ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಬಹುದೊಡ್ಡ ಸವಾಲು


Team Udayavani, Mar 12, 2020, 5:35 AM IST

MLR-Muncipalty

ನಗರದಲ್ಲಿ ತೆರಿಗೆ ಪಾವತಿಸುತ್ತಿರುವುದು.

ಯಾವುದೇ ಸ್ಥಳೀಯ ಸಂಸ್ಥೆ ಅಭಿವೃದ್ಧಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಣಕಾಸಿನ ವ್ಯವಸ್ಥೆ ಅಗತ್ಯ. ಜನರು ನೀಡಬೇಕಿರುವ ತೆರಿಗೆಗಳನ್ನು ನೀಡಿದರಷ್ಟೇ ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಅದೇ ರೀತಿ ತೆರಿಗೆ ವಸೂಲಿಗೆ ಆಡಳಿತ ಕೂಡ ಕ್ರಮ ಕೈಗೊಳ್ಳುವುದು ಅಗತ್ಯ. ಎಲ್ಲರೂ ಸಕಾಲದಲ್ಲಿ ತೆರಿಗೆ ಪಾವತಿಸಿದಲ್ಲಿ ಅಭಿವೃದ್ಧಿಯ ದಾಪುಗಾಲು ಇಡುವುದು ಸುಲಭ.

ಮಹಾನಗರ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡು ಉತ್ತಮ ಆಡಳಿತ ನೀಡಲು ಆರ್ಥಿಕ ಸಂಪನ್ಮೂಲ ಅವಶ್ಯ. ಇದೇ ಹೊಸ ಆಡಳಿತಕ್ಕೆ ಇರುವ ಪ್ರಮುಖ ಸವಾಲು. ಆಸ್ತಿ ತೆರಿಗೆ, ಜಾಹೀರಾತು ತೆರಿಗೆ, ವಾಣಿಜ್ಯ ಕಟ್ಟಡಗಳ ಬಾಡಿಗೆ, ಪಾರ್ಕಿಂಗ್‌ ಶುಲ್ಕ, ನೀರಿನ ಶುಲ್ಕ- ಇವುಗಳು ಪಾಲಿ ಕೆಯ ಪ್ರಮುಖ ಆದಾಯ ಮೂಲ ಗಳು. ಇವುಗಳಿಂದ ಬರಬೇಕಾದ ಶುಲ್ಕ ಸಮರ್ಪಕವಾಗಿ ವಸೂಲಾದರೆ ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ಕೊರತೆಯಾಗು ವುದಿಲ್ಲ. ವಾಸ್ತವದಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈಗ ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ.

ಕಂದಾಯ ತೆರಿಗೆಯನ್ನೇ ತೆಗೆದು ಕೊಳ್ಳೋಣ. ಈ ವರ್ಷ ಸಂಗ್ರಹದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡುಬಂದಿದೆ. ಆಸ್ತಿ ತೆರಿಗೆ ಸಹಿತ ವಿವಿಧ ಮೂಲಗಳಿಂದ ವಾರ್ಷಿಕ ಒಟ್ಟು 97.52 ಕೋ.ರೂ. ಆದಾಯ ಬರಬೇಕಿತ್ತು. ಆದರೆ ಜನವರಿ ವೇಳೆಗೆ 42.18 ಕೋ.ರೂ. ಮಾತ್ರ ವಸೂಲಾಗಿದೆ. ಅಂದರೆ, ಶೇ.43.83ರಷ್ಟು ಕಂದಾಯ ವಸೂಲಾತಿಯಾಗಿದೆ. ಪ್ರಮುಖ ಆದಾ ಯಕ್ಕೇ ಹೊಡೆತ ಬಿದ್ದಿರುವುದು ಗಮನಿ ಸಿದರೆ, ಮುಂದಿನ ಆರ್ಥಿಕ ವರ್ಷದಲ್ಲಿ ಸಂಪನ್ಮೂಲಗಳ ಕ್ರೋಡೀ ಕರಣವೇ ದೊಡ್ಡ ಸವಾಲು. ಅದರಲ್ಲೂ ಆದ್ಯತಾ ವಲಯಗಳಿಗೆ ಹಣಕಾಸು ಹೊಂದಿ ಸು ವುದು ಹಾಗೂ ದೈನಂದಿನ ಖರ್ಚು- ವೆಚ್ಚಗಳನ್ನು ನಿಭಾಯಿ ಸುವುದು ಆಡಳಿತ ನಡೆಸುವವರಿಗೆ ಸವಾಲಾಗಿ ಪರಿಣಮಿಸುವ ಸಂಭವವೇ ಹೆಚ್ಚು.

ಕಳೆದ ವರ್ಷ ಆಸ್ತಿ ತೆರಿಗೆ ಕೇವಲ ಶೇ.41.12ರಷ್ಟು ಮಾತ್ರ ಸಂಗ್ರಹವಾಗಿತ್ತು. ಹಾಗಾಗಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ನೋಟಿಸ್‌ ಜಾರಿ ಮಾಡಿತ್ತು. ಇದರ ಫಲವೆಂಬಂತೆ ಫೆಬ್ರವರಿ ತಿಂಗಳಿನಲ್ಲಿ 11.67 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಈ ವರ್ಷ ಒಟ್ಟು 87.13 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಪಾಲಿಕೆಯದ್ದು. 2020 ಜನವರಿ ವೇಳೆಗೆ 35.26 ಕೋಟಿ ರೂ. ಸಂಗ್ರಹವಾಗಿದ್ದು, 51.30 ಕೋಟಿ ರೂ. ಬಾಕಿ ಇತ್ತು. ಫೆಬ್ರವರಿ ತಿಂಗಳಲ್ಲಿ 11.67 ಕೋಟಿ ರೂ. ವಸೂಲಾಗಿದ್ದು, ಒಟ್ಟು ಗುರಿಯಲ್ಲಿ 46.93 ಕೋಟಿ ರೂ. ಸಂಗ್ರಹವಾಗಿದೆ. ಮಾರ್ಚ್‌ ತಿಂಗಳ 10 ದಿನ ಕಳೆದಿದ್ದು, ಆರ್ಥಿಕ ವರ್ಷ ಅಂತ್ಯಗೊಳ್ಳಲು 20 ದಿನಗಳಷ್ಟೇ ಇವೆ. ಬಾಕಿ ತೆರಿಗೆ ಇನ್ನಷ್ಟೇ ವಸೂಲಿ ಆಗಬೇಕಿದೆ.

ಆಸ್ತಿ ತೆರಿಗೆ ಕಡಿಮೆ ಏಕೆ?
ಪಾಲಿಕೆ ವ್ಯಾಪ್ತಿಯಲ್ಲಿ 2008-09ರಿಂದ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಸರಕಾರಿ ಹಾಗೂ ಖಾಸಗಿ ಮಾಲಕತ್ವಕ್ಕೆ ಒಳಪಟ್ಟ ಎಲ್ಲ ನಿವೇಶನ ಹಾಗೂ ನಿವೇಶನವನ್ನೊಳಗೊಂಡ ಕಟ್ಟಡಗಳು ಈ ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಆದರೆ ಹಲವಾರು ಆಸ್ತಿಗಳಿಗೆ ಸಂಬಂಧಿಸಿದಂತೆ ಪಾವತಿಗಳಲ್ಲಿ ಬರುತ್ತಿರುವ ವ್ಯತ್ಯಾಸ, ವಿವರ ಪಟ್ಟಿಗಳಲ್ಲಿ ಅಸಮರ್ಪಕ ವಿವರ, ಅವಧಿ ಮೀರಿದ ಪಾವತಿಗಳಿಗೆ ಹಾಕಿದ ದಂಡನೆ ಪಾವತಿಸದಿರುವುದು ಹಾಗೂ ಕಡಿಮೆ ಪಾವತಿ ಮಾಡಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ.

ಸೇವಾ ಶುಲ್ಕ
ಕಟ್ಟಡ ನಂಬರನ್ನು ತಪ್ಪಾಗಿ ನಮೂದಿಸಿರುವುದು, ಹೊಸ ಕಟ್ಟಡಗಳನ್ನು ನಿರ್ಮಿಸಿದ್ದರೂ ಹಳೆ ಕಟ್ಟಡ ನಂಬರನ್ನು ಮುಂದುವರಿಸಿ ಹಳೆ ವಿಸ್ತೀರ್ಣವನ್ನು ಲೆಕ್ಕಾಚಾರ ಮಾಡಿ ಪಾವತಿಸಿರುವ ಹಲವು ಪ್ರಕರಣಗಳು ತನಿ ಖೆಯ ವೇಳೆ ಬೆಳಕಿಗೆ ಬಂದಿವೆ. ಜತೆಗೆ ವಿನಾಯಿತಿ ವ್ಯಾಪ್ತಿಗೆ ಒಳಪಡದ ವಾಣಿಜ್ಯ/ವಾಸ್ತ ವ್ಯೇತರ ಉದ್ದೇಶದ ಕಟ್ಟಡಗಳಿಗೆ ಸೇವಾ ಶುಲ್ಕವನ್ನು ಪಾವತಿಸಿ ರುವುದೂ ಗಮನಕ್ಕೆ ಬಂದಿದೆ.

ಇದು ಪ್ರಸ್ತುತ ಸಾಲಿನ ತೆರಿಗೆ ಪಾವತಿ ಪ್ರಗತಿಯು ಕುಂಠಿತವಾಗಲು ಕಾರಣ. ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಹಾಗೂ ವಾಣಿಜ್ಯ ಮಳಿಗೆ/ಸಂಕೀರ್ಣಗಳಲ್ಲಿ ಮಾಲಕತ್ವ ಪಡೆದವರು, ಬಿಲ್ಡರ್‌ಗಳು ಹಲವು ವರ್ಷಗಳಿಂದ ಆಸ್ತಿ ತೆರಿಗೆಯನ್ನೇ ಪಾವತಿ ಮಾಡಿಲ್ಲ. ಈ ಎಲ್ಲ ಸವಾಲುಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಿದೆ.

ಆಸ್ತಿ ತೆರಿಗೆ ಹೆಚ್ಚಳದ ಸವಾಲು
ಕರ್ನಾಟಕ ಪೌರ ಕಾಯಿದೆ ಪ್ರಕಾರ ಪ್ರತಿ 3 ವರ್ಷಗಳಿಗೊಮ್ಮೆ ನಗರ ಸ್ಥಳೀಯ ಆಡಳಿತ ಸಂಸ್ಥೆ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಬೇಕು. ನಿಯಮದಂತೆ 2017ರಲ್ಲಿ ಶೇ.15ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿತ್ತು. ಇದಾಗಿ ಮೂರು ವರ್ಷಗಳು ಕಳೆದಿವೆ. 2020ರ ಎ.1ರಿಂದ ಅನ್ವಯವಾಗುವಂತೆ ಮತ್ತೆ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕು. ಆದರೆ ನಾಗರಿಕರಿಗೆ ಹೊರೆಯಾಗದಂತೆ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಜನರ ವಿಶ್ವಾಸ ಗಳಿಸುವುದೂ ಒಂದು ಸವಾಲೇ ಸರಿ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ಬಂದ ಬಳಿಕ 2008, 2011, 2014 ಹಾಗೂ 2017 ಸೇರಿ ಒಟ್ಟು ನಾಲ್ಕು ಬಾರಿ ಹೆಚ್ಚಳ ಮಾಡಲಾಗಿತ್ತು.

ಬಾಕಿ ಕಂದಾಯ ವಸೂಲಾತಿಗೆ ವಿಶೇಷ
ಅಭಿಯಾನ ಕೈಗೊಂಡು ಫೆಬ್ರವರಿ ತಿಂಗಳಲ್ಲಿ 11.67 ಕೋಟಿ ರೂ. ಆಸ್ತಿ ತೆರಿಗೆ ವಸೂಲು ಮಾಡಲಾಗಿದೆ. ಇದರೊಂದಿಗೆ ಒಟ್ಟು ಆಸ್ತಿ ತೆರಿಗೆ ಸಂಗ್ರಹ 46,93,34,000 ರೂ. ಗೇರಿದ್ದು ಶೇ. 87.13 ಗುರಿ ವಸೂಲಾಗಿದೆ.

“ಹೊಸ ಮೇಯರ್‌-ಹಲವು ಸವಾಲು’
ಜನರ ನಿರೀಕ್ಷೆಗೆ ಸುದಿನ ವೇದಿಕೆ
“ಹೊಸ ಮೇಯರ್‌-ಹಲವು ಸವಾಲು’ ಎನ್ನುವ ಸರಣಿಯಲ್ಲಿ ನೀವೂ ಭಾಗವಹಿಸಿ. ನಗರದ ಅಭಿವೃದ್ಧಿ ಕುರಿತಂತೆ ಸೂಕ್ತವಾದ ಸಲಹೆಗಳನ್ನು ಸಂಕ್ಷಿಪ್ತವಾಗಿ ಬರೆದು ಹೆಸರು, ಫೋಟೋದೊಂದಿಗೆ ವಾಟ್ಸಾಪ್‌ ಮಾಡಬಹುದು.
9900567000

-  ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

1-moidin

ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್‌ ಬಾವ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.