ಪಡುಬಿದ್ರಿ: ಕಣಜದ ಹುಳುಗಳ ದಾಳಿ; ಮೀನುಗಾರ ನೀರಿಗೆ ಬಿದ್ದು ಸಾವು
Team Udayavani, Dec 15, 2022, 9:21 PM IST
ಪಡುಬಿದ್ರಿ: ನಡಿಪಟ್ಣ ನಿವಾಸಿ ವಾಸುದೇವ ಸಾಲ್ಯಾನ್ (65) ಅವರು ಗುರುವಾರ ಸಂಜೆ ಮೀನುಗಾರಿಕೆಗೆಂದು ಬಲೆ ಬೀಸಿ ಸಮುದ್ರದ ಬಳಿ ನಿಂತಿದ್ದಾಗ ಒಮ್ಮೆಲೆ ಕಣಜದ ಹುಳುಗಳ ಗುಂಪು ದಾಳಿ ನಡೆಸಿದೆ. ಪರಿಣಾಮ ಸಮುದ್ರದ ನೀರಿಗೆ ಬಿದ್ದು ಅವರು ಸಾವನ್ನಪ್ಪಿದ್ದಾರೆ.
ಈ ಹುಳುಗಳ ದಿಢೀರ್ ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ಸಮುದ್ರದತ್ತ ಓಡಿ ಹೋಗಿದ್ದರು. ಅದಾಗಲೇ ಕಣಜದ ಹುಳುಗಳು ಮುಖದ ತುಂಬಾ ಕಚ್ಚಿ ಅವರಿಗೆ ಗಂಭೀರವಾಗಿ ಗಾಯಗೊಳಿಸಿದ್ದವು ಎಂದು ಪೊಲೀಸ್ ವರದಿ ತಿಳಿಸಿದೆ.
ಎಲ್ಲರೊಂದಿಗೂ ಬೆರೆತು ಅನ್ಯೋನ್ಯವಾಗಿ ಮಾತನಾಡುತ್ತಿದ್ದ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ಅವರು ಹಲವಾರು ವರ್ಷಗಳಿಂದ ಕಾಡಿಪಟ್ಣ ಕೈರಂಪಣಿ ಫಂಡ್‌ನ ಸದಸ್ಯರಾಗಿ ಮೀನುಗಾರಿಕೆ ಕೆಲಸದಲ್ಲಿ ತೊಡಗಿಕೊಂಡಿದ್ದರು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.