚುಗಡೆ ಆಯಿತು.

ತೋಟಗಾರಿಕೆ ಇಲಾಖೆ, ತೆಂಗು ಅಭಿವೃದ್ಧಿ ಮಂಡಳಿ, ಪಾಲಕ್ಕಾಡ್‌ ತೆಂಗು ಉತ್ಪಾದಕರ ಕಂಪೆನಿ ಜಂಟಿಯಾಗಿ ಘಟಕ ಇಲ್ಲಿನ ಘಟಕವನ್ನು ನಿರ್ವಹಿಸಲು ಒಪ್ಪಿಕೊಂಡು, ಮೂರ್ತೆದಾರರ ಮಹಾ ಮಂಡಲದ ತಾತ್ವಿಕ ಒಪ್ಪಿಗೆಯಿಂದ ಮಾರಾಟ ಆರಂಭವಾಗಿತ್ತು.

ತುಂಬೆ ಘಟಕವು ದಿನಕ್ಕೆ ಗರಿಷ್ಠ 2,000 ಲೀ. ಸಂಗ್ರಹ ಮತ್ತು ಸಂಸ್ಕರಣೆ  ಸಾಮರ್ಥ್ಯ ಹೊಂದಿತ್ತು. ಕನಿಷ್ಠ ನೂರು ಮಂದಿ ನೀರಾ ಮೂರ್ತೆದಾರರು, ಅಷ್ಟೆ ಸಂಖ್ಯೆಯ ಸಹಾಯಕರು, ಸಂಸ್ಕರಣೆ, ಮಾರಾಟ ಮತ್ತು ವಿತರಣೆಗೆ ಸುಮಾರು ಐವತ್ತು ಮಂದಿ ಸಿಬಂದಿಗಳ ಮೂಲಕ ಹಲವು ಮಂದಿಗೆ ಉದ್ಯೋಗ ಪೂರಕವಾಗಿತ್ತು.

1 ಕೋ.ರೂ.  ಅನುದಾನ
ತೆಂಗಿನ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಲ್ಲಿ  ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿ ನೂತನ ಘಟಕ ಯಂತ್ರೋಪಕರಣಗಳ ಅಳವಡಿಕೆ ಆಗಿದೆ. 2011-12ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಒಂದು ಕೋಟಿ ರೂ. ಅನುದಾನವು ಇದಕ್ಕೆ ಬಿಡುಗಡೆ ಆಗಿತ್ತು ಘಟಕ ಎಲ್ಲೆಲ್ಲಿದೆ ಒರಿಸ್ಸಾದಲ್ಲಿ ಖಾಸಗಿ ವ್ಯವಸ್ಥೆ ಯಡಿಯಲ್ಲಿ  2005ರಲ್ಲಿ ನೀರಾ ಘಟಕಕ್ಕೆ ಅನುಮತಿ ದೊರೆತಿದೆ. ತಮಿಳುನಾಡು, ಆಂಧ್ರದಲ್ಲೂ ಖಾಸಗಿ ವ್ಯವಸ್ಥೆ ನಡೆಸುತ್ತದೆ, ಕೇರಳದಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ಘಟಕ ಸ್ಥಾಪಿಸಲಾಗಿದೆ .

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

Gangolli

Puttur: ಗಾಯಾಳು ವಿದ್ಯಾರ್ಥಿನಿ ಸಾವು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.