ಕಟ್ಟಡಕ್ಕೆ ಬೆಂಕಿ: ಸಿಲುಕಿಕೊಂಡವರ ರಕ್ಷಣೆ
ಅಗ್ನಿಶಾಮಕ ಸೇವಾ ಸಪ್ತಾಹ: ಅಣುಕು ಕಾರ್ಯಾಚರಣೆ
Team Udayavani, Apr 20, 2019, 6:38 AM IST
ಖಾಸಗಿ ಹೊಟೇಲ್ ಒಂದರ ಆವರಣದಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಅಣುಕು ಕಾರ್ಯಾಚರಣೆ ಜರಗಿತು.
ಮಹಾನಗರ: ಇಲ್ಲಿನ ಖಾಸಗಿ ಹೊಟೇಲ್ ಒಂದರಲ್ಲಿ ಬೆಳಗ್ಗೆ 11ಗಂಟೆ ವೇಳೆಗೆ ಇದ್ದಕ್ಕಿದ್ದಂತೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ಆದಾಗಲೇ ಸೈರನ್ ಮೊಳಗಿತು. ಹೊಟೇಲ್‌ನಲ್ಲಿ ಇದ್ದ ಸಿಬಂದಿ ಗ್ರಾಹಕರು ಹೊರ ಓಡಿ ಬಂದರು. ಕ್ಷಣಾರ್ಧದಲ್ಲಿ ಅಗ್ನಿಶಾಮಕ ದಳ, ಎನ್‌ಡಿಆರ್‌ಎಸ್ ಸಿಬಂದಿ, ಸ್ವಯಂ ಸೇವಕರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿದರು.
ಇದು ಕರ್ನಾಟಕ ರಾಜ್ಯ ಅಗ್ನಿಶಾಮಕ ಸೇವಾ ಇಲಾಖೆಯು 2019ನೇ ಸಾಲಿನ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ನಗರದ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಶುಕ್ರವಾರ ನಡೆಸಿದ ಅಣುಕು ಕಾರ್ಯಾಚರಣೆಯ ಚಿತ್ರಣ.
ಕಟ್ಟಡ ಕುಸಿತ, ಕಟ್ಟಡಗಳಲ್ಲಿ ಉಂಟಾ ಗಬಹುದಾದ ಅವಘಡ ಸಂದರ್ಭ ಕೈಗೊಳ್ಳಬಹುದಾದ ಸುರಕ್ಷಿತ ಕ್ರಮ, ಯಾವ ರೀತಿ ಕಾರ್ಯಾಚರಣೆ ನಡೆಯುತ್ತವೆ ಎಂಬುದನ್ನು ಜನ ಸಾಮಾನ್ಯರಿಗೆ ತಿಳಿಸಲಾಯಿತು.
ಇಂತಹ ಸಮಯದಲ್ಲಿ ಜನರು ಯಾವ ರೀತಿ ರಕ್ಷಣಾ ಕಾರ್ಯದಲ್ಲಿ ತೊಡಗಬಹುದು, ಅವಘಡದ ಸಂದರ್ಭ ಮೊದಲು ಏನು ಮಾಡಬೇಕು ಎಂಬುದರ ಕುರಿತು ಅರಿವು ಮೂಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.