ಗಲ್ಫ್ ದೇಶದಿಂದ ಹಣಕಾಸಿನ ನೆರವು; ಅರಾಫ‌ತ್‌ ಅಲಿ ನಿರ್ದೇಶನ

ವರದಿ ಪಡೆದ ಕೇಂದ್ರ ಗೃಹ ಸಚಿವಾಲಯ

Team Udayavani, Nov 23, 2022, 7:05 AM IST

ಗಲ್ಫ್ ದೇಶದಿಂದ ಹಣಕಾಸಿನ ನೆರವು; ಅರಾಫ‌ತ್‌ ಅಲಿ ನಿರ್ದೇಶನ

ಸಾಂದರ್ಭಿಕ ಚಿತ್ರ...

ಮಂಗಳೂರು/ಬೆಂಗಳೂರು: ರಾಜ್ಯ ಕರಾವಳಿ ಸೇರಿದಂತೆ ದೇಶದ ವಿವಿಧೆಡೆ ಭಯೋತ್ಪಾದನ ಕೃತ್ಯಗಳನ್ನು ನಡೆಸುವ ಸಂಬಂಧ ಗಲ್ಫ್ ದೇಶಗಳಿಂದ ಶಾರೀಕ್‌ ಮತ್ತು ಆತನ ಸಹಚರರರಿಗೆ ಹಣಕಾಸಿನ ನೆರವು ಸಿಗುತ್ತಿತ್ತು ಎಂಬ ಆತಂಕಕಾರಿ ಮಾಹಿತಿ ಸಿಕ್ಕಿದೆ.

ಗಲ್ಫ್ ನಲ್ಲಿ ತಲೆಮರೆಸಿರುವ ಅರಾಫ‌ತ್‌ ಅಲಿ ಎಂಬಾತನ ನಿರ್ದೇಶನದ ಮೇರೆಗೆ ಶಾರೀಕ್‌ ಮತ್ತು ಆತನ ಸಹ ಚರರು ಕೆಲಸ ಮಾಡುತ್ತಿದ್ದರು. ಇವರಿಗೆ ಆತನೇ ಹಣ ಕಾಸು ನೆರವು ನೀಡುತ್ತಿದ್ದ. ಈತ ಐಎಸ್‌ ಪ್ರೇರಿತ ಅಲ್‌ ಹಿಂದ್‌ನ ಅಬ್ದುಲ್‌ ಮತೀನ್‌ ತಾಹಾ ಜತೆಗೂ ನಿಕಟ ಸಂಪರ್ಕದಲ್ಲಿ ದ್ದಾನೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಕೃತ್ಯ ಎಸಗುವ ವೇಳೆ ಆರೋಪಿ ಗಡ್ಡ ಶೇವ್‌ ಮಾಡಿದ್ದ. ಶಾರೀಕ್‌ ಓಡಾಡಿದ್ದ ಜಾಗ, ವಸ್ತುಗಳನ್ನು ಖರೀದಿ ಮಾಡಿದ್ದ ಅಂಗಡಿಗಳನ್ನು 3 ಪ್ರತ್ಯೇಕ ತನಿಖಾ ತಂಡಗಳು ಪರಿಶೀಲಿಸಿವೆ. ಶಾರೀಕ್‌ ಓಡಾಡಿದ ಆಟೋ, ಓಲಾ ಕ್ಯಾಬ್‌ ಚಾಲಕರನ್ನ ವಿಚಾರಣೆಗೆ ಒಳಪಡಿಸಲಾಗಿದೆ.

ಐಬಿಯಿಂದ ತನಿಖೆ
ಕುಕ್ಕರ್‌ ಬಾಂಬ್‌ ಸ್ಫೋಟ ಸಂಬಂಧ ಕೇಂದ್ರದ ಇಂಟೆಲಿಜೆನ್ಸ್‌ ಬ್ಯೂರೋ (ಐಬಿ) ಅಧಿಕಾರಿಗಳು ಗೌಪ್ಯವಾಗಿ ತನಿಖೆಗಿಳಿದಿದ್ದು, ಆರೋಪಿ ಶಾರೀಕ್‌ ಸಂಪರ್ಕದಲ್ಲಿರುವ ಒಬ್ಬೊಬ್ಬರನ್ನೇ ಗುರುತಿಸಿ ಕೂಲಂಕಷವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಶಾರೀಕ್‌ನ ಮೊಬೈಲ್‌ನಲ್ಲಿ ಬಳಸಿರುವ ಸಿಮ್‌ ಕಾರ್ಡ್‌ ಬಳ್ಳಾರಿ ಜಿಲ್ಲೆಯ ಸಂಡೂರಿನ ಅರುಣ್‌ ಕುಮಾರ್‌ ಗೌಳಿ ಎಂಬುವವರ ಹೆಸರಿನಲ್ಲಿರುವುದು ಪತ್ತೆಯಾದ ಬೆನ್ನಲ್ಲೇ ಅರುಣ್‌ ಕುಮಾರ್‌ನನ್ನು ಐಬಿ ಅಧಿಕಾರಿಗಳು ಕೂಲಂಕಷವಾಗಿ ವಿಚಾರಣೆ ನಡೆಸಿದ್ದಾರೆ. ಐಡಿ ಕಾರ್ಡ್‌ ಇದ್ದ ತನ್ನ ಪರ್ಸ್‌ 2019ರಲ್ಲಿ ಬೆಂಗಳೂರಿನಲ್ಲಿ ಕಳೆದು ಹೋಗಿತ್ತು. ಎರಡು ದಿನಗಳ ಬಳಿಕ ವ್ಯಕ್ತಿಯೊಬ್ಬ ಪರ್ಸ್‌ ಹಿಂದಿರುಗಿಸಿದ್ದಾಗಿ ಐಬಿ ಅಧಿಕಾರಿಗಳ ಮುಂದೆ ಅರುಣ್‌ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಗಳು ಆತನ ಸಿಮ್‌ ಕಾರ್ಡ್‌ ಪಡೆದ ಅನಂತರ ಅದನ್ನು ತಮ್ಮ ಹಾಗೂ ತಮ್ಮ ತಂಡದ ಇತರ ಸದಸ್ಯರ ಜತೆಗೆ ಮಾತುಕತೆ ನಡೆಸಲು ಬಳಸುತ್ತಿದ್ದರು. ಪ್ರಕರಣದಲ್ಲಿ ಅರುಣ್‌ ಪಾತ್ರ ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎನ್ನಲಾಗಿದೆ.

ಕಾಯುತ್ತಿವೆ 7 ತನಿಖಾ ತಂಡ!
ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ವಿಶೇಷವೆಂದರೆ ಈತನ ಚೇತರಿಕೆಗಾಗಿ ಏಳು ತನಿಖಾ ತಂಡಗಳು ಕಾಯುತ್ತಿವೆ. ಕೇಂದ್ರ ಗೃಹ ಸಚಿವಾಲಯವೂ ಸೋಮ ವಾರ ಶಾರೀಕ್‌ ಕುರಿತು ವರದಿ ಪಡೆದಿದೆ. ಮತ್ತೂಂದೆಡೆ ಎನ್‌ಐಎ ತಂಡವು ಶಾರೀಕ್‌ ಸಂಪರ್ಕದಲ್ಲಿದ್ದ ಶಂಕಿತ ಉಗ್ರರಿಗೆ ಶೋಧ ಮುಂದು ವರಿಸಿದ್ದು, ಕೆಲವು ಮಹತ್ವದ ದಾಖಲೆಗಳು ಸಿಕ್ಕಿವೆ. ಪಿತೂರಿಗಾರನ ಬಗ್ಗೆಯೂ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ಮಂಗಳೂರು, ಮೈಸೂರು, ಶಿವಮೊಗ್ಗ, ತಮಿಳು ನಾಡಿನ ಕೊಯಮತ್ತೂರು, ಕೇರಳಕ್ಕೆ ತೆರಳಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವಲ್ಲಿ ತೊಡಗಿದ್ದಾರೆ.

ವಾಟ್ಸ್‌ಆ್ಯಪ್‌ ನಲ್ಲಿ ಆದಿಯೋಗಿ
ಶಾರೀಕ್‌ ವ್ಯಾಟ್ಸ್‌ಆ್ಯಪ್‌ ಡಿಪಿಯಲ್ಲಿ ಆದಿಯೋಗಿ ಚಿತ್ರ ಹಾಕಿದ್ದ. ಮೈಸೂರಿನಲ್ಲಿ ಮೊಬೈಲ್‌ ತರಬೇತಿಗೆ ಹೋದಾಗಲೂ ಪ್ರೇಮ್‌ರಾಜ್‌ ಎಂದಿದ್ದ. ಮಂಗಳೂರಿಗೆ ಬಂದಾಗಲೂ ಆತ ಕೇಸರಿ ಶಾಲು ಹೊಂದಿದ್ದ. ಈ ಮೂಲಕ ದಾರಿ ತಪ್ಪಿಸುವ ಮತ್ತು ಸ್ಫೋಟ ವೇಳೆ ಸಾವಿಗೀಡಾದರೂ ಹಿಂದೂ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸಿದ್ದ ಎಂದು ಮೂಲಗಳು ತಿಳಿಸಿವೆ.

ಇಂದು ಗೃಹ ಸಚಿವರು,
ಡಿಜಿಪಿ ಮಂಗಳೂರಿಗೆ
ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಡಿಜಿಪಿ ಪ್ರವೀಣ್‌ ಸೂದ್‌ ಬುಧವಾರ ಮಂಗಳೂರಿಗೆ ಆಗಮಿಸಲಿದ್ದಾರೆ. ಗೃಹಸಚಿವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಸ್ಪತ್ರೆ, ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಟಾಪ್ ನ್ಯೂಸ್

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.