ಆಳ್ವಾಸ್ ವಿರಾಸತ್-2017 ಸ್ಮರಣೀಯ ಸಮಾಪನ
Team Udayavani, Jan 16, 2017, 4:25 PM IST
ಮೂಡಬಿದಿರೆ: ಮೂರು ದಿನಗಳ ಪರ್ಯಂತ ವಿದ್ಯಾಗಿರಿ ಬಳಿಯ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆದ 23ನೇ ವರ್ಷದ “ಆಳ್ವಾಸ್ ವಿರಾಸತ್-2017′ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಮತ್ತೂಮ್ಮೆ ಹೊಸ ಸಾಧ್ಯತೆಗಳನ್ನು ಶೋಧಿಸಿ, ಅಭಿವ್ಯಕ್ತಿಧಿಗೊಳಿಸುವಲ್ಲಿ ಯಶಸ್ವಿಯಾಯಿತು.
ಹೃದಯವೈಶಾಲ್ಯ ಮೆರೆಯುವ ಮೂಲಕ ವಿಶ್ವ ಮಾನವಧಿರಾಗೋಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟನಾ ಕ್ಷಣಗಳಲ್ಲಿ ನೀಡಿದ ಕರೆ ರಾಷ್ಟ್ರೀಯ ನೆಲೆಯಿಂದ ಅಂತಾರಾಷ್ಟ್ರೀಯ ಮಟ್ಟದ ವರೆಗೆ ಸಾರ್ಥಕವಾಗಿ ಪ್ರತಿಧ್ವನಿಸಿದೆ.
ಕೊಳಲು-ಬಾನ್ಸುರಿ ಜುಗಲ್‌ಬಂದಿಯಿಂದ ಮೊದಧಿಲ್ಗೊಂಡು ಸಿತಾರ್, ಮ್ಯಾಂಡೋಲಿನ್, ಡ್ರಮ್ಸ್, ಕೀಬೋರ್ಡ್, ಬೇಸ್ ಗಿಟಾರ್, ತಬ್ಲಾ ಮೂಲಕ ಪ್ರಸ್ತುತಪಡಿಸಧಿಲಾದ ಟ್ರಿನಿಟಿ-ನಾದಮಾಧುರ್ಯ, ಭುವನೇಶ್ವರ ತಂಡದ ಒಡಿಸ್ಸಿ-ಗೋಟಿಪುವಾ, ರವಿವಾರ ನೆರೆದ ಅರ್ಧ ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ಆನಂದಮಯವಾಗಿ ತೇಲಾಡಿಸಿದ ಹಿಂದೀ ಚಿತ್ರರಂಗದ ಪ್ರಸಿದ್ಧ ಗಾಯಕರಾದ ಶಾನ್ ಮತ್ತು ಪಾಯಲ್ ಅವರ ಸಂಗೀತ ರಸಸಂಜೆ, ಉಡುಪಿಯ ಲತಾಂಗಿ ಸ್ಕೂಲ್ ಆಫ್ ಆರ್ಟ್ಸ್ನ ಗಾರ್ಗಿ, ಅರ್ಚನಾ, ಸಮನ್ವಿ ಅವರ ಗಾನಾರ್ಚನ ಜನಮನವನ್ನು ಸೆಳೆದಿಟ್ಟುಕೊಂಡವು.
ಒಡಿಶಾದ ಗೋಟಿಪುವಾ ನೃತ್ಯನಿರ್ದೇಶನಕ್ಕೆ ಭುವನೇಶ್ವರದ ಚಿತ್ರಸೇನ್ ಸ್ಪೈನ್, ಗುಜರಾತ್‌ನ ಹುಡೋರಾಸ್ ನೃತ್ಯಕ್ಕೆ ಪೃಥ್ವೀ ಶಾಹ, ಕಥಕ್‌ಗೆ ಆಶಿಂ ಬಂಧು ಭಟ್ಟಾಚಾರ್ಯ, ಬೆಂಗಳೂರಿನ ಹರಿ ಮತ್ತು ಚೇತನಾ, ಮಣಿಪುರದ ಧೋಲ್‌ಚಲೋಮ್‌ಗೆ ಸೂಪರ್ ಸಿಂಗ್, ಶ್ರೀಲಂಕನ್ ನೃತ್ಯಗಳಿಗೆ ಕೊಲಂಬೋದ ಜಯಂಪತಿ ಭಂಡಾರ, ಭರತನಾಟ್ಯಕ್ಕೆ ಚೆನ್ನೈಯ ಶೀಲಾ ಉಣ್ಣಿಕೃಷ್ಣನ್, ಮಣಿಪುರದ ಸ್ಟಿಕ್ ಡ್ಯಾನ್ಸ್‌ಗೆ ಪ್ರೀತಂ ಸಿಂಗ್ ಇವರೆಲ್ಲ ಒದಗಿ ಬಂದಿರುವ ಪರಿಣಾಮವಾಗಿ ವಿದ್ಯಾರ್ಥಿಗಳಿಂದ ಇಷ್ಟನ್ನೆಲ್ಲ ಮಾಡಿಸಬಹುದೇ-ಅದೂ 40ರಿಂದ 50 ಸಾವಿರ ಮಂದಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲಂತೆ-160 ಅಡಿ ಉದ್ದ, 60 ಅಡಿ ಅಗಲದ ವೇದಿಕೆಯಲ್ಲಿ? ಎಂಬ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿದೆ. ಉಜ್ಜಯಿನಿಯ ಯೋಗೇಶ್ ಮಾಳವೀಯ, ಬಸವರಾಜ್ ಬಂಡಿವಾಡ್‌ರಂಥವರು ಕಲಿಸಿದ ಮಲ್ಲಕಂಬ ಮತ್ತು ರೋಪ್ ಆಟಗಳನ್ನು ಕರ್ನಾಟಕದಲ್ಲೇ ಆಳ್ವಾಸ್‌ನಂತೆ ಆಡಿ, ಮಾಡಿ ತೋರುವುದು ಸಂಶಯ ಎಂಬ ಭಾವ ಮೂಡಿಸಿವೆ. ಮಂಟಪ ಪ್ರಭಾಕರ ಉಪಾಧ್ಯರು ಮಧುಮಾಸದ ರೂಪಕದ ಮೂಲಕ ಯಕ್ಷಗಾನದಲ್ಲಿ ಸಮೂಹ ಸಾಧ್ಯತೆಗಳನ್ನು ಸ್ಪುಟವಾಗಿ ತೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.