ತೆಂಕ ಮಿಜಾರು ಗ್ರಾ.ಪಂ.ಗೆ ಪ್ರಥಮ ಸ್ಥಾನ
Team Udayavani, Jan 15, 2019, 4:43 AM IST
ಬಜಪೆ : ಗ್ರಾಮ ಪಂಚಾ ಯತ್‌ಗಳ ಆದಾಯ ಮೂಲವಾಗಿ ರುವ ಕಟ್ಟಡ ತೆರಿಗೆ ವಸೂಲಾತಿ ಯಲ್ಲಿ ಮಂಗಳೂರು ತಾಲೂಕಿನ ಹೆಚ್ಚಿನ ಗ್ರಾ. ಪಂ.ಗಳು ಹಿಂದೆ ಉಳಿದಿವೆ. ಪಂಚತಂತ್ರ ಅಂಕಿ ಅಂಶಗಳ ಪ್ರಕಾರ ತಾಲೂಕಿನ 55 ಗ್ರಾ.ಪಂ.ಗಳಲ್ಲಿ ಕೇವಲ 5 ಗ್ರಾ. ಪಂ.ಗಳು ಮಾತ್ರ ಶೇ.50ರ ಮೇಲೆ 2018-19ನೇ ಸಾಲಿನ ತೆರಿಗೆ ವಸೂಲಾತಿ ಮಾಡಿವೆ.
ಗರಿಷ್ಟ ತೆರಿಗೆ ವಸೂಲು ಮಾಡಿದ ಪಂಚಾಯತ್‌ಗಳು
ಗ್ರಾ. ಪಂ.ಗಳು ಪಂಚತಂತ್ರ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿದ ಪ್ರಕಾರ ತೆಂಕಮಿಜಾರು ಗ್ರಾ. ಪಂ.ಶೇ. 63 ತೆರಿಗೆ ವಸೂಲು ಮಾಡಿದ್ದು, ಮಂಗಳೂರು ತಾ. ಪಂ.ನಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಳೆದ ಬಾರಿಯೂ ಈ ಪಂಚಾಯತ್ ಶೇ.95ರಷ್ಟು ತೆರಿಗೆ ವಸೂಲಾತಿ ಮಾಡಿದೆ. ಆ ಬಳಿಕದ ಸ್ಥಾನ ಅಡ್ಯಾರು (ಶೇ.58), ಬೆಳ್ಮ (ಶೇ.57), ಕಲ್ಲಮುಂಡ್ಕೂರು (ಶೇ.51), ಮಲ್ಲರೂ(ಶೇ.50) ತೆರಿಗೆ ವಸೂಲಾತಿ ಮಾಡಿವೆ.
ಕನಿಷ್ಟ ತೆರಿಗೆ ವಸೂಲು ಮಾಡಿದ ಪಂಚಾಯತ್‌ಗಳು
ಕನಿಷ್ಠ ತೆರಿಗೆ ವಸೂಲಾತಿ ಮಾಡಿದ ಗ್ರಾ.ಪಂ.ಗಳಲ್ಲಿ ಬಳ್ಕುಂಜೆ (ಶೇ.0), ಬಾಳ (ಶೇ.0), ಹರೇಕಳ(ಶೇ.0), ಮುಚ್ಚಾರು (ಶೇ.3), ಶಿರ್ತಾಡಿ(ಶೇ.4) ಸೇರಿವೆ.
ತೆರಿಗೆ ವಸೂಲು ಮಾಹಿತಿ ಅಗತ್ಯ
ಪಂಚತಂತ್ರ ತಂತ್ರಾಂಶದಲ್ಲಿ ಗ್ರಾ. ಪಂ.ಗಳು ತೆರಿಗೆ ವಸೂಲಾತಿಯ ಅಂಕಿ ಅಂಶಗಳನ್ನು ಅಪ್‌ಲೋಡ್ ಮಾಡ ಬೇಕು ಎಂದು ಸರಕಾರದ ಆದೇಶ ಇದೆಯಾದರೂ ಕೆಲವು ಗ್ರಾ.ಪಂ.ಗಳು ತಮ್ಮ ಅಂಕಿ-ಅಂಶಗಳನ್ನು ಅಪ್‌ಲೋಡ್ ಮಾಡದಿರುವುದು ಇಲ್ಲಿ ಕಂಡು ಬಂದಿದೆ. ಇದರಿಂದ ಆ ಗ್ರಾ.ಪಂ.ಗಳ ತೆರಿಗೆ ವಸೂಲಾತಿಗಳ ಶೇಕಡಾ ಪ್ರಮಾಣವೂ ಕಡಿಮೆ ತೋರಿಸಲು ಒಂದು ಕಾರಣವಿರಬಹುದು. ಮಾರ್ಚ್ ತಿಂಗಳೊಳಗೆ ತೆರಿಗೆ ವಸೂ ಲಾತಿ ಆಗ ಬೇಕಾಗಿದೆ. ಇದಕ್ಕೆ ಇನ್ನೂ ಸುಮಾರು 75ದಿನಗಳು ಬಾಕಿಯಿವೆ. ಈ ದಿನಗಳಲ್ಲಿ ತೆರಿಗೆ ವಸೂಲಾತಿ ವೇಗ ಪಡೆಯಬೇಕಾಗಿದೆ.
ಅಭಿವೃದ್ಧಿ ಕಾರ್ಯಕ್ಕೆ ಅಗತ್ಯ
ಮೂಲಸೌಕರ್ಯಗಳಾದ ಚರಂಡಿ, ರಸ್ತೆ, ದಾರಿದೀಪ, ಕುಡಿ ಯುವ ನೀರು, ಸ್ವಚ್ಛತೆಗಳನ್ನು ಗ್ರಾ.ಪಂ.ಗಳು ಮಾಡಬೇಕಾದರೆ ಈ ತೆರಿಗೆ ಹಣ ದಿಂದಲೇ ಮಾಡಬೇಕಾಗಿದೆ. ಬೇಸಗೆ ಕಾಲ ಸಮೀಪಿಸುತ್ತಿದ್ದು, ನೀರಿನ ಕೊರತೆ ಕೆಲವೆಡೆ ಕಾಣ ಬಹುದು. ಇಂತಹ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ನೀಡುವ ಸಂದರ್ಭಗಳು ಗ್ರಾ.ಪಂ.ಗೆ ಬರಬಹುವುದು. ಇಲ್ಲಿ ಗ್ರಾ.ಪಂ.ಗಳಿಗೆ ಈ ತೆರಿಗೆ ಹಣವೇ ಮುಖ್ಯವಾಗಿರುತ್ತದೆ.
ಕೆಲವೆಡೆ ವಸೂಲಾತಿಗೆ ತೊಂದರೆ
ಹೆಚ್ಚಿನ ಫ್ಲ್ಯಾಟ್‌ಗಳ ತೆರಿಗೆಗಳು ವಸೂಲಾತಿಗೆ ಕಷ್ಟಕರವಾದುದು. ಫ್ಲ್ಯಾಟ್‌ಗಳನ್ನು ಖರೀದಿಸಿ ಮನೆ ನಂಬ್ರ ಪಡೆದು ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ತೆರಿಗೆ ವಸೂ ಲಾತಿಗೆ ಅವರ ವಿಳಾಸ ಗ್ರಾ.ಪಂ.ಗೆ ಇರುವುದಿಲ್ಲ ಇದರಿಂದ ಅವರ ತೆರಿಗೆ ವಸೂಲಾತಿ ಗ್ರಾ.ಪಂ.ಗೆ ತೊಂದ ರೆಯಾಗುತ್ತದೆ. ಈ ಬಗ್ಗೆ ಗ್ರಾ.ಪಂ. ಫ್ಲಾ ್ಯಟ್‌ಗಳಿಗೆ ಮನೆನಂಬ್ರ ನೀಡುವಾಗ ಮೊದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಗ್ರಾ.ಪಂ.ಗಳಿಗೆ ಆದೇಶ
ಕೆಲವೆಡೆ ತಾಂತ್ರಿಕ ತೊಂದರೆ, ಇನ್ನೂ ಕೆಲವೆಡೆ ತೆರಿಗೆ ಪರಿಷ್ಕರಣೆಯಿಂದಾಗಿ ಪಂಚತಂತ್ರದಲ್ಲಿ ಅಪ್‌ಲೋಡ್ ಮಾಡದೇ ಇರಲು ಒಂದು ಕಾರಣವಾಗಿದೆ. ತೆರಿಗೆ ವಸೂಲಾತಿ ಬಗ್ಗೆ ಗ್ರಾ.ಪಂ.ಗಳಿಗೆ ಆದೇಶ ನೀಡಲಾಗುವುದು. ಗ್ರಾಮ ಪಂಚಾಯತ್‌ಗಳಲ್ಲಿ ಮಾರ್ಚ್ ತಿಂಗಳಲ್ಲಿ ಹೆಚ್ಚಿನ ತೆರಿಗೆ ವಸೂಲಾತಿ ಆಗಲಿದೆ.
– ರಘು ಎ.ಇ.
ಮಂಗಳೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ
•ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.