ಕೊನೆಗೂ ಕದ್ರಿ ಪಾರ್ಕ್‌ಗೆ ಆಗಮಿಸಿದ ಪುಟಾಣಿ ರೈಲು

Team Udayavani, Dec 24, 2017, 12:12 PM IST

24-Dec-10.jpg

ಕದ್ರಿ: ಕದ್ರಿ ಪಾರ್ಕ್‌ನಲ್ಲಿ 8 ವರ್ಷಗಳಿಂದ ಓಡಾಟ ನಿಲ್ಲಿಸಿದ್ದ ‘ಬಾಲ ಮಂಗಳ ಎಕ್ಸ್‌ಪ್ರೆಸ್‌’ ಪುಟಾಣಿ ರೈಲು ಮತ್ತೆ ಓಡಾಡುವ ದಿನಗಳು ಸನಿಹವಾಗುತ್ತಿದೆ. ಶನಿವಾರ ನೂತನ ರೈಲು ಕದ್ರಿ ಪಾರ್ಕ್‌ ತಲುಪಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಪುಟಾಣಿ ರೈಲನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಜೆ. ಆರ್‌. ಲೋಬೊ, ಮೇಯರ್‌ ಕವಿತಾ ಸನಿಲ್‌ ಮೊದಲಾದವರು ಸ್ವಾಗತಿಸಿದರು.

ಬಳಿಕ ಮಾತನಾಡಿದ ಶಾಸಕ ಜೆ. ಆರ್‌. ಲೋಬೋ, “ಎಂಟು ವರ್ಷಗಳಿಂದ ಪುಟಾಣಿ ರೈಲು ಓಡಾಟ ಕದ್ರಿ ಪಾರ್ಕ್‌ನಲ್ಲಿ ಇರಲಿಲ್ಲ. ಇದೀಗ ಹೊಸತಾಗಿ ರೈಲನ್ನು ನಿರ್ಮಿಸಲಾಗಿದೆ. ಈಗಾಗಲೇ ಎಂಜಿನ್‌ ಮತ್ತು ಬೋಗಿಗಳು ಆಗಮಿಸಿದ್ದು, ಹಳಿಗಳು ಕೂಡಾ ತಯಾರಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈಲನ್ನು ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ಹೇಳಿದರು.

1.35 ಕೋಟಿ ರೂ. ವೆಚ್ಚ ಕಲರ್‌ಫುಲ್‌ ರೈಲು
ರೈಲ್ವೇ ಇಲಾಖೆ ಅಡಿಯಲ್ಲಿ ಈ ರೈಲು ನಿರ್ಮಾಣಗೊಂಡಿದೆ. ಒಟ್ಟು 1.35 ಕೋಟಿ ರೂ. ವೆಚ್ಚದಲ್ಲಿ ರೈಲು ತಯಾರಾಗಿದೆ. ಮೂರು ಬೋಗಿಗಳಿದ್ದು, ನೋಡಲು ಆಕರ್ಷಕವಾಗಿದೆ. ಬೋಗಿಗಳು ತಿಳಿ ನೀಲಿ ಬಣ್ಣ ಹೊಂದಿದ್ದರೆ, ಮುಂಭಾಗ ಕೇಸರಿ ಮತ್ತು ತಿಳಿ ಪಿಂಕ್‌ ಬಣ್ಣದಿಂದ ಕೂಡಿದೆ. ನೂತನ ರೈಲು ನಿರ್ಮಾಣ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನದ ಮುಖಾಂತರ ಅನುದಾನ ಒದಗಿಸಲಾಗಿತ್ತು. ಹಳೆ ರೈಲಿನಲ್ಲಿ ಕೇವಲ ಎರಡು ಬೋಗಿಗಳಿದ್ದುವು. ಹೊಸದಾಗಿ ಬಂದಿರುವ ರೈಲಿನಲ್ಲಿ ಮೂರು ಬೋಗಿಗಳಿರುವುದು ಗಮನಾರ್ಹ.

ಮೂರು ಬೋಗಿಗಳ ರೈಲು
ಕದ್ರಿ ಪಾರ್ಕ್‌ನಲ್ಲಿ 1983ರಲ್ಲಿ ಆರಂಭಿಸಿದ್ದ ಪುಟಾಣಿ ರೈಲಿನ ಓಡಾಟ 2013ರವರೆಗೆ ನಿರಾತಂಕವಾಗಿ ಸಾಗಿತ್ತು. ಆದರೆ ಈ ರೈಲು ಹಿಂದೆ ಬೆಂಗಳೂರಿನ ಕಬ್ಬನ್‌ ಪಾರ್ಕ್‌ ನಲ್ಲಿ ಓಡಾಟ ನಡೆಸುತ್ತಿದ್ದು, ಅದನ್ನು ಮಂಗಳೂರಿನ ಕದ್ರಿ ಪಾರ್ಕ್‌ಗೆ ತರಲಾಗಿತ್ತು. ಹಿಂದಿನ ರೈಲು 1975 ರಲ್ಲಿ ನಿರ್ಮಾಣಗೊಂಡಿತ್ತು, ಹಳೆಯ ರೈಲಾದ್ದರಿಂದ ಸಂಪೂರ್ಣ ಹಾಳಾಗಿದ್ದ ಹಿನ್ನೆಲೆಯಲ್ಲಿ 2013ರಲ್ಲಿ ತನ್ನ ಓಡಾಟವನ್ನು ಸಂಪೂರ್ಣ ನಿಲ್ಲಿಸಿತ್ತು. ಮಕ್ಕಳಿಗೆ ಮನೋರಂಜನೆಯ
ಭಾಗವಾಗಿದ್ದ ಈ ರೈಲು ತನ್ನ ಓಡಾಟವನ್ನು ನಿಲ್ಲಿಸಿದ್ದರಿಂದ ಸಹಜವಾಗಿಯೇ ಮಕ್ಕಳು ರೈಲಿನಲ್ಲಿ ಕುಳಿತು ಪ್ರಯಾಣಿಸುವ ಖುಷಿಯನ್ನು ಕಳೆದುಕೊಂಡಿದ್ದರು. ಆದರೆ ಸದ್ಯದಲ್ಲೇ ಮತ್ತೆ ರೈಲು ಓಡಾಟ ಪುನಾರಂಭವಾಗಲಿದ್ದು, ಮಕ್ಕಳಿಗೆ ಖುಷಿ ತಂದಿದೆ.

ಟಾಪ್ ನ್ಯೂಸ್

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ

ಕಂಬಳಕ್ಕೆ ನೆರವು: ಇಂದು ಸಿಎಂಗೆ ಅಹವಾಲು

Mangaluru ಕಂಬಳಕ್ಕೆ ನೆರವು: ಇಂದು ಸಿಎಂಗೆ ಅಹವಾಲು

ವಿಶಿಷ್ಟ ವಿಚಾರ ಚಿಂತನ ಮಂಥನ : ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

ವಿಶಿಷ್ಟ ವಿಚಾರ ಚಿಂತನ ಮಂಥನ: ಮಂಗಳೂರು ಲಿಟ್‌ಫೆಸ್ಟ್‌ ಇಂದಿನಿಂದ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

Mudhol: ಪ್ರತ್ಯೇಕ ಅಪಘಾತ ಇಬ್ಬರು ಮೃತ್ಯು..

Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.