ಬೆಂಕಿ ಆಕಸ್ಮಿಕ: ಸುಟ್ಟು ಕರಕಲಾದ ಹಡೀಲು ಭೂಮಿ
Team Udayavani, May 16, 2019, 6:00 AM IST
ಗುರುಪುರ: ಬೆಂಕಿ ಆಕಸ್ಮಿಕದಿಂದಾಗಿ ಗುರುಪುರ ದೋಣಿಂಜೆಯ ಹಡೀಲು ಭೂಪ್ರದೇಶ ಹೊತ್ತಿ ಉರಿದು ಮರಗಿಡಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಸೋಮವಾರ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಗಾಳಿಯ ತೀವ್ರತೆ ಕಡಿಮೆ ಇದ್ದ ಕಾರಣ ತಣ್ಣಗಾಗಿತ್ತು. ಆದರೆ ಮಂಗಳವಾರ ರಾತ್ರಿ ಗಾಳಿಯ ಹೆಚ್ಚಾಗಿದ್ದರಿಂದ ಬೆಂಕಿ ಮತ್ತೆ ವಿಸ್ತರಿಸಿ ಮರಗಿಡಗಳನ್ನು ಆಹುತಿ ಪಡೆದಿದೆ.
ತುರ್ತು ಸಂದೇಶ ರವಾನೆ
ವಿಸ್ತಾರವಾದ ಒಣಪ್ರದೇಶ ಸಂಪೂರ್ಣವಾಗಿ ಬೆಂಕಿಯ ಕೆನ್ನಾ ಲಿಗೆಗೆ ಸಿಲುಕಿ ಉರಿದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿ ಸಿತ್ತು. ಪರಿಸರದೆಲ್ಲೆಡೆ ಹೊಗೆ ವ್ಯಾಪಿಸಿದ್ದು, ಅಗ್ನಿಯನ್ನು ನಿಯಂತ್ರಿ ಸಲು ಕಠಿಣವಾಗಿರುವುದರಿಂದ ಮಂಗಳೂರು ಅಗ್ನಿ ಶಾಮಕ ದಳಕ್ಕೆ ತುರ್ತು ಸಂದೇಶ ರವಾನಿಸಲಾಯಿತು.
ಬೆಂಕಿನಿಯಂತ್ರಣ ವಾಹನ ಸ್ಥಳಕ್ಕೆ ಆಗಮಿಸಿ, ಅದರ ಟ್ಯಾಂಕರ್ ಸಿಬಂದಿ ನೀರು ಹಾಯಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಸುಮಾರು ಒಂದುವರೆ ಗಂಟೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆ ಸಲಾಯಿತು.
ಕಿಡಿಗೇಡಿಗಳ ಕೃತ್ಯ ಶಂಖೆ
ಕೃತ್ಯದ ಹಿಂದೆ ಕಿಡಿಗೇಡಿಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತ ವಾಗಿದೆ.ಹತ್ತಿರದಲ್ಲಿ ಬೆಳೆಸಲಾದ ತರಕಾರಿ ತೋಟಕ್ಕೆ ನವಿಲುಗಳ ಕಾಟ ತಪ್ಪಿಸಲು,ದೂರದ ಹಡೀಲು ಭೂಮಿಯಲ್ಲಿ ಬೆಳೆದಿರುವ ಭಾರೀ ಗಿಡಗಂಟಿ,ಒಣ ಹುಲ್ಲಿಗೆ ಬೆಂಕಿ ಹಚ್ಚಿರಬೇಕೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.