ಕೊನೆಗೂ ಮಕ್ಕಳಿಗೆ ತಾತ್ಕಾಲಿಕ ಕೊಠಡಿ ಭಾಗ್ಯ
Team Udayavani, Dec 16, 2017, 12:45 PM IST
ಉಪ್ಪಿನಂಗಡಿ: ಉಪ್ಪಿನಂಗಡಿ ವ್ಯಾಪ್ತಿಯ ಮಠ ಹಿರ್ತಡ್ಕ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ಕೊರತೆಯಿಂದ ಜಗಲಿಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳಿಗೆ ಕೊನೆಗೂ ತಾತ್ಕಾಲಿಕ ಕೊಠಡಿ ಲಭಿಸಿದೆ.
ಬುಧವಾರ ಉದಯವಾಣಿ ಸುದಿನದಲ್ಲಿ ಈ ಕುರಿತು ವರದಿ ಪ್ರಕಟಗೊಂಡಿತ್ತು. ತತ್ ಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಡಿ.ಎಸ್. ಅವರು, ಶಿಕ್ಷಕರ ಕೊಠಡಿಯಲ್ಲಿ ಮಕ್ಕಳಿಗೆ ತರಗತಿ ನಡೆಸುವಂತೆ ಶಾಲಾ ಮುಖ್ಯಗುರುವಿಗೆ ಸೂಚಿಸಿದ್ದು, ಗುರುವಾರದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ಕಟ್ಟಡ ನಿರ್ಮಾಣ ಆಗುವ ತನಕ ತಾತ್ಕಾಲಿಕ ನೆಲೆಯಲ್ಲಿ ಈ ಪರಿಹಾರ ಕಂಡುಕೊಳ್ಳಲಾಗಿದೆ.
ಒಂದನೇ ತರಗತಿಯಿಂದ ಏಳನೇ ತರಗತಿ ತನಕ ಕ್ಲಾಸ್ ರೂಂ ಹೊಂದಿರುವ ಈ ಶಾಲೆಯಲ್ಲಿ ಒಟ್ಟು 86 ವಿದ್ಯಾರ್ಥಿಗಳು ಇದ್ದಾರೆ. ಕೊಪ್ಪಳ, ಹಿರ್ತಡ್ಕ, ಕೆರೆಮೂಲೆ ಪ್ರದೇಶದಿಂದ ಈ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಬರುತ್ತಾರೆ. ಇಲ್ಲಿ ಏಳು ತರಗತಿಗಳಿವೆ. 1ರಿಂದ 3 ನೇ ತರಗತಿ ತನಕ ಒಂದು ಕೊಠಡಿಯಲ್ಲಿ ನಲಿ-ಕಲಿ ತರಗತಿ ಇದೆ. 4, 5, 6, 7ನೇ ತರಗತಿಗೆ ನಾಲ್ಕು ಕೊಠಡಿ ಇದ್ದರೂ, ಅದರಲ್ಲಿ ಎರಡು ಕೊಠಡಿಗಳು ಹಾಳಾಗಿವೆ. ಪ್ರತಿ ದಿನ ಒಂದು ಕ್ಲಾಸ್ ರೂಂ ವಿದ್ಯಾರ್ಥಿಗಳನ್ನು ಜಗಲಿಯಲ್ಲಿ ಕೂರಿಸಿ ಪಾಠ ಮಾಡುತ್ತಾರೆ. ಹಾಗಾಗಿ ನಾಲ್ಕು ತರಗತಿಯವರು ದಿನದ ಒಂದು ತಾಸು ಹೊರಗೆ ಪಾಠ ಕೇಳಬೇಕಾದ ದುಸ್ಥಿತಿ ಉಂಟಾಗಿತ್ತು.
ಶಾಸಕಿ ಶಕುಂತಳಾ ಟಿ. ಶೆಟ್ಟಿ ತಮ್ಮ ಶಾಸಕರ ನಿಧಿಯಿಂದ 7 ಲಕ್ಷ ರೂ. ಮಂಜೂರುಗೊಳಿಸಿದ್ದು, ಆ ಅನುದಾನದಲ್ಲಿ ಇಲ್ಲಿ ಪ್ರತ್ಯೇಕ ಎರಡು ಹೊಸ ಕಟ್ಟಡ ನಿರ್ಮಿಸುವ ಪ್ರಸ್ತಾಪ ಇದೆ. ಆ ಕಾಮಗಾರಿಗೆ ವೇಗ ನೀಡಿದರೆ ಕೊಠಡಿ ಕೊರತೆಯಿಂದ ಮಕ್ಕಳಿಗೆ ಮುಕ್ತಿ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಕ್ಯಪದವು ಮೈರಾ ಶ್ರೀ ರಾಮಾಂಜನೇಯ ಗೆಳೆಯರ ಬಳಗ: ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Bantwala: ಕಚೇರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಅರಣ್ಯ ಇಲಾಖೆ ಸಿಬ್ಬಂದಿ
Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ
Sri Kukke Subrahmanya Temple: ಇಂದು ಲಕ್ಷದೀಪೋತ್ಸವ, ಬೀದಿ ಉರುಳು ಸೇವೆ ಆರಂಭ
Puttur: ಬಾಲಕಿಗೆ ಕಿರುಕುಳ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.