ಸೆಂಟ್ರಲ್‌ ಮಾರುಕಟ್ಟೆ ಸ್ಥಳಾಂತರಕ್ಕೆ  ಮೊದಲ ವಿಘ್ನ


Team Udayavani, Nov 24, 2018, 10:05 AM IST

24-november-1.gif

ಮಹಾನಗರ: ಸ್ಮಾರ್ಟ್‌ಸಿಟಿ ಮಂಗಳೂರು ಯೋಜನೆಯ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿವೆ ಎಂಬ ಆಕ್ಷೇಪ ವ್ಯಕ್ತವಾಗುತ್ತಿರುವ ಬೆನ್ನಿಗೆ ಪ್ರಸ್ತಾವಿತ ಸ್ಮಾರ್ಟ್‌ ಸೆಂಟ್ರಲ್‌ ಮಾರುಕಟ್ಟೆ ನಿರ್ಮಾಣ ಯೋಜನೆಗೆ ಇದೀಗ ಮೊದಲ ವಿಘ್ನ ಎದುರಾಗಿದೆ. ಫುಟ್‌ಬಾಲ್‌ ಮೈದಾನದ ಪಕ್ಕದ ಖಾಲಿ ಜಾಗದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡುವ ಜಿಲ್ಲಾಡಳಿತದ ಯೋಚನೆಗೆ ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಶನ್‌ ಆಕ್ಷೇಪ ವ್ಯಕ್ತಪಡಿಸಿದೆ.

ಕ್ರೀಡಾಕೂಟಕ್ಕಾಗಿ ನಿಗದಿ ಮಾಡಿರುವ ಜಾಗದಲ್ಲಿ ಕ್ರೀಡೆ ಹೊರತುಪಡಿಸಿ ಇತರ ಚಟುವಟಿಕೆ ನಡೆಸಲು ಕಾನೂನಿನಲ್ಲಿಯೇ ಅವಕಾಶ ಇಲ್ಲ; ಫುಟ್‌ಬಾಲ್‌ ಕ್ರೀಡಾಂಗಣ ಕೆಲವೇ ದಿನಗಳಲ್ಲಿ ಟರ್ಫ್‌ ಸೌಲಭ್ಯದೊಂದಿಗೆ ಅಭಿವೃದ್ಧಿಯಾಗಲಿದ್ದು, ಆ ಸಂದರ್ಭ ಖಾಲಿ ಜಾಗ ಬಳಕೆಗೆ ಉದ್ದೇಶಿಸಲಾಗಿದೆ ಹಾಗೂ ತಾತ್ಕಾಲಿಕ ಮಾರುಕಟ್ಟೆ ಮಾಡಿ ಅಲ್ಲಿಗೆ ಘನ ವಾಹನ ಸಹಿತ ಸ್ವಚ್ಛತೆಗೆ ಆದ್ಯತೆ ನೀಡದೆ ಕ್ರೀಡಾಪಟುಗಳಿಗೂ ಸಮಸ್ಯೆಯಾಗಲಿದೆ ಎಂಬ ಕಾರಣ ನೀಡಿ ಅಸೋಸಿಯೇಶನ್‌ ತಾತ್ಕಾಲಿಕ ಮಾರುಕಟ್ಟೆಗೆ ಆಕ್ಷೇಪ ಸೂಚಿಸಿದೆ.

ಸ್ಪಂದಿಸದಿದ್ದರೆ ಕಾನೂನು ಹೋರಾಟ
ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತ, ಪಾಲಿಕೆ ಸಹಿತ ಪ್ರಮುಖರಿಗೆ ಅಸೋಸಿಯೇಶನ್‌ ಈ ಸಂಬಂಧ ಆಕ್ಷೇಪಗಳನ್ನು ಸಲ್ಲಿಸಲಿದ್ದು, ಇದಕ್ಕೆ ಸ್ಪಂದಿಸದಿದ್ದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದ.ಕ. ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಶನ್‌ನವರ ವಾದದ ಪ್ರಕಾರ, ನೆಹರೂ ಮೈದಾನವನ್ನು ಕ್ರೀಡಾ ಉದ್ದೇಶಕ್ಕಾಗಿ ದಾನಿಗಳು ನೀಡಿದ್ದು, ಕ್ರಿಕೆಟ್‌, ಹಾಕಿ ಹಾಗೂ ಫುಟ್‌ಬಾಲ್‌ ಕ್ರೀಡೆಗಳಿಗಾಗಿ ಇದನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. 

ಆದರೆ, ಈ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಕೋಳಿ ಹಾಗೂ ಮೀನು ಮಾರುಕಟ್ಟೆಯನ್ನು ಹಾಕಿ ಮೈದಾನಕ್ಕೆ (ಸರ್ವಿಸ್‌ ಬಸ್‌ ನಿಲ್ದಾಣ) ಸ್ಥಳಾಂತರಿಸಲಾಗಿತ್ತು. ತಾತ್ಕಾಲಿಕ ನೆಲೆಯಲ್ಲಿ ಖಾಸಗಿ ಬಸ್‌ ನಿಲ್ದಾಣವನ್ನೂ ಮಾಡಲಾಯಿತು. ಅದನ್ನು ತೆರವುಗೊಳಿಸಬೇಕು ಎಂದು ಕೆಲವು ವರ್ಷದ ಹಿಂದೆಯೇ ನ್ಯಾಯಾಲಯ ತೀರ್ಪು ನೀಡಿದ್ದರೂ ಇನ್ನೂ ಸಾಧ್ಯವಾಗದವರು, ಮುಂದೆ ಫುಟ್‌ಬಾಲ್‌ ಕ್ರೀಡಾಂಗಣದ ಪಕ್ಕದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಿದ ಬಳಿಕ ಅದನ್ನು ತೆರವುಗೊಳಿಸುತ್ತಾರೆ ಎಂಬುದನ್ನು ಯಾವ ಆಧಾರದಲ್ಲಿ ನಂಬಬೇಕು ಎನ್ನುವುದು ಅವರ ಪ್ರಶ್ನೆ.

ಸುಸಜ್ಜಿತ ಟರ್ಫ್‌ ಸ್ಟೇಡಿಯಂ
ಫುಟ್‌ಬಾಲ್‌ ಗ್ರೌಂಡ್‌ ಅನ್ನು ಸುಸಜ್ಜಿತ ಟರ್ಫ್‌ ಸ್ಟೇಡಿಯಂ ಆಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ತೀರ್ಮಾನಿಸಿ, ನಕ್ಷೆ ಕೂಡ ಸಿದ್ಧಪಡಿಸಲಾಗಿದೆ. ಅನುದಾನ ಕೂಡ ಮೀಸಲಿಡಲಾಗಿದೆ. ಶೀಘ್ರದಲ್ಲಿ ಈ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈದಾನ ಬದಲಾಗಲಿದೆ. ಮೈದಾನದ ಸುತ್ತ ಗ್ಯಾಲರಿ ನಿರ್ಮಿಸಲು ಹಾಗೂ ಆಟಗಾರರಿಗೆ ಫಾರ್ಮ್ ಆಫ್‌ ಮಾಡಲು ಜಾಗ ಬೇಕಾಗಿದೆ. ಜತೆಗೆ ಮೈದಾನಕ್ಕೆ ಹುಲ್ಲು ಹಾಸಿದ ಬಳಿಕ ಯಾವುದೇ ವಾಹನಕ್ಕೆ ಮೈದಾನದ ಒಳಭಾಗಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಆ ಸಂದರ್ಭ ಪಂದ್ಯಾಟ ವೀಕ್ಷಿಸಲು ಬರುವ ಪ್ರೇಕ್ಷಕರ ವಾಹನ ನಿಲ್ಲಿಸಲು ಪಾರ್ಕಿಂಗ್‌ ಸ್ಥಳವಾಗಿ ಈಗಿನ ಖಾಲಿ ಜಾಗವನ್ನು ಬಳಸಲು ಯೋಚಿಸಲಾಗಿದೆ.

ಸ್ಮಾರ್ಟ್‌ ಸೆಂಟ್ರಲ್‌ಗಾಗಿ ‘ತಾತ್ಕಾಲಿಕ’ದ ಕಿರಿಕಿರಿ! 
ಸ್ಟೇಟ್‌ಬ್ಯಾಂಕ್‌ನ ಸೆಂಟ್ರಲ್‌ ಮಾರುಕಟ್ಟೆ ಹಾಗೂ ಮಾಂಸ ಮಾರಾಟದ ಮಾರುಕಟ್ಟೆಗಳನ್ನು ಸಂಪೂರ್ಣ ತೆರವುಗೊಳಿಸಿ ಸ್ಮಾರ್ಟ್‌ಸಿಟಿ ಯೋಜನೆಯಡಿ 145 ಕೋ.ರೂ. ವೆಚ್ಚದಲ್ಲಿ ನೂತನ ಮಾರುಕಟ್ಟೆ ನಿರ್ಮಿಸಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗ ವ್ಯಾಪಾರ ನಡೆಸುತ್ತಿರುವವರಿಗೆ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸುವುದು ಆಡಳಿತ ವ್ಯವಸ್ಥೆಗೆ ಬಹುದೊಡ್ಡ ಸವಾಲು. ನೂತನ ಮಾರುಕಟ್ಟೆ ಆಗುವವರೆಗೆ ಅಲ್ಲಿನ ವ್ಯಾಪಾರಿಗಳಿಗೆ ಪುರಭವನದ ಹಿಂಬದಿಯ ‘ಬೀದಿ ಬದಿ ವ್ಯಾಪಾರಿಗಳ ವಲಯ’ದ 2,920 ಚದರ ಮೀಟರ್‌, ಫುಟ್‌ಬಾಲ್‌ ಮೈದಾನಕ್ಕೆ ತಾಗಿರುವ (ಪುರಭವನದ ಹಿಂಭಾಗ) 3,818 ಚ.ಮೀಟರ್‌ ಸಹಿತ ಒಟ್ಟು 6,761 ಚ.ಮೀಟರ್‌ ಜಾಗದಲ್ಲಿ ಸೆಂಟ್ರಲ್‌ ಮಾರುಕಟ್ಟೆ ಹಾಗೂ ಮಾಂಸ ಮಾರುಕಟ್ಟೆಯ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಯೋಚಿಸಲಾಗಿತ್ತು. ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಕೂಡ ವ್ಯಾಪಾರಿಗಳ ಜತೆಗೆ ನಡೆಸಲಾಗಿದ್ದು, ಇದಕ್ಕಾಗಿ 5.82 ಕೋ.ರೂ. ವೆಚ್ಚವಾಗುವ ಬಗ್ಗೆ ಅಂದಾಜಿಸಲಾಗಿತ್ತು. ಸೆಂಟ್ರಲ್‌ ಮಾರುಕಟ್ಟೆಯಲ್ಲಿ ತರಕಾರಿ-ಹಣ್ಣುಹಂಪಲು ಸಹಿತ 133 ಸ್ಟಾಲ್‌ ಗಳು, ಸಮೀಪದ ಮಾಂಸ ಮಾರುಕಟ್ಟೆಯಲ್ಲಿ 94 ಸ್ಟಾಲ್‌ಗ‌ಳು, ಸರ್ವಿಸ್‌ ಬಸ್‌ನಿಲ್ದಾಣ ಬಳಿಯ ಮೀನು ಮಾರುಕಟ್ಟೆಯಲ್ಲಿ 135 ಸ್ಟಾಲ್‌ಗ‌ಳಿವೆ.

ಗ್ರೌಂಡ್‌ ಹೊರ ಭಾಗದಲ್ಲಿ ಮಾತ್ರ
ಫುಟ್‌ಬಾಲ್‌ ಗ್ರೌಂಡ್‌ನ‌ ಹೊರಭಾಗ ಹಾಗೂ ಬೀದಿಬದಿ ವ್ಯಾಪಾರಿಗಳ ವಲಯದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಫುಟ್‌ಬಾಲ್‌ ಗ್ರೌಂಡ್‌ ಪಕ್ಕ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ ಆಕ್ಷೇಪಗಳು ಇಲ್ಲಿಯವರೆಗೆ ಬಂದಿಲ್ಲ. ಜತೆಗೆ ಕ್ರೀಡಾಂಗಣದ ಒಳಭಾಗದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಮಾಡುವುದಿಲ್ಲ. ಬದಲಾಗಿ ಕ್ರೀಡಾಂಗಣದ ಹೊರ ಆವರಣದಲ್ಲಿ ಮಾತ್ರ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ ಯೋಚಿಸಲಾಗಿದೆ.
– ಮಹಮದ್‌ ನಝೀರ್‌,
ಮನಪಾ ಆಯುಕ್ತರು

ಮೈದಾನ ಬಳಿ ಮಾರುಕಟ್ಟೆಗೆ ನಿರ್ಮಿಸದಿರಿ
ಫುಟ್‌ಬಾಲ್‌ ಗ್ರೌಂಡ್‌ನ‌ ಪಕ್ಕದ ಜಾಗದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಆಟದ ಮೈದಾನ, ಪಾರ್ಕ್‌ಗಳನ್ನು ಇತರ ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಎಂದು ಕಾನೂನಿದೆ. ಹೀಗಾಗಿ ಮೈದಾನದ ಬಳಿಯಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆ ನಿರ್ಮಿಸಲು ಅವಕಾಶ ನೀಡದಂತೆ ಆಕ್ಷೇಪಣೆಗಳನ್ನು ಸಲ್ಲಿಸಲಾಗುವುದು. ನಮ್ಮ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗದಿದ್ದರೆ ಕಾನೂನು ಹೋರಾಟ ಮಾಡಲಾಗುವುದು.
 – ಡಿ.ಎಂ. ಅಸ್ಲಾಂ,
ಅಧ್ಯಕ್ಷರು, ದ.ಕ. ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಶನ್‌

ದಿನೇಶ್‌ ಇರಾ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.