ಕರಾವಳಿಯಲ್ಲಿ ಮೀನಿನ ದರ ಏರಿಕೆ
ಕಾರ್ಮಿಕರ ಕೊರತೆಯಿಂದ ಮೀನುಗಾರಿಕೆ ಕುಸಿತ
Team Udayavani, Apr 21, 2019, 6:02 AM IST
ಮಂಗಳೂರು/ಉಡುಪಿ:ಲೋಕಸಭಾ ಚುನಾವಣೆಯ ಪರಿಣಾಮ ಕರಾವಳಿಯ ಮೀನುಗಾರಿಕೆಗೂ ತಟ್ಟಿದೆ. ಇಲ್ಲಿನ ಮೀನು ಗಾರಿಕೆಯಲ್ಲಿ ದುಡಿಯುವ ಬಹುತೇಕ ಕಾರ್ಮಿಕರು ಒಡಿಶಾ,ಕೇರಳ, ತಮಿಳುನಾಡು, ಆಂಧ್ರದವರಾಗಿದ್ದು, ತಮ್ಮ ರಾಜ್ಯಗಳಿಗೆ ಮತದಾನ ಮಾಡಲು ತೆರಳಿರುವುದರಿಂದ ಮೀನುಗಾರಿಕೆಗೆ ಕಾರ್ಮಿಕರ ಕೊರತೆ ಎದು ರಾಗಿದೆ. ಪರಿಣಾಮವಾಗಿ ಮೀನುಗಳ ಬೆಲೆಯೂ ಏರಿದೆ!
ಮೂರನೇ ಹಂತದ ಚುನಾವಣೆ ಎ. 23ರಂದು ಜರಗಲಿದ್ದು, ಒಡಿಶಾ ದಲ್ಲಿ ಮೊದಲ ಮೂರೂ ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಹಾಗಾಗಿ ಒಡಿಶಾದ ಮೀನುಗಾರ ಕಾರ್ಮಿಕರ ಕೊರತೆ ಎಪ್ರಿಲ್ 25ರ ವರೆಗೂ ಇರಬಹುದು ಎಂದು ಮಂಗಳೂರಿನ ಟ್ರಾಲ್‌ಬೋಟ್ ಮೀನುಗಾರರ ಸಂಘ ತಿಳಿಸಿದೆ. ಮಲ್ಪೆ ಬಂದರಿನಲ್ಲಿ 700ಕ್ಕೂ ಅಧಿಕ ಬೋಟುಗಳು, ಮಂಗಳೂರು ಬಂದರಿನಲ್ಲಿ 250ಕ್ಕೂ ಹೆಚ್ಚಿನ ಬೋಟುಗಳು ಲಂಗರು ಹಾಕಿವೆ. ಸಹಜವಾಗಿಯೇ ಮೀನಿನ ದರದಲ್ಲೂ ಏರಿಕೆಯಾಗಿದೆ.
ಮಂಗಳೂರಿನ
ಹೆಚ್ಚಿನ ಬೋಟ್‌ಗಳು
ಮಹಾರಾಷ್ಟ್ರ, ಗೋವಾ, ರತ್ನಗಿರಿ ಕಡೆಗೆ ತೆರಳುತ್ತವೆ. 11 ದಿನಗಳ ಬಳಿಕ ಮರಳಿ ಬರುವ ಪ್ರತಿಯೊಂದು ಬೋಟಿನಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದ ಮೀನುಗಳನ್ನು ಹೊತ್ತು ತರುತ್ತವೆ. ಆದರೆ ಬೋಟುಗಳ ಸಂಖ್ಯೆ ಹೆಚ್ಚಳ, ಹವಾಮಾನ ವೈಪರೀತ್ಯ ಕಾರಣದಿಂದಾಗಿ ಒಂದು ಟ್ರಿಪ್‌ನಲ್ಲಿ ಸುಮಾರು 75 ಸಾವಿರ ರೂ. ನಷ್ಟ ಉಂಟಾಗುತ್ತಿದೆ. ಈ ನಷ್ಟ ಸರಿದೂಗಿಸಲು ಅದರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದೆ.
ಶೇ. 30ರಷ್ಟು ಇಳಿಮುಖ
ಆಗಸ್ಟ್‌ನಿಂದ ಮೀನುಗಾರಿಕೆ ಆರಂಭವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 30ರಷ್ಟು ಮೀನುಗಾರಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಮೀನುಗಾರ ಮುಖಂಡ ಸತೀಶ್ ಕುಂದರ್. ಮೀನಿನ ಅಭಾವ ವಿಪರೀತವಾಗಿದೆ. ಮುಖ್ಯವಾಗಿ ಅತೀ ಹೆಚ್ಚು ಬೇಡಿಕೆಯಿರುವ ಅಂಜಲ್ ಮತ್ತು ಬಂಗುಡೆ ಮೀನು ಲಭ್ಯವಾಗುತ್ತಿಲ್ಲ ಎನ್ನುತ್ತಾರೆ ಅವರು.
ಮೀನಿನ ದರ ಏರಿಕೆ
ದ..ಕ., ಉಡುಪಿ ಮಾರುಕಟ್ಟೆಯಲ್ಲಿ ಅಂಜಲ್ ಮೀನಿಗೆ ಸಾಮಾನ್ಯ ದಿನಗಳಲ್ಲಿ ಒಂದು ಕೆ.ಜಿ.ಗೆ ಸುಮಾರು 600 ರೂ. ಇತ್ತು. ಇದೀಗ 800 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ಮೀನು ಕೆ.ಜಿ.ಗೆ 180 ರೂ. ಇತ್ತು. ಇದೀಗ 250 ರೂ.ಗೆ ಏರಿಕೆಯಾಗಿದೆ. ಮಧ್ಯಮ ಗಾತ್ರದ ಬಂಗುಡೆಗೆ ಈ ಹಿಂದೆ 90 ರೂ. ಇತ್ತು ಇದೀಗ 150 ರೂ.ಗೆ ಏರಿಕೆಯಾಗಿದೆ. ಕೊಡ್ಡಾಯಿ ಮಧ್ಯಮ ಗಾತ್ರದ ಮೀನಿಗೆ ಈ ಹಿಂದೆ ಕೆ.ಜಿ.ಗೆ 140 ರೂ.ಇತ್ತು. ಇದೀಗ 180 ರೂ.ಗೆಏರಿಕೆಯಾಗಿದೆ. ಬೂತಾಯಿ ದರ ಕೆ.ಜಿ.ಗೆ 150 ರೂ., ಬಂಗುಡೆ ಕೆ.ಜಿ.ಗೆ 180ರಿಂದ 200 ರೂ. ಇದೆ. ಅಂಜಲ್ ಮೀನಿನ ದರವೂ ದುಪ್ಪಟ್ಟಾಗಿದ್ದು, ಕೆ.ಜಿ.ಗೆ 800ರಿಂದ 1,200 ರೂ. ಇದೆ. ಮೀನುಗಳ ದರ ಹೆಚ್ಚಳ ಮತ್ತು ಲಭ್ಯತೆಯ ಕೊರತೆಯಿಂದ ನಗರದ ಕೆಲವೊಂದು ಮಾಂಸಾಹಾರಿ ಹೊಟೇಲ್‌ಗಳಿಗೆ ತೊಂದರೆ ಉಂಟಾಗಿದೆ.
ಮೀನುಗಳ ಅಲಭ್ಯತೆ ಮತ್ತು ಚುನಾವಣೆಯ ಪರಿಣಾಮದಿಂದ ಮೀನಿದ ದರ ಹೆಚ್ಚಳವಾಗಿದೆ. ಮತದಾನದ ಕಾರಣ ತಮಿಳುನಾಡು, ಆಂಧ್ರಪ್ರದೇಶದ ಮಂದಿ ತಮ್ಮ ಊರುಗಳಿಗೆ ತೆರಳಿದ್ದು, ಕಳೆದ ಒಂದು ವಾರದಿಂದ ಸುಮಾರು 250ರಷ್ಟು ಬೋಟ್‌ಗಳು ಸಮುದ್ರಕ್ಕೆ ಇಳಿದಿಲ್ಲ.
– ನಿತಿನ್ ಕುಮಾರ್,
ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ
ಸಮುದ್ರದಲ್ಲಿ ಮೀನಿನ ಕೊರತೆಯೂ ಎದುರಾಗಿರುವುದರಿಂದ ಮೀನುಗಾರರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ವರ್ಷದಿಂದ ವರ್ಷಕ್ಕೆ ಮೀನಿನ ಕೊರತೆ ಕಂಡುಬರುತ್ತಿರುವುದು ಆತಂಕಕಾರಿಯಾಗಿದೆ.
– ಸತೀಶ್ ಕುಂದರ್, ಮೀನುಗಾರರ ಸಂಘದ ಅಧ್ಯಕ್ಷರು, ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal: ಎಂಡಿಎಂಎ ಸಾಗಾಟ: ಮೂವರ ಬಂಧನ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.