ವಿಟ್ಲ, ಕನ್ಯಾನದಲ್ಲಿ ಮನೆಗಳಿಗೆ ಬೆಂಕಿ
Team Udayavani, Apr 10, 2018, 6:00 AM IST
ವಿಟ್ಲ: ವಿದ್ಯುತ್ ಅವಘಡದಿಂದ ಮನೆಯೊಂದು ಸಂಪೂರ್ಣ ವಾಗಿ ಸುಟ್ಟು ಕರಕಲಾಗಿ ಸುಮಾರು 20 ಲ.ರೂ. ನಷ್ಟ ಸಂಭವಿಸಿದ ಘಟನೆ ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಲ್ಲಿ ರವಿವಾರ ತಡರಾತ್ರಿ ಸಂಭವಿಸಿದೆ.
ಕಟ್ಟತ್ತಿಲ ಗೌರಿಕೋಡಿ ನಿವಾಸಿ ಸುನಂದಾ ಅವರ ಹಂಚಿನ ಮನೆಯಲ್ಲಿ ದುರುಂತ ಸಂಭವಿಸಿದೆ. ಮನೆಯಲ್ಲಿ ನಾಲ್ವರು ವಾಸಿಸುತ್ತಿದ್ದು, ಅವರು ರವಿವಾರ ಸಂಬಂಧಿಕರ ಮನೆಗೆ ತೆರಳಿದ್ದರು. ರವಿವಾರ ಸಂಜೆಯಿಂದಲೇ ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿತ್ತು. ಇದರ ಪರಿಣಾಮವಾಗಿ ಮನೆಯ ಸ್ವಿಚ್ ಬೋರ್ಡ್‌ನಲ್ಲಿ ಶಾರ್ಟ್‌ಸರ್ಕ್ನೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ಟಿ.ವಿ., ಹೋಂ ಥಿಯೇಟರ್, ಫ್ಯಾನ್, ಡಿವಿಡಿ ಮೊದಲಾದ ವಿದ್ಯುತ್ ಉಪಕರಣಗಳು ಸುಟ್ಟು ಛಿದ್ರಗೊಂಡಿವೆ. ಮನೆಯ ಆರು ಕೋಣೆಗಳಲ್ಲಿ ಇದ್ದಂತಹ ಮನೆಯ ದಾಖಲೆ ಪತ್ರಗಳು, ಮೂರು ಕಪಾಟುಗಳು, ವಿವಿಧ ಫರ್ನಿಚರ್‌ಗಳು, ಬಟ್ಟೆಬರೆಗಳು, ಪಾತ್ರೆ ಸಾಮಗ್ರಿಗಳು, ಮನೆಯವರ ಇನ್ನಿತರ ದಾಖಲೆ ಪತ್ರಗಳು, 62 ಸಾ. ರೂ. ನಗದು ಬೂದಿಯಾಗಿದೆ. ಹೊಸ ಮನೆಯ ಕಾಮಗಾರಿಗಾಗಿ ತಂದಿರಿಸಿದ್ದ 4 ಲಕ್ಷ ರೂ. ಮೌಲ್ಯದ ಮರಮಟ್ಟುಗಳು, ಅಡಿಕೆಗಳು ಕೂಡ ಸುಟ್ಟು ಕರಕಲಾಗಿವೆ.
ಬೆಂಕಿಯ ತೀವ್ರತೆಗೆ ಮನೆಯ ಛಾವಣಿ ಕುಸಿದು ಬಿದ್ದಿದೆ. ರಾತ್ರಿ 11.45ರ ವೇಳೆಗೆ ಸ್ಥಳೀಯ ಮಹಿಳೆ ಯೊಬ್ಬರು ಘಟನೆ ಬಗ್ಗೆ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅವರು ಬೆಂಕಿ ನಂದಿಸಲು ಪ್ರಯತ್ನಿ ಸಿದ್ದರೂ ಸಾಧ್ಯವಾಗಿಲ್ಲ. ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಕಾರ್ಯಾ ಚರಣೆ ನಡೆಸಿದ್ದಾರೆ. ಇಡೀ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.
ಘಟನಾ ಸ್ಥಳಕ್ಕೆ ಸಾಲೆತ್ತೂರು ಗ್ರಾಮ ಪಂಚಾಯತ್ ಸದಸ್ಯ ದೇವಿಪ್ರಸಾದ್ ಶೆಟ್ಟಿ ಪಾಲ್ತಾಜೆ, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್, ಸಾಲೆತ್ತೂರು ಮೆಸ್ಕಾಂ ಶಾಖಾಧಿಕಾರಿ ಸತೀಶ್, ಗ್ರಾಮ ಕರಣಿಕ ಅನಿಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಸ್ಮಾಯಿಲ್ ಮೊದಲಾದವರು ಭೇಟಿ ನೀಡಿದ್ದಾರೆ.
ಕನ್ಯಾನದಲ್ಲೂ ಮನೆಗೆ ಬೆಂಕಿ
ಕನ್ಯಾನದ ಕೇಪುಳಗುಡ್ಡೆಯಲ್ಲಿರುವ ಆಮೀನ ಅಬ್ದುಲ್ಲ ಬ್ಯಾರಿಗೆ ಸೇರಿದ ಹಂಚಿನ ಮನೆಯಲ್ಲಿಯೂ ರವಿವಾರ ರಾತ್ರಿ ದುರಂತ ಸಂಭವಿಸಿ ಮನೆ ಭಾಗಶಃ ಸುಟ್ಟು ಹೋಗಿದ್ದು, ಸುಮಾರು 8 ಲ.ರೂ.ಗಿಂತಲೂ ಅಧಿಕ ನಷ್ಟ ಸಂಭವಿಸಿದೆ. ಮನೆ ಮಂದಿ ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯಲ್ಲಿ ಮಲಗಿದ್ದರು. ರಾತ್ರಿ 12 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ 50 ಸಾ. ರೂ. ನಗದು, ವಿದ್ಯುತ್ ಉಪಕರಣಗಳು, ಬಟ್ಟೆಬರೆಗಳು, ಫರ್ನಿಚರ್, ಮೊದಲಾದ ಸೊತ್ತುಗಳು ಸುಟ್ಟು ಕರಕಲಾಗಿವೆ. ಘಟನೆ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಬೆಂಕಿ ನಂದಿಸಲು ಶ್ರಮಿಸಿದರೂ ಸಾಧ್ಯವಾಗಿಲ್ಲ. ವಿದ್ಯುತ್ ಕಾರಣದಿಂದ ಘಟನೆ ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ಸ್ಥಳಕ್ಕೆ ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್, ಗ್ರಾಮಕರಣಿಕ ಪ್ರಶಾಂತ್ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.